Skip to main content

ಕೈತೋಟ

ಕೈತೋಟ

ನನ್ನ ಮನೆಯಲೊಂದು
ಪುಟ್ಟ ತೋಟವಿರುವುದು
ಬಣ್ಣಬಣ್ಣದಹೂಗಳಿಂದ
ತುಂಬಿ ಕಣ್ಣ ಸೆಳೆಯುವುದು

ಹೂವ ಜೇನ ಸವಿಯಲೆಂದು ನಿತ್ಯ
ಪುಟ್ಟ ಪುಟ್ಟ ಹಕ್ಕಿಗಳು ಹಾರಿಬರುವುವು
ಬಣ್ಣ ಬಣ್ಣದದುಂಬಿಗಳುಜತೆಗೆ ಇರುವವು
ಹೂವಿಂದ ಹೂವಿಗೆ ಹಾರುತಿರುವುದು

ಬೆಂಡೆ ತೊಂಡೆ ಬಸಳೆಎಂದುತರ ತರದ
ತರಕಾರಿಗಳ ಬೆಳೆಯುತಿರುವೆನು
ಹಸಿರು ಸೊಪ್ಪುಗಳುಕೂಡ ಜತೆಯಲಿರುವುದು
ನೋಡಲೆರಡು ಕಣ್ಣುಗಳು ಸಾಲದಾಗಿದೆ

ನಿತ್ಯ ಅಡಿಗೆ ಗಾಗಿ ಇದನು  ಕೊಯ್ಯುತಿರುವೆನು
ಬಗೆ ಬಗೆಯ ಅಡಿಗೆ ಗಳ ಮಾಡಿ ತಿನುವೆ ವು
ನಾನು ಬೆಳೆದುದೆಂದುಇದರ ರುಚಿಯುಹೆಚ್ಚುದು
ಎರಡುಹೊತ್ತು ಕೆಲಸ ಮಾಡಿ ದಣಿಯುತಿರುವೆನು

ಇದುವೆಒಂದುಮೈಮನಕೆ ಯೋಗ ವಾಗುವುದು
ತೋಟದಲ್ಲಿದುಡಿಯುತಿರಲುಖುಷಿಯುಸಿಗುವುದು
ನನ್ನ ತೋಟದಲ್ಲಿ ತಿರುಗಿ ಹೊತ್ತು  ಕಳೆವೆನು
ಮೈ ಮನಕೆ ಉಲ್ಲಾಸ ತುಂಬಿ ಬರುವುದು

ಸ್ವಚ್ಛ ಶುದ್ಧ ಗಾಳಿ ಸುತ್ತ ಮುತ್ತ ತುಂಬುವುದು
ಕೈತೋಟ ಒಂದು ಕ್ರಾಂತಿಯಾಗಲಿ
ಪ್ರತಿಯೊಬ್ಬರಿದನು ತಿಳಿದು ತೋಟ ಬೆಳೆಸಿರಿ
ಸಾವಯವ ತರಕಾರಿ ಬೆಳೆ ದು ತಿನ್ನಿರಿ

ಆರೋಗ್ಯಯುಕ್ತಜೀವನವಪಡೆದುಬಾಳಿರಿ
ಪ್ರತಿಮನೆಯಲೊಂದು ಪುಟ್ಟ ತೋಟವಿದ್ದರೆ 
ಮನೆಯ ಅಂದಚಂದಇದರಿಂದ ಹೆಚ್ಚುದು
ಆರೋಗ್ಯಯುಕ್ತ ತರಕಾರಿ ನಿತ್ಯ ಸಿಗುವುದು

ಪಂಕಜಾ.ಕೆ.

Comments