ಚಂದಿರ
ಕಾರಿರುಳ ರಾತ್ರಿಯಲಿ
ಮೋಡದ ಮರೆಯಿಂದ
ಇಣುಕುತ ಬರುತಿಹನು
ಬೆಳ್ಳಿಯತಟ್ಟೆಯ ತರದಲಿ ತೇಲುತ
ತಾರೆಗಳನೊಡನಾಡುತ ಬರುತಿಹನು
ರಸಿಕರ ಎದೆಯಲಿ ಕನಸನು ತುಂಬುತ
ಮೈಮನಕೆಲ್ಲಾ ತಂಪನು ತರುತಿಹನು
ಒಲವರಸವನು ಹರಿಸುತ ಮನದಲಿ
ಸಂತಸ ಸಂಭ್ರಮ ತುಂಬುವನು
ಬಾನಲಿಇಣುಕುವ ಚಂದ್ರನ ಕಂಡು
ತನ್ನೊಡನಾಡಲು ಬರುವನು ಎಂದು
ನೈದಿಲೆ ಮೊಗವನು ಅರಳಿಸಿತು
ಮುಗ್ದ ಮಗುವಿನ ತೆರದಲಿ ನಗುತ
ಜೀವಕೆ ಉಲ್ಲಾಸವ ತುಂಬುವನು
ಮೋಡದ ಮರೆಯಲಿ
ಇಣುಕುವ ಚಂದ್ರನ ಕಾಣುತ
ನನ್ನನು ನಾನೇ ಮರೆಯುವೆನು
ಪಂಕಜಾ.ಕೆ
Comments
Post a Comment