ನೀಲ ಬಾನಲಿ ಹೊಳೆಯುತ ಬಂದ
ಮೇಲೇರುತ ಭುವಿಗೆ ಬೆಳಕನು ತಂದ
ಜೀವರಾಶಿಗಳಿಗೆಲ್ಲ ಖುಷಿಯನು ತಂದ
ಮೈಯ ಕಣ ಕಣಗಳಲಿ ಬಿಸುಪನು ತಂದ
ಬೆವರಿನ ಧಾರೆಯ ಹರಿಸುತ ನಿಂದ
ಹಗಲಿನ ಕೆಲಸಕೆ ಕಾಂತಿಯ ತಂದ
ಕರಿಮೋಡಗಳ ಎಡೆಯಲಿ ಇಣುಕಿ
ಪಡುಗಡಲಲಿ ಮುಖವನುಮರೆಸಿ
ರಾತ್ರಿಯ ನಿದ್ರೆಗೆ ಜಾರಲು ಬಯಸಿ
ರವಿ ಮುಗಿಸಿದನು ಹಗಲಿನ ಪಯಣವನು
ಎಲ್ಲಡೆ ತುಂಬಿತು ರಾತ್ರಿಯ ಮೌನ
ಮೌನದಶಾಂತಿಗೆ ಕಾಂತಿಯ ತುಂಬುತ
ಶಶಿ ಉದಿಸಿದನು ನಭದಲಿ
ನೈದಿಲೆ ತನ್ನಯ ದಳಗಳ ಬಿಡಿಸಿ
ಸ್ವಾಗತ ಕೋರಿತು ಚಂದ್ರನಿಗೆ
ತಾರೆಗಳನೊಡನಾಡುತ ಬಂದನು ಭುವಿಗೆ
ಕಂಪಿನ ತಂಪನು ಸುರುಸಿದ ಇಳೆಗೆ
ಹಾಲಿನ ಬೆಳಕು ತುಂಬಿದ ಭುವಿಗೆ
ರಾತ್ರಿಯ ರಾಣಿ ಬಿರಿದರಳಿ
ಮೊಲ್ಲೆ ಮಲ್ಲಿಗೆ ಕಂಪನು ಸೂಸಿ
ಪರಿಮಳ ಗಂಧವ ಎಲ್ಲೆಡೆ ಹರಡಿ
ರಾತ್ರಿಯ ಸೊಬಗನು ಹೆಚ್ಚಿಸಿತು
ಚಂದ್ರನ ತಂಪು ಇಳೆಯನು ತುಂಬಿ
ಜೀರುಂಡೆಗಳ ಗಾನವು ತುಂಬಿ
ಸ್ವರ್ಗವೇಧರೆಗಿಳಿದಂತಮೋಹಕ ಕಾಂತಿ
ಇಳೆಯಲಿ ತುಂಬಿತು ಶಾಂತಿ
ಪಂಕಜಾ ಕೆ ಮುಡಿಪು ಕುರ್ನಾಡು
Comments
Post a Comment