Skip to main content

ಕರುನಾಡ ಹಣತೆ ಕೂಡು ಕುಟುಂಬ

ಕರುನಾಡ ಹಣತೆ ಬಳಗದ  ಸ್ಪರ್ಧೆಗಾಗಿ

ಕೂಡು ಕುಟುಂಬ

ಕೂಡಿ ಬಾಳುವುದೇ  ಇದರ ಸೂತ್ರ
ಪ್ರೀತಿ ಒಗ್ಗಟ್ಟುಗಳೇ ಮೂಲಮಂತ್ರ

ಅವಿಭಕ್ತ ಕುಟುಂಬದ ಆಶಯವ್ಯಕ್ತ
ಎಲ್ಲರೂ ಒಂದಾಗಿ ಬಾಳುವುದೇ ಸೂಕ್ತ

ಉತ್ತಮ ಸಂಸ್ಕೃತಿರೂಪಿಸುವ ಕಾರ್ಯಾಗಾರ
ಅವಿಭಕ್ತ ಕುಟುಂಬವೆಂಬ ಮಾಯಾಗಾರ

ಅದ್ಬುತ ತುಂಬಿದ ಜೀವನದ ಸಾರ
ಆಗಲಾರದೆಂದಿಗೂ ಜೀವನ ಬಾರ

ಕೂಡು ಕುಟುಂಬವು ಭದ್ರತೆಯ ನೆಲೆವೀಡು
ಕಷ್ಟ ಸುಖದಲಿ ಹೆಗಲಾಗುವ ಭಾವಬೀಡು

ಅಜ್ಜಯಜ್ಜಿಯರ ಮಾರ್ಗದರ್ಶನದಲ್ಲಿ ಮಗು ನಿರಾಳ
ಪ್ರೀತಿ ಮಮತೆಯ ರಕ್ಷಣೆಯಲ್ಲಿ ಬಾಳಾಗದು ಕರಾಳ

ಶಿಥಿಲಗೊಳ್ಳುತ್ತಿದೆ  ಇಂದೀಗ ಈ  ಅನು ಬಂಧ
ಸ್ವತಂತ್ರ ಮನೋಭಾವ ದ ಜನರೇ ಇದಕ್ಕೆಕಾರಣ

ನಾನು ನನ್ನದೆನ್ನುವ ಸ್ವಾರ್ಥ ತುಂಬಿದ ಮನವು
ಹೊಂದಾಣಿಕೆಯ ಕೊರತೆಯಲಿ ನರಳುತಿರುವವು

ಪಾಶ್ಚಿಮಾತ್ಯಸಂಸ್ಕೃತಿಯ  ಕೆಟ್ಟ ಪರಿಣಾಮವಿದು
ವಿಭಕ್ತ ಕುಟುಂಬಗಳು ಹೆಚ್ಚಳವಾಗುತ್ತಿರುವುದು

ಒಬ್ಬಂಟಿ ಯಾಗಿರುತ ಬಾಳಲೇನಿದೆ  ಸೊಗಸು
ಮೌನ ಸಾಮ್ರಾಜ್ಯದಲಿ ತುಂಬಿದೆ ಇರುಸು ಮುರುಸು

ಹಬ್ಬ ಹರಿದಿನಗಳಲ್ಲೂ ಮನೆ ಭಣ ಭಣ
ತೀರಿಸಲಾದೀತೆ ಹೆತ್ತ ತಂದೆ ತಾಯಿಯ ಋಣ

ಪಂಕಜಾ.ಕೆ.ಮುಡಿಪು

ಹೆಸರು...ಪಂಕಜಾ.ಕೆ.ಮುಡಿಪು
ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

Comments