Skip to main content

Posts

ಸ್ಕಂದ ಮಾತಾ ನಮೋಸ್ತುತೆ

ಐದನೇ ದಿನ ಸ್ಕಂದಮಾತಾ. ನಮೋಸ್ತುತೆ ಭಾಮಿನಿ ಷಟ್ಪದಿ ಸ್ಕಂದ ಮಾತಾ ಗೌರಿ ದೇವಿಗೆ ಚಂದದಿಂದಲಿ ಪೂಜೆ  ಮಾಡುವೆ ಬಂದ ಕಷ್ಟವು ಕಳೆದು ಮನಸಿಗೆ ಶಾಂತಿ ನೀಡಮ್ಮ ಅಂದ ಚಂದದ ಹೂಗಳರ್ಪಿಸಿ ನಿಂದೆ ನಿನ್ನಡಿಗೆರಗಿ ನಮಿಸುತ  ಮುಂದೆ ನನ್ನಯ ಬಾಳ ಹಾದಿಗೆ ಹೂವ ಹಾಸಮ್ಮ ಹಳದಿ ಬಣ್ಣದಿ ಮಿಂಚುತಿರುತಿಹ ನಳಿನ ನಾಭನ ರಮಣಿ ಪಾರ್ವತಿ ಕಳೆದು  ಬಿಡು ನೀ ನಮ್ಮ ಮನಸಿನ ಚಿಂತೆಗಳನೆಲ್ಲಾ  ಬೆಳೆದ ಫಲಗಳನರ್ಪಿಸುತ್ತಲಿ ಕಳೆದು ಕೊಳ್ಳುತ ಮನದ ತಮವನು ಬಳಿವೆ ನಿನ್ನಯ ಪಾದಚರಣಕೆ  ಹಳದಿ ಕುಂಕುಮವ ಶರಣು ಬಂದವರನ್ನು ಕಾಯುವ ಹರನ ಮಡದಿಗೆ ಕರವ ಮುಗಿಯುವೆ ಶಿರವ ಬಾಗುತ ಪಾದ ಕಮಲಕ್ಕೆರಗಿ. ಪೊಡಮಡುವೆ  ಪರಮ ಕರುಣೆಯ ಪ್ರೇಮ ಜ್ಯೋತಿಯು  ಕರೆದು ಕೊಡುವಳು  ಸುಖದ ಬಟ್ಟಲ ತೆರೆದ ಹೃದಯದಿ ನಾಮ ಜಪವನು ಮಾಡ್ವ ಬಕುತರಿಗೆ ರಿಕ್ತ ಮನದಲಿ ತುಂಬಿ ನಿನ್ನನು ಭಕ್ತಿಯಿಂದಲಿ  ಹಾಡಿ ಹೊಗಳುವೆ ಶಕ್ತನಾಗಿಸು ನಾಮ ಪಠಿಸಲು ಬೇಡಿ ಕೊಳ್ಳುವೆನು ರಕ್ತಚಂದನವನ್ನು ಧರಿಸಿಹ ರಕ್ತ ಬೀಜಾಸುರನ  ವಧಿಸಿದ ಶಕ್ತಿ ರೂಪಿಣಿ  ಮಾತೆ  ನೆನೆಯುವೆ ನಿನ್ನ ಚರಣವನು  ಪಂಕಜಾ.ಕೆ.ರಾಮಭಟ್ 15.10.2026
Recent posts

ಬ್ರಹ್ಮಚಾರಿಣಿಗೆ ನಮಿಸುವೆ

  ಬ್ರಹ್ಮಚಾರಿಣಿಗೆ ನಮಿಸುವೆ ಭೋಗ ಷಟ್ಪದಿ. ಬಿದಿಗೆ ದಿನದಿ ಬುವಿಗೆ ಬರುವ ಹದುಳ  ನೇತ್ರೆ ಗೌರಿ ದೇವಿ  ಪದಕೆ  ನಮಿಸಿ ಬೇಡಿಕೊಳುವೆ ಬ್ರಹ್ಮ ಚಾರಿಣಿ  ಎದೆಯ ಮೂಲೆಯಿದ್ದ ಹರನ  ಕದವ ತೆರೆದು ಬಕುತಿಯಿಂದ ಭರದಿ  ತಪವ ಮಾಡುತೊಲಿಸಿ ಕೊಂಡ ಮಾನಿನಿ  ಬಿಳಿಯ ವಸನವುಟ್ಟುಕೊಂಡು ಬಲದ ಕರದಿ ಜಪದ  ಮಾಲೆ  ಜಲದ ಪಾತ್ರೆ ಹಿಡಿದುಕೊಂಡು ತಪವ ಮಾಡಿದೆ ಮಲಿನಗೊಂಡ ತನುವ ತೊಳೆದು ಲಲಿತೆ ನಿನ್ನ ನುತಿಸುತಿರುವೆ ಕಳೆಯು ನಮ್ಮ ಕಷ್ಟಗಳನು  ಮಾತೆ ಪಾರ್ವತಿ ನವದಿನಗಳು ರಾತ್ರಿಯಲ್ಲಿ ಹವನ ಹೋಮ ಮಾಡುತಿರುವೆ ಬುವಿಗೆ ಬಂದು ಹರಸು ನಮ್ಮನೆಲ್ಲ ಕರುಣದಿ  ಭವದ ಬಂಧವನ್ನು ಕಳೆದು ಕವಿದ ತಮವ ಸರಿಸಿ ಬಿಡುತ ಭವಿತವೆಲ್ಲ ಸುಖದಿ ಬಾಳಲೆಮ್ಮ ಹರಸುನೀ ಪಂಕಜಾ.ಕೆ.ರಾಮಭಟ್

shailaputri

ಶೈಲಪುತ್ರಿ  ಭಾಮಿನಿ ಷಟ್ಪದಿ ಕಮಲ ಹೂವನು ಕರದಲಿಡಿದಿಹ ಕಮಲ ನಾಭನ ರಮಣಿ ಗೌರಿಯೆ ವಿಮಲ ಚರಿತಳೆ ಬೇಡಿ ಕೊಳ್ಳುವೆ ಸಿಂಹವಾಹಿನಿಯೇ ನಮನ ನಿನ್ನಯ ಪಾದ ಕಮಲಕೆ ಸುಮಗಳರ್ಪಿಸಿ ಕರವ ಮುಗಿಯುವೆ ಜನುಮ ಪಾವನವಾಯ್ತು ನನ್ನದು ತಾಯಿ  ಪಾರ್ವತಿಯೇ ವರದ ಹಸ್ತವ ತೋರಿ ನಗುತಲಿ ಧರೆಗೆ ಬರುವಳು ಮೊದಲ ದಿನದಲಿ ಕರವ ಮುಗಿಯುತ ಬೇಡಿಕೊಳ್ಳುವ ಶೈಲ ಪುತ್ರಿಯನು ಕರುಣೆಯಿಂದಲಿ ಕಾವಳಮ್ಮನು ಹರುಷದಿಂದಲಿ ವರವ ಕೊಡುವಳು ಭರದಿ ಕರಪಿಡಿದೆತ್ತಿ ಬಕುತರ ಮೊರೆಯನಾಲಿಸುತ ಪಂಕಜಾ. ಕೆ.ರಾಮಭಟ್

ನಯನ ಮನೋಹರ ನೋಟ

ನಯನ ಮನೋಹರ ನೋಟ ಚಂದದ ಕುಸುರಿಯ ಕೆಲಸವ ಮಾಡಿದ ತೆರದಲಿ ಹರಡಿದೆ ಮುಗಿಲು ಕೆಳಗಡೆ ತುಂಬಿದೆ ಕೆಂಪನೆ ಬಣ್ಣದ ಗಿಡಗಳು ಹರಡಿದ ಬಯಲು ರಸಿಕರ ಕಂಗಳ ಸೆಳೆಯುವ ನೋಟವು ಸ್ವರ್ಗದ ಐಸಿರಿಯಂತಿಹುದು ಸೃಷ್ಟಿಯ ಸೊಬಗಿನ ಸುಂದರ ನೋಟವು ಮೈಮನ  ಮರೆಸುತಲಿಹುದು ಬೇಸರಗೊಂಡಿಹ ಮನದಲಿ ಕನಸನು ಮೂಡಿಸಿ ಬಿಡುತಿದೆ ಚೆಲುವು ಮುದವನು ಕೊಡುತಲಿ ಹೊಸತನ ತುಂಬಿಸಿ ಮನವನು ತಣಿಸುತ ನಲಿವು ಸೂರ್ಯನ ಬಿಸಿಲಿಗೆ ಹೊಳೆಯುವ ರಸ್ತೆಯು ಸ್ವಚ್ಛ ಸುಂದರ ಪರಿಸರವಿದು ತರತರ ಬಣ್ಣದ ಹೂಗಳ ರಾಶಿಯು ಕಣ್ಮನ ಸೆಳೆಯುತಲಿಹುದು ಪಂಕಜಾ.ಕೆ. ರಾಮಭಟ್ ಮುಡಿಪು 

*ಆರೋಗ್ಯದ ಗುಟ್ಟು*ಒಂದು ಹನಿ ಪೋಲಿಯೋ ಬಿಂದು ಮಕ್ಕಳ ಪಾಲಿನ ಅಮೃತದ ಸಿಂಧು ಹಾಕಿರಿ ಮಕ್ಕಳಿಗೆ ಪೋಲಿಯೋ ಲಸಿಕೆಬಾರದಂತೆ ಅಂಗವಿಕಲತೆಯ ಕುಣಿಕೆಆರೋಗ್ಯವಂತರಾಗಿರಲು ನಾವುತಿನ್ನಬೇಕು ಆಹಾರದ ಜತೆ ಬೇವುಕಾಲಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಸಾಕಷ್ಟು ನೀರು ಕುಡಿಯುವುದು ನೋಡಿಸಮತೋಲನ ಆಹಾರ ಸೇವಿಸಬೇಕುಕಾಲಕಾಲಕ್ಕೆ ಊಟ ತಿಂಡಿ ಮಾಡಬೇಕುಹಣ್ಣು ಹಂಪಲುಗಳು ನಿಮ್ಮ ಆಹಾರದಲ್ಲಿರಲಿಆರೋಗ್ಯಕ್ಕಾಗಿ ಯೋಗ ನಡಿಗೆಯ ಅಭ್ಯಾಸವಿರಲಿಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ ಕುರುಕಲು ತಿಂಡಿಗಳ ಸೇವನೆಯನ್ನು ನಿವಾರಿಸಿಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿಕನಿಷ್ಠ ಆರು ಗಂಟೆಗಳ ನಿದ್ದೆ ಅವಶ್ಯಕದೇಹ ಮನಸಿಗೆ ಆರಾಮದಾಯಕಹಸಿವೆ ಆದಾಗ ಮಾತ್ರ ಆಹಾರ ಸೇವಿಸಿಮಾದಕ ವಸ್ತುಗಳ ಸೇವನೆ ನಿಲ್ಲಿಸಿ*ಪಂಕಜಾ.ಕೆ.ರಾಮ ಭಟ್**ಮುಡಿಪು.ಕುರ್ನಾಡು*

ಅಯೋಧ್ಯೆಯಲ್ಲಿ ರಾಮಮಂದಿರ

ಅಯೋದ್ಯೆಯಲ್ಲಿ ರಾಮ ಮಂದಿರ ಕೋಸಲ ದೇಶದ ರಾಜನು ದಶರಥ ತನ್ನಯ ಮಡದಿಯರೊಡನೆಯೆ ಕೂಡುತ ಬನ್ನವ  ಪಡದೆಯೇ ಬದುಕುತಲಿದ್ದನು  ಅಯೋಧ್ಯೆ ನಗರದಲಿ ||೦೧|| ಮಹಾ ಪರಾಕ್ರಮಿಯಾದ ರಾಜಗೆ ಮಕ್ಕಳಿಲ್ಲದ ಚಿಂತೆಯು ಕಾಡಲು ಕುಲಗುರು ವಸಿಷ್ಟರಾಣತಿಯಂತೆಯೆ ಮಾಡಿದ ಯಾಗವನು ||೦೨|| ಭಕುತಿ ಬಾವದಲಿ ಯಜ್ಞವ ಮಾಡಲು ಯಜ್ಞದ ಕುಂಡದಿ  ದಿವ್ಯ ಪುರುಷನು ಬಂದು ಚಾಚಿದನು ರಾಜನ ಕಡೆಗೆ ಪಾಯಸದ  ಬಟ್ಟಲನು ||೦೩|| ಕರದಲ್ಲಿರಿಸಿದ ಪ್ರಸಾದ ಪಾಯಸ ಮಡದಿಯರೆಲ್ಲರಿಗೆ ಹಂಚಿದನು ಪ್ರಸಾದ ಫಲದಿಂ ಸತಿಯರೆಲ್ಲರೂ ಹೆತ್ತರು  ಪುತ್ರರನು  ||೦೪|| ಶ್ರೀರಾಮ ಜನಿಸಿದ  ಪುಣ್ಯ ಸ್ಥಳದಲಿ ರಾಮನ ಮಂದಿರ ತಲೆಯನ್ನೆತ್ತುತ ರಾಮಜನ್ಮ ಭೂಮಿಯದು ಎನ್ನುತ  ಪ್ರಸಿದ್ದಿ ಪಡೆದಿಹುದು ||೦೫|| ಮತಾಂಧ ಮೊಘಲನು ರಾಜ ಬಾಬರನು  ಕೆಡವಿಯೆ ಬಿಡುತಲಿ ರಾಮ ಮಂದಿರವ ಕಟ್ಟಿಯೆ ಬಿಟ್ಟನು ಮಸೀದಿಯನ್ನು ತನ್ನಯ ಹೆಸರಲ್ಲೇ ||೦೬|| ವಾದ ವಿವಾದಗಳಿಗೆಡೆ ಕೊಡುತಲಿ ದಶಕ ದಶಕಗಳು ಕಳೆದೂ ಹೋದವು ಸಾವಿರ ಸಾವಿರ ಕರಸೇವಕರು ಒಡೆದರು ಕಟ್ಟಡವ ||೦೭|| ಕೂಡಿದರೆಲ್ಲರು ಒಂದೊಂದಾಗಿಯೆ ಕಟ್ಟಡ ಕಟ್ಟುವ ಸಾಮಗ್ರಿಯೊಂದಿಗೆ  ಗೆದ್ದು ಭೂಮಿಯ ಗೈದು ಬಿಟ್ಟರು  ಶಂಕು ಸ್ಥಾಪನೆಯ ||೦೮|| ಶಿಲೆಗಳು ಸಾರಿವೆ ರಾಮನ ಮಹಿಮೆಯ ನಾಗರ ಶೈಲಿಯ ವಾಸ್ತು ಶಿಲ್ಪದಲಿ ಕಟ್ಟಿದ ಆಕೃತಿ ಜಗತಿನ ಜನಗಳ ಗಮನವ ಸೆಳೆದಿಹುದು ||೦೯|| ರಾಮನಾಮದ ಉದ್ಘೋಷ ಮೊಳಗುತ ಪ್ರಪಂಚದೆಲ್ಲೆಡ...

ಪ್ರೇಮಿಗಳ ಸಲ್ಲಾಪ ಭಾವಗೀತೆ

ಪ್ರೇಮಿಗಳ ಸಲ್ಲಾಪ   ಚಂದಿರನು ಬಾನಲ್ಲಿ ಮೋಡಗಳ ಎಡೆಯಲ್ಲಿ ನಸುನಗುವ ಬೀರುತ್ತ ಬರುತಿರುವನು ಹುಣ್ಣಿಮೆಯ ದಿನದಲ್ಲಿ  ತಾರೆಗಳ   ಜತೆಸೇರಿ ಬೆಳದಿಂಗಳ ಬೆಳಕನ್ನು  ಹರಿಸುತಿಹನು ಶಶಿ ಕಿರಣ ಸೋಕುತಿರೆ ಕೊಳದಲ್ಲಿ ತುಂಬಿರುವ ನೈದಿಲೆಯು  ದಳ ತೆರೆದು ಅರಳುತ್ತಿದೆ ಶಶಿಯೊಡನೆ ಬೆರೆಯುತ್ತ ಚೆಲ್ಲಾಟವಾಡುತ್ತ   ನೋಡುಗರ ಮೈಯನ್ನು ತಾ  ಮರೆಸಿದೆ  ಬೆಳದಿಂಗಳ ಬೆಳಕು ಧರೆಯನ್ನು ತಬ್ಬುತಿ ರೆ ಪ್ರೇಮಿಗಳು ಮೈಮರೆತು ಕುಳಿತಿರುವರು ಚೆಂದುಟಿಯ ರಸವನ್ನು ಮೈಮರೆತು ಸವಿಯುತ್ತ ರಸಗಳಿಗೆಯಲ್ಲಿ ಮೈ ಮರೆತಿರುವರು ಪ್ರೇಮಿಗಳ ಸರಸವನು ನೋಡುತ್ತ ಚಂದಿರನು ಮೋಡಗಳ ಮರೆಯಲ್ಲಿ ಮುಖ ಮರೆಸಿದ ಒಲವನ್ನು ಸುರಿಸುತ್ತ    ತಿಂಗಳಿನ ಬೆಳಕಿನಲಿ ನವ ಜೋಡಿಗಳಿಗೆ ತಾ ಸಹಕರಿಸಿದ ಪಂಕಜಾ.ಕೆ.ರಾಮಭಟ್