Skip to main content

ರಾಧಾ ಮಾಧವ

 ರಾಧಾ ಮಾಧವ  20..04.2023

ಕರದಲಿ ಹಿಡಿದಿಹ ತುಳಸಿಯ. ಮಾಲೆಯ
ಮುರಳಿಯ ಕೊರಳಿಗೆ ತೊಡಿಸುತಲಿ
ಕರೆದಳು ಸರಸಕೆ ಕಣ್ಣಲಿ ರಾಧೆಯು
ಹರಿಸುತ ಒಲವನು ಕಂಗಳಲಿ

ಮಾಧವ ನುಡಿಸಲು  ಮುರಳಿಯ ಗಾನವ
ಬಾಧೆಯು ಕಳೆಯಿತು ರಾದೆಯದು
ಗಾದಿಯನೇರುವ ಬಯಕೆಯು ಇಲ್ಲದೆ
ಮೇದಿನಿ ಒಲಿದಳು  ಕೃಷ್ಣನನು

ಯಮುನೆಯ ತೀರದಿ ಸರಸವನಾಡುತ
ಜಮುನೆಯು ಮೈಮನ ಮರೆಸಿದಳು
ತಮವನು ಕಳೆಯುತ ಸರ್ವವನರ್ಪಿಸಿ
ಕುಮುದಿನಿ   ಒಲವನು ಹರಿಸಿದಳು

ಬಂಧುರವೆನಿಸುವ ಒಲವನು ಕಾಣುತ
ಸುಂದರ ಕಾವ್ಯವ  ಬರೆಯಿಸಿತು
ಮಂದಿಯರೆಲ್ಲರ ಮನವನು ಅರಳಿಸಿ
ಕುಂದಿದ ಜೀವವ  ಅರಳಿಸಿತು

ಪಂಕಜಾ.ಕೆ. ರಾಮಭಟ್.ಮುಡಿಪು

Comments