Skip to main content

ಭೂತ ಹಾಸ್ಯಕಥೆ ನವಪರ್ವದಲ್ಲಿ ಉತ್ತಮ

ಭೂತ   (ಹಾಸ್ಯ ಕಥೆ)

ಅದೊಂದು ಅಮಾವಾಸ್ಯೆ ಯ ರಾತ್ರಿ ಪಕ್ಕದ ಊರಿನಿಂದ ಕೆಲಸ ಮುಗಿಸಿ ಒಳಗಿನ ದಾರಿಯಲ್ಲಿ ಮನೆಕಡೆ ಬರುತ್ತಿದ್ದ ಸಂಜೀವನಿಗೆ ರಾತ್ರಿಯ ಆ ನೀರವತೆಯಲ್ಲಿ  ಒಬ್ಬನೇ ನಡೆದು ಬರುವಾಗ ಅವರಿವರು ಹೇಳಿದ ಭೂತದ ಕತೆ ನೆನಪಾಗಿ ತುಂಬಾ ಭಯಪಡುತ್ತ ನಡೆಯುತ್ತಿದ್ದ .ಇದ್ದಕ್ಕಿದ್ದಂತೆ ಆತನ ಶಾಲನ್ನು ಯಾರೋ ಎಳೆದಂತಾಯಿತು ಆತ ಭೂತವೇ ಇರಬಹುದು ಅಂತ ಹೆದರಿ ಒಂದೇ ಉಸುರಿಗೆ ಮನೆ ಕಡೆ ದೌಡಾಯಿಸಿದ . ಬರುತ್ತಾ ಒಮ್ಮೆ ಹಿಂತಿರುಗಿ ನೋಡಿದಾಗ ಬಿಳಿಯ ಬಟ್ಟೆ ನಡೆದಾಡುವಂತೆ ಕಂಡಿತು ಆತನಿಗೆ ಭಯದಿಂದ ಉಸಿರು ಕಟ್ಟಿದಂತಾಯಿತು. ಸಾವರಿಸಿಕೊಂಡು ಹಿಂತಿರುಗಿ  ನೋಡದೆ ಸರ ಸರವೆಂದು ಮನೆ ತಲುಪಿಸದನೆ ಉಸ್ಸಪ್ಪ ಎಂದು ಕುಳಿತೇ ಬಿಟ್ಟ ಮನೆಯವರೆಲ್ಲ ಗಾಬರಿಯಿಂದ ಬಂದು ವಿಚಾರಿಸಲು ಆತ ನಡೆದ ವಿಚಾರ ತಿಳಿಸಿದ .ಭೂತ ಪಿಶಾಚಿಗಳ ಬಗ್ಗೆ ನಂಬಿಕೆ ಇಲ್ಲದ ಆತನ ಗೆಳೆಯ ಶ್ಯಾಮ್ ,ಇದನ್ನು ಕೇಳಿ ನಕ್ಕು ಭೂತನು ಇಲ್ಲ ಪಿಶಾಚಿನೂ ಇಲ್ಲ  ನಾಳೆ ಬೆಳಿಗ್ಗೆ ನೋಡೋಣ ಎಂದು ಸಮಾಧಾನ ಪಡಿಸಿದ. ಮರುದಿವಸ ಬೆಳಿಗ್ಗೆಯೇನಿನ್ನೆ ಸಂಜೀವ ಬಂದ ದಾರಿಯಲ್ಲಿ ಹೋಗಿ ನೋಡಿದರೆ ಸಂಜೀವನ ಶಾಲು  ಒಂದು ಮುಳ್ಳುಕಂಟಿಗೆ ಸಿಕ್ಕಿ ಹಾರಾಡುತ್ತಿತ್ತು .ಅದನ್ನು ಕಂಡು ಎಲ್ಲರೂ ನಕ್ಕಿದ್ದೆ ನಕ್ಕಿದ್ದು.
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

Comments