Skip to main content

Posts

ಮಾಡಿದ್ದುಣ್ಣೋ ಮಹರಾಯ

  ಮಾಡಿದ್ದುಣ್ಣೋ ಮಹರಾಯ  ವೃದ್ದಾಶ್ರಮದ ಬಾಗಿಲಲ್ಲಿ ಕುಳಿತ ಸಾಗರನಿಗೆ ಅಂದೇಕೋ ಬೇಡ ಬೇಡವೆಂದರೂ ಹಳೆಯ ನೆನಪುಗಳು  ಮನದಲ್ಲಿ ಸಾಗರದ ಅಲೆಗಳಂತೆ ಉಕ್ಕಿ ಉಕ್ಕಿ  ಬರುತ್ತಿತ್ತು.  ಚಿಕ್ಕಂದಿನಿಂದ ತನ್ನನ್ನು ಮುದ್ದಿಸಿ ತನ್ನ ಬೇಕು ಬೇಡಗಳನ್ನು ಪೂರೈಸುತ್ತಾ ತಮ್ಮ ಆಸೆ ಅಕಾಕ್ಷೆಗಳನ್ನೆಲ್ಲ  ಬದಿಗೊತ್ತಿ ತನಗಾಗಿ ಕಷ್ಟಪಟ್ಟು ಹಗಲಿರುಳೂ  ಬೆವರು ಹರಿಸಿ ದುಡಿದ ತಂದೆಯನ್ನು  ವೃದ್ದಾಪ್ಯದಲ್ಲಿ ತಾನು ಅನಾಥಾಶ್ರಮಕ್ಕೆ  ಸೇರಿಸಿದಾಗ ಅವರು  ಎಷ್ಟು ಬೇಸರ ದುಃಖ ಪಟ್ಟಿರಬಹುದು ಎನ್ನುವ   ಒಂದು ಚಿಕ್ಕ ಯೋಚನೆ ತನಗೆ ಅಂದು  ಬರುತ್ತಿದ್ದರೆ ತಾನು ಇಂದು ಈ ವೃದ್ಧಾಶ್ರಮದಲ್ಲಿ  ಮಕ್ಕಳಿದ್ದು  ಈ ರೀತಿ ಅನಾಥನಂತೆ ದಿನ ಕಳೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿದಾಗ ಪಶ್ಹಾತ್ತಾಪ ದಿಂದ ಸಾಗರನ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯಿತು.ತಂದೆಯನ್ನು ತಾನು  ಅಂದು ನಡೆಸಿಕೊಂಡ ರೀತಿ ನೆನೆದು ಆತ ನಾಚಿಕೆಯಿಂದ ಮುಖ ಕೆಳಗೆ ಹಾಕಿ ಕುಳಿತುಕೊಂಡ    ಪಂಕಜಾ.ಕೆ ಮುಡಿಪು  ಕುರ್ನಾಡು.ದ.ಕ
Recent posts

ಮತ್ತೆ ಕೂಗಿತು ಕೋಗಿಲೆ

ಮತ್ತೆ ಕೂಗಿತು  ಕೋಗಿಲೆ               ಪಾರ್ಕಿನ ಕಲ್ಲಿನ ಬೆಂಚಿನಲ್ಲಿ ಕುಳಿತ ಶ್ರೀಪತಿರಾಯರ ಮನಸು ಇಂದೇಕೋ ಅಸ್ತವ್ಯಸ್ತವಾಗಿತ್ತು.ತಾನು ಹೊರಡುವಾಗ  ತನ್ನನ್ನೇ ದಿಟ್ಟಿಸಿದ ಆಕೆಯ ಕಣ್ಣುಗಳಲ್ಲಿ ತುಂಬಿದ  ನೀರು ಯಾಕಾಗಿ ಇರಬಹುದು?ಏಕೋ ಇತ್ತೀಚೆಗೆ ರತ್ನ  ಮೌನಿಯಾಗುತ್ತಿದ್ದಾಳೆ ಅರಳು ಹುರಿದಂತೆ ಮಾತನಾಡುತ್ತಿದ್ದ ಆಕೆ ಯಾಕೆ ಮೌನವಾದಳು? ಅದನ್ನು ತಿಳಿಯಬೇಕೆನ್ನುವ ಕುತೂಹಲವೂ ತನಗಿಲ್ಲ  ಯಾಕೆ ಅದನ್ನು ತಿಳಿಯಲು ತನಗಿರುವ ಅಹಂ ಅಡ್ಡಬಂತೆ?ತಾನು ತಪ್ಪಿದೆಲ್ಲಿ ಎಂದು ಯೋಚಿಸಬೇಕಿತ್ತು              ಅವಳಿಗೇನು ಕಡಿಮೆ ಮಾಡಿದ್ದೇನೆ ಉಡಲು ಉಣ್ಣಲು ಕೊರತೆಯಿಲ್ಲ ಅರಮನೆಯಂತ  ಮನೆಯಿದೆ ಕೆಲಸಕ್ಕೆ ಆಳು ಕಾಳುಗಳಿದ್ದಾರೆ ಇನ್ನೇನು ಬೇಕು ಎನ್ನುವ ದೊರಣೆ ನನ್ನದು .  ಆದರೆ ಇಂದೇಕೋ ರತ್ನ ವಿಶೇಷವಾಗಿ ಕಾಡುತ್ತಿದ್ದಾಳೆ ಎಂದು ಯೋಚಿಸುತ್ತಾ ಇದ್ದಾಗ.ಪಕ್ಕದಲ್ಲಿಯೇ ಕುಳಿತ ವೃದ್ಧ ದಂಪತಿಗಳ ಸರಸ ಸಲ್ಲಾಪದತ್ತ ಮನ  ಹೊರಳಿತು.        ವಿದ್ಯಾ ನೀನು ನನ್ನ ಬಾಳಿಗೆ ಬಂದ ದಿನದಿಂದವೇ ನನ್ನ ಬಾಳಲ್ಲಿ ಬೆಳದಿಂಗಳು ಮೂಡಿತು ಎಂದು ಹೇಳಿ ಮಡದಿಯನ್ನು ಬಿಗಿದಪ್ಪುವ ವೃದ್ಧನನ್ನು ಕಂಡಾಗ ಶ್ರೀಪತಿರಾಯರ ಮನಸ್ಸು ಕೂಡಾ ಹೌದಲ್ಲವೇ ರತ್ನ ತನ್ನ ಬಾಳಿಗೆ  ಬಂದ  ದಿನವೇ  ತನ್ನ ಬಾಳು  ಕೂಡಾ ಬೆಳಕಾಗಿತ್ತಲ್ಲ ಆದರೆ ತಾನು ಅದನ್ನು ಒಮ್ಮೆಯೂ ಆ ವೃದ್ದರಂತೆ ಅವಳೊಡನೆ ಹೇಳಿಲ್ಲ ಯಾಕೆ ತಾನು ಅವಳೊಡನೆ ಒಮ್ಮೆಯೂ ಪ್ರೀತಿಯ ಮಾತನಾಡಲಿಲ್ಲ ತಾನು ತಪ್ಪಿದ್ದೆಲ್ಲಿ ಎನ್ನು

ಕೊನೆಯಿಲ್ಲದ ದಾರಿ ಕಥೆ

21  ಕೊನೆಯಿಲ್ಲದ ದಾರಿ    ರಾಕೇಶನ ಕಾಲುಗಳು  ಕೊನೆಯಿಲ್ಲದ ಆ ದಾರಿಯಲ್ಲಿ ನಡೆಯುತ್ತಾ ಇದ್ದರೂ  ಮನಸು ಮಾತ್ರ ಕಳೆದು ಹೋದ  ದಿನಗಳನ್ನು   ಮೆಲುಕು ಹಾಕುತ್ತಿತ್ತು                      ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ರಾಕೇಶ ನಿಗೆ ಹಣದ ಬೆಲೆ ತಿಳಿದಿತ್ತು .ಆದ್ದರಿಂದ  ಶಾಲೆಗೆ ಹೋಗುತ್ತಿದ್ದಾಗಲೇ ಬೆಳಗ್ಗಿನ ಜಾವ  ಬೇಗನೆ ಎದ್ದು ಮನೆ ಮನೆಗೆ ಪೇಪರ್ ಹಾಕಿ ಸಂಪಾದನೆ ಮಾಡಿ ತನ್ನ ಶಾಲಾ ಪುಸ್ತಕ ಇತ್ಯಾದಿ ಸಣ್ಣಪುಟ್ಟ ಖರ್ಚುಗಳನ್ನು ಭರಿಸುತ್ತಿದ್ದ..                  ಓದಿನಲ್ಲಿ ಜಾಣನಾಗಿದ್ದ ರಾಕೇಶ್ ಪ್ರತಿ ತರಗತಿಯಲ್ಲು  ಪ್ರಥಮ ಸ್ಥಾನ ಬಂದು  ಎಸ್.ಎಸ್.ಎಲ್.ಸಿ ಯಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಆ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದ. ಆತನ ಮುಂದಿನ ಓದಿನ ಖರ್ಚನ್ನು ಸರಕಾರವೇ ಭರಿಸಿದ್ದರಿಂದ ರಾಕೇಶ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ  ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಹಾಗೂ ತನ್ನ. ಮನೆಯವರ ಬಡತನವನ್ನು ನೀಗಿಸಿದ್ದಲ್ಲದೆ  ತನ್ನಂತೆ ಬಡ  ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಲಾಗದ   ಎಷ್ಟೋ ಜನರನ್ನು ತನ್ನ ಖರ್ಚಿನಲ್ಲಿ ಓದಿಸಿದ್ದು . ಅವರೆಲ್ಲಾ ಇಂದು ಉತ್ತಮ ಕೆಲಸದಲ್ಲಿದ್ದು .ರಾಕೇಶನ ಬಗ್ಗೆ ಅಭಿಮಾನವಿಟ್ಟು ಕೊಂಡಿದ್ದರು.                     ಎಷ್ಟೊಂದು  ಸುಂದರವಾಗಿತ್ತು  ನನ್ನ ಸಂಸಾರ  ಪತ್ನಿ ರಮಾ ನನ್ನ ಬೇಕು ಬೇಡಗಳನ್ನು ತಾನು ಹೇಳುವ ಮುಂಚೆಯೇ ತಿಳಿದುಕೊಂಡು  ಮಾಡುತ್ತಿದುದರಿಂದ ತನಗೆ ಮನೆಯ

ಮೋಸ ಗಾರ ಕಥೆ

ಮೋಸಗಾರ ಹವಾನಿಯಂತ್ರಿತ  ಕೊಠಡಿಯಲ್ಲಿ ಕುಳಿತ ರಮ್ಯಳನ್ನು ಕಾಣಲು ಯಾರೋ ಮೋಹನ ಅನ್ನುವವರು  ಬಂದಿದ್ದಾರೆ ಎಂದು ಜವಾನ  ಬಂದು ತಿಳುಸಿದಾಗ ,ಒಂದು ಕ್ಷಣ ರಮ್ಯಳ ಮನಸು ಗಲಿಬಿಲಿಗೊಂಡಿತು .ತನ್ನ ಭಾವನೆಗಳನ್ನು ನಿಯಂತ್ರಿಸಿ ಆಕೆ ಜವಾನನಿಗೆ ಅವರನ್ನು ಒಳಗೆ ಕಳಿಸಲು  ಹೇಳಿ ತನ್ನ ಮೊಬೈಲ್ ಹಿಡಿದು ತಿರುಗು ಖುರ್ಚಿಯನ್ನು  ಬಾಗಿಲಿಗೆ ಬೆನ್ನು ಹಾಕುವಂತೆ ತಿರುಗಿಕೊಂಡು ಕುಳಿತು ಸಂಭಾಷಣೆಯಲ್ಲಿ ನಿರತಳಾದಳು.                ಇದ್ದಕ್ಕಿದ್ದಂತೆ ಮೇ ಐ ಕಂ ಇನ್ ಮೇಡಂ ಅನ್ನುವ ಗಂಭೀರ ಸ್ವರ ಕೇಳಿದಾಗ ರಮ್ಯಾ ಫೋನ್ ಗೆ ಕೈ ಅಡ್ಡ ಇಟ್ಟು  ಎಸ್ ಕಮಿನ್ ಟೇಕ್ ಯುವರ್ ಸೀಟ್ ಎಂದು ಹೇಳಿ ಪುನಃ ಸಂಭಾಷಣೆಯಲ್ಲಿ ನಿರತಳಾದಳು .ಕಾಲುಗಂಟೆಯಾದರೂ ಆಕೆ ಮಾತು ಮುಗಿಸದಾಗ ಆತ  ಮೆಲ್ಲಗೆ ಕೆಮ್ಮಿ ಮೇಡಂ ಎಂದು ಹೇಳಿದಾಗ ಆಕೆ ಫೋನ್ ನಲ್ಲಿ ಸೀ.ಯೂ ಲಾಟರ್ ಎಂದು ಹೇಳಿ  ಸರಕ್ಕನೆ ಈ ಕಡೆ ತಿರುಗಿದಾಗ ಎದುರು  ಕುಳಿತ  ಮೋಹನನ ಮುಖ ಒಂದು ಕ್ಷಣ ಗಲಿಬಿಲಿಯಿಂದ ವಿವರ್ಣವಾಯಿತು            .ಸಾವರಿಸಿಕೊಂಡು ಕುಳಿತಾಗ ರಮ್ಯಾ ಎಸ್   ಹೇಳಿ ಎಂದು ಗಂಭೀರವಾಗಿ ಹೇಳಿ ಟೇಬಲ್ ಮೇಲಿದ್ದ ಫೈಲ್ ನತ್ತ ದೃಷ್ಟಿ  ನೆಟ್ಟಳು.ಮೇಡಂ ದಯವಿಟ್ಟು ಕ್ಷಮಿಸಿ .ತಮ್ಮ  ಕಂಪನಿಯಲ್ಲಿ ನನಗೆ  ಒಂದು ಕೆಲಸ ಕೊಡಲು  ಸಾಧ್ಯವೇ .ದೈನ್ಯವೇ ಮೂರ್ತಿವೆತ್ತಂತೆ ಕುಳಿತ ಅವನನ್ನು ಕಂಡಾಗ ಒಂದು ಕ್ಷಣ ರೋಷ ಉಕ್ಕಿ ಬಂದರೂ ಮರುಕ್ಷಣವೇ ಕೋಪವನ್ನು ನಿಯಂತ್ರಿಸುತ್ತಾ ಇಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲವಲ್ಲ

ಮಂಥರೆಯ ಕುತಂತ್ರ ಪರಿವರ್ಧಿನಿ ಷಟ್ಪದಿ

ಮಂಥರೆಯ ಕುತಂತ್ರ  ಪರಿವರ್ಧಿನಿ ಷಟ್ಪದಿ ಕೋಸಲ ದೇಶದ ರಾಜನು  ದಶರಥ ಹಾಸವ ಬೀರುತ ಮಡದಿಯರೊಡನೆಯೆ ತೋಷದಿ ರಾಜ್ಯವ ಪಾಲಿಸುತಿದ್ದನಯೋಧ್ಯಾ ನಗರದಲಿ ಕೂಸೊಂದಿಲ್ಲದ ಚಿಂತೆಯು ಕಾಡಲು ಬೇಸರ ಮೂಡಿತರಸನಾ ಮನದಲಿ ಸಾಸಿರ ಮುನಿಗಳ ಕರೆಸುತಲವರಲಿ ಸಲಹೆಯ ಕೇಳಿದನು ಮಾಡಿದ  ಯಾಗವ ಪುತ್ರನ ಪಡೆಯಲು ಬೇಡಿದ  ದೇವನ ಚರಣಕೆ ನಮಿಸುತ ಹಾಡುತ  ನಾಮವ ಬಕುತಿಯಲವನನು ಮನದಲಿ ಧೇನಿಸುತ ಮಾಡಿದ ಯಜ್ಞದ ಪುಣ್ಯದ ಫಲದಲಿ ಮೂಡಿತು  ಗರ್ಭದಿ  ಮಕ್ಕಳ ಕಲರವ ದೂಡಿತು ರಾಜನ ಚಿಂತೆಯು ರಾಣಿಯರೆಲ್ಲರು ಹಡೆಯುತಲಿ ಮುದ್ದಿನ ಮಕ್ಕಳು ಬೇಗನೆ ಬೆಳೆಯಲು ಮುದ್ದಿಸಿ ಕಲಿಸಿದನವರಿಗೆ ವಿದ್ಯೆಯ ಗದ್ದುಗೆಯೇರುವ ಸಮಯವು ಬರುತಿರೆ ತೋಷವು ಮನದಲ್ಲಿ ಗದ್ದಲ  ಮಾಡುತ ಪುರಜನರೆಲ್ಲರು ಸಿದ್ಧತೆ  ಮಾಡಲು  ಸರಸರ ಸರಿಯುತ   ಸದ್ದಿಲ್ಲದೆಯೇ ನೆರೆದರು  ಹರುಷದಿ  ಹಾರಿಸಿ  ಬಾವುಟವ ಮಂಥರೆ ಮಾತನು ಕೇಳಿದ ಕೈಕೆಯಿ ಮಂಥನ ಮಾಡುತ ಮನದಲಿ ಯೋಚಿಸಿ ಪಂಥದಿ ಪಡೆದಿಹ ವರಗಳ ಕೇಳಲು ನಡೆದಳು ರಾಜನೆಡೆ ಅಂತಃಪುರದೆಡೆ ಬರುತಿಹ  ಸಖನೆಡೆ- -ಯಂತರ ಕಾಯುತ  ಕೇಳಿದಲೊಲವಲಿ ಚಿಂತೆಗೆ ಹಚ್ಚುವ ಮಾತೊಂದರುಹಲು ದಶರಥ  ನೊಂದಿಹನು ಪಂಕಜಾ.ಕೆ. ರಾಮಭಟ್

ತಾಳ್ಮೆಯಿರಲಿ

ತಾಳ್ಮೆಯಿರಲಿ ಎಷ್ಟು ಹೊತ್ತಿನಿಂದ ಅಲ್ಲಿ ಕುಳಿತಿದ್ದನೋ ಅವನಿಗೆ ನೆನಪಿಲ್ಲ ಇಹದ ಪರಿವೆಯೇ ಇಲ್ಲದೆ ಯಾವೊದೋ ಯೋಚನೆಯಲ್ಲಿ ಮುಳುಗಿದ್ದ  ಅವನನ್ನು ಹುಡುಕಿಕೊಂಡು ಬಂದ  ಗೆಳೆಯ ವೈಭವ ,ಇಲ್ಲಿ ಇದ್ದಿಯೇನೋ  ಬಡವ ನಿನ್ನನ್ನು ಎಲ್ಲೆಂದು ಹುಡುಕುವುದು. ಏನೋ ಮದುವೆಯಾಗಿ  ಇನ್ನೂ ಆರು  ತಿಂಗಳೂ ಆಗಿಲ್ಲ  ಈಗಲೇ ಹೀಗೆ ಇಹದ ಪರಿವೆಯಿಲ್ಲದೆ  ಕುಳಿತುಕೊಂಡರೆ ಮುಂದೇನು ಎನ್ನುತ್ತಾ ಕೀಟಲೆ ಮಾಡುತ್ತಾನೆ.              ಗೆಳೆಯನ ಕೀಟಲೆಗೆ ಮೌನವಾಗಿಯೇ ಇರುವ ಶರತ್ ನನ್ನು ಕಂಡು ಅಚ್ಚರಿಪಟ್ಟ ವೈಭವ ನಿಗೆ ಎಲ್ಲೋ ಏನೋ ತಪ್ಪಿದೆ ಇಲ್ಲದಿದ್ದರೆ ಶರತ್ ಈ ರೀತಿ ಮೌನವಾಗಿರುವುದೆಂದರೇನು? ಅರಳು ಹುರಿದಂತೆ ಮಾತಾನಾಡುವ ಶರತ್ ಎಲ್ಲಿ ಇಂದೀಗ ಮೌನದ  ಮೊರೆ ಹೋದ ಶರತ್ ಎಲ್ಲಿ ಎಂದು ಯೋಚಿಸಿ  ಹೇಗಾದರೂ ಗೆಳೆಯನ ಮನದ ಚಿಂತೆ ತಿಳಿಯ ಬೇಕೆಂದು ಅವನನ್ನು ಎಬ್ಬಿಸಿ ತನ್ನೊಂದಿಗೆ ಅವನನ್ನು ಒಂದು ಕಾಪಿ ಹೌಸ್ಗೆ  ಕರೆದೊಯ್ದು ಕಾಪಿ ತಿಂಡಿಗೆ ಹೇಳಿ ಅದು ಬರುವ ತನಕ ಮಾತನಾಡಿಸೋಣವೆಂದು  ಏನೋ ಶರತ್ ಇಷ್ಟೊಂದು ಮೌನವಾಗಿದ್ದಿಯಾ .ಏನು ನಿನ್ನ ಚಿಂತೆ ನನ್ನೊಡನೆ ಹೇಳಬಾರದೆ ಎಂದು ಕೇಳುತ್ತಾನೆ.           ಅಷ್ಟರಲ್ಲಿ ಕಾಪಿ ತಿಂಡಿ ಬಂದಿದ್ದರಿಂದ  ಗೆಳೆಯನಲ್ಲಿ ತಿಂಡಿ ತಿನ್ನಲು ಒತ್ತಾಯಿಸಿ ತಿನ್ನುತ್ತ ಇರುವಾಗ ಇನ್ನೊಮ್ಮೆ ಅವನನ್ನು ಮಾತಿಗೆಳೆಯುತ್ತಾನೆ. ಶರತ್  ತನ್ನ ಮನದ ಚಿಂತೆಯನ್ನು ಹೇಳಿ ನಮ್ಮಿಬ್ಬರ ಮಧ್ಯೆ ಇರುವ ಈ  ಬಿರುಕು ಕಂದಕವಾಗಬಹುದೇ ಅದನ್ನು ಹೇಗೇ ಮುಚ್ಚು

ರಾಮ ಪ್ರತಿಷ್ಠಾಪನೆ ಭೋಗಷಟ್ಪದಿ

  ರಾಮ ಪ್ರತಿಷ್ಠಾಪನೆ ಭೋಗ ಷಟ್ಪದಿ ತಾಮವನ್ನು ಕಳೆಯಲಿಕ್ಕೆ ರಾಮನಾಮ ಭಜಿಸುತಿದ್ದು ನೇಮದಿಂದ ಪೂಜೆ ಮಾಡೆ ನಮ್ಮ ಹರಸುವ ಕಾಮಿತಾರ್ಥವನ್ನುಕೊಡುವ ಭಾಮೆಯರಸ ರಾಮಚಂದ್ರ ನಾಮಜಪವ ಮಾಡುತಿರಲು ಮುಕುತಿ ಕೊಡುವನು ಮಂದಿಯೆಲ್ಲ ಸೇರಿಕೊಂಡು ಕುಂದುಬಾರದಂತೆ  ಭಜಿಸಿ ಕಂದ ಬಾಲರಾಮನನ್ನು ನುತಿಸಿ ಪಾಡುವ ಮುಂದೆ ನಿಂತು ಕಾಯುತಿದ್ದು ತಂದೆಯಂತೆ ಪಾಲಿಸುತ್ತ ಚಂದದಿಂದ  ಬಾಳಿಗೆಲ್ಲ ಬಣ್ಣ ಬಳಿವನು ದಶಕದಿಂದ ಕಾಯುತಿದ್ದ ಶಕುನವಿಂದು ಕೂಡಿ  ಬರಲು ಬಕುತಗೊಲಿದ ರಾಮಚಂದ್ರ ಮೊಗವ ತೋರಿದ  ಮುಕುಟ ಮಣಿಯ ತೊಡಿಸಲಿಕ್ಕೆ ರಕುತ ಕೋಡಿ ಹರಿಯ ಬಿಟ್ಟು ಶಕುತಿಯಿಂದ ಕಾದ ಪುಣ್ಯ ಫಲವ ಕೊಟ್ಟಿತು ಐದು ದೀಪಗಳನು ಹಚ್ಚಿ ಗೈದು ಪೂಜೆಯನ್ನು ನಾವು ಮೇದಿನಿಯಲಿ ರಾಮ ನಾಮವನ್ನು ಹರಡುವ ಮೋದಿಯೊಬ್ಬ  ಮಾಡಿ ಜಾದು ಕಾದಿ ವ್ಯಾಜ್ಯವನ್ನು ಬೇಗ ಕಾದು  ಕುಳಿತ ದಿನಕೆ ಕಣ್ಣು ಸಾಕ್ಷಿಯಾಗಿದೆ ಪಂಕಜಾ..ಕೆ. ರಾಮಭಟ್