Skip to main content

ಚಿತ್ರಕವನ ಮುತ್ತಿನ ಮಾಲೆ ಕಾವ್ಯಕೂಟ

ಕಾವ್ಯಕೂಟ ಸ್ಪರ್ಧೆಗಾಗಿ

ಮುತ್ತಿನ ಹಾರ
 (ಚಿತ್ರಕ್ಕೊಂದು ಕವನ)

ಇಬ್ಬನಿಯು ತಬ್ಬಿರುವ 
ವನರಾಜಿಯ  ಹಸಿರ ಸಿರಿ
ಭೂತಾಯಿ ಮಂಜಿನಲಿ
 ಮಿಂದೆದ್ದ  ಸುಂದರಿ

ಭೂರಮೆಯ ಸಿಂಗಾರಕೆ
ವರುಣ ಕಳಿಸಿದ  ಮುತ್ತಿನಹಾರ
ಇನಿಯನೊಲವಿನ ಒಡವೆ
ಧರಣಿ ದೇವಿಯ ಕೊರಳ ಹಾರ

ಅದ್ಭುತ ಕಲಾಕಾರನ ಜೋಡಣೆ
ಪ್ರಕೃತಿ ನಿರ್ಮಿತ  ಸುಂದರ ಹಾರ
ದವಳಾದ್ರಿಯ ಸೊಬಗು ಕಣ್ಣು ತುಂಬಿದೆ
ಪ್ರಕೃತಿ ವಿಸ್ಮಯಕೆ ಮನ ಬೆರಗಾಗಿದೆ

ಒಲವಿನೊಸಗೆಯು ತಂದಿದೆ ಅಮಲು
ಇಮ್ಮಡಿಸಿದೆ ಇಳೆಯ ಸೌಂದರ್ಯ 
ಬಾಂದಳದ ತುಂಬೆಲ್ಲ ಕಟ್ಟಿದ ತೋರಣ
ಮನಸು ತುಂಬಾ ಕನಸುಗಳ ಹೂರಣ

ಪಂಕಜಾ.ಕೆ.ಮುಡಿಪು

Comments