Skip to main content

ಬಡತನ ಕಥನ ಕವನ ಕೊಡಗಿನ ಗೆಳತಿ

 ಬಡತನ
 ಕಥನ ಕವನ
 
ಬಡತನದ  ಬವಣೆಯದು
ಬಳಲುತಿವೆ  ಕಂದಮ್ಮಗಳು
ಇರಲೊಂದು ಸೂರಿಲ್ಲ 
ಉಡಲು  ಒಳ್ಳೆಯ ಬಟ್ಟೆಬರೆಯಿಲ್ಲ

ಅಲೆಮಾರಿ ಜೀವನವು
ಬೇಡಿತಿನ್ನುವುದೇ ಕಾಯಕ
ಪೈಪಿನ ಒಳಾಂಗಣವ ನ್ನೇ
ಹಾಸಿಗೆಯಾಗಿಸಿ ದಿನವ ತಳ್ಳುವರು

ಉಡಲು ಉಣ್ಣಲು ಕೊರತೆ
ಮಾಸಿಲ್ಲ ಮುಖದ ನಗು
ಬೇಡಿ ತಂದ ತಿಂಡಿ ತೀರ್ಥಗಳ
ಹಂಚಿ ತಿನ್ನುತ  ಜೀವ ಸವೆಸುವರು

ತಂದೆ ತಾಯಿಗಳಿಲ್ಲ  
ಇರಲೊಂದು ಸೂರಿಲ್ಲ
ಅಕ್ಕ ಕೊಟ್ಟುದ ತಿಂದು 
ಖುಷಿಯಪಡುತಿಹರು

ಜ್ಞಾನ ದೀವಿಗೆ ಬೆಳಗಿದೆ
ವಿದ್ಯೆ ಕಲಿಯಲು ಮನವಿದೆ
ಚಿಂದಿ ಆಯುವ ಇವರಿಗೆಲ್ಲಿದೆ
ಬೇಕೆನಿಸಿದುದನು ಪಡೆವ ಹಕ್ಕು

ಪಂಕಜಾ.ಕೆ.ಮುಡಿಪು

Comments