Skip to main content

ಸಿಕ್ಕಲಿಲ್ಲ ಹೆಣ್ಣು

ಸಿಕ್ಕಲಿಲ್ಲ ಹೆಣ್ಣು

ಮೂವತೈದಾದರು.ನಿನಗೇಕಿನ್ನು ಮದುವೆ ಇಲ್ಲ
ಹಂಗಿಸಿ ಕಾಡಿಸಿ ನೋಯಿಸಿ ದರೆಲ್ಲ

ನೂರಾರು ಗಂಡಸರ  ಮುಂದೆ ನಿಂತು 
ವಧೂಪರೀಕ್ಷೆಗೆ  ಕೊರಳು ಒಡ್ಡಿ ನಿಂತು

ದಾಂಪತ್ಯದ ಮಧುರ ಕನಸನ್ನು ಹೊತ್ತು
ಪೋಣಿಸಿದ  ಕನಸುಗಳ ಹೂಮಾಲೆಕಿತ್ತು

ಛಿದ್ರವಾದಾಗ ಹರಿದ ಕಣ್ಣೀರ ಬಿಂದು
ಹೊಳೆಯಾಗಿ ಹೊಗೆಯಾಡಿತು ಅಂದು

ಅವಿವಾಹಿತರಾಗಿ ಅವಮಾನಿತರಾಗಿ
ಬಾಳಬೇಕಾಗಿ ಬಂದ ದುಃಸ್ಥಿತಿ ಗಾಗಿ

ಕಿವುಡಾಗಿತ್ತು ಸಮಾಜ ಇದಕೆಲ್ಲ ಅಂದು
ಸಿಗುತಿಲ್ಲ ಗಂಡಿಗೆ ಎಲ್ಲಿಯೂ ಹೆಣ್ಣು ಇಂದು

ಬೊಬ್ಬಿಡುತ್ತಿದ್ದಾರೆ ತಮಗೆಆಗಿದೆ ಅನ್ಯಾಯವೆಂದು
ಇದಕೆ ಕಾರಣ ಹೆಣ್ಣು ಹೆತ್ತವರೆಂದು

ಬಟ್ಟೆ  ತರಕಾರಿಯ ತರದಲಿ
ಹೆಣ್ಣನ್ನು ಆರಿಸುವ ಭರದಲಿ

ಎಷ್ಟು ಹೆಣ್ಣುಗಳ ಆಶೆ ಹೊಸಕಿದರೋ
ಹೆಣ್ಣು ಹೆತ್ತವರ ನಲುಗಿಸಿದರೊ

ಮಾಡಿದ ಪಾಪದ ಫಲವಿದ್ದೀತೇ ಅದು
ಗಂಡಿಗೆಸಿಗುತಿಲ್ಲಎಲ್ಲಿಯೂ ಹೆಣ್ಣುಇಂದು

ಪಂಕಜಾ.ಕೆ. ಮುಡಿಪು

Comments