ಶಾರದಾಸ್ತುತಿ. 2
ವಿದ್ಯಾಧಿದೇವತೆ ಶಾರದೇ
ವಂದಿಸುವೆ ನಿನಗೆ ಇಂದೇ
ಕರಮುಗಿದು ಬೇಡುವೆ
ಭಕುತಿಯಲಿ ಶಿರಬಾಗುವೆ
ವಿದ್ಯೆಬುದ್ಧಿಗಳ ರಾಣಿ ನೀನು
ಶರಣು ಬಂದಿಹ ದೀನ ನಾನು
ವಿದ್ಯೆಬುದ್ದಿಗಳ ಕೊಡು ತಾಯೇ
ನಿತ್ಯವೂ ಬೇಡುವೆನು ತಾಯೇ
ಅನುದಿನವು ಕೈ ಹಿಡಿದು ನಡೆಸು
ಲೇಖನಿಯ ಸರಾಗ ಹರಿಸು
ಮನದ ಭಾವನೆಗಳ ಅಕ್ಷರವಾಗಿಸಿ
ಸ್ತುತಿಸುವೆನು ದೇವಿ ನಿನಗೆ ನಮಿಸಿ
ಶೃಂಗೇರಿ ಪುರವಾಸಿನಿ
ಅಭಯ ಹಸ್ತವ ತೋರುನಿ
ನಿನ್ನ ಅಡಿದಾವರೆಗಳಿಗೆ ಎರಗಿ
ಶರಣು ಬಂದಿಹೆ ಕೊರಗಿ ಕರಗಿ
ದೇವಿ ಶಾರದೆ ಕೈ ಹಿಡಿದು ನಡೆಸು
ಒಲುಮೆಯಲಿ ನನ್ನನ್ನು ಹರಸು
ಶೃಂಗೇರಿ ಪುರವಾಸಿನಿ
ತುಂಗತೀರ ವಿಹಾರಿಣಿ
ವೀಣಾಪಾಣಿಯಾಗಿ ಮೆರೆದೆ
ನಿನ್ನ ಅಭಯ ಹಸ್ತವ ತೋರು ನೀ
ಪಂಕಜಾ.ಕೆ.
Comments
Post a Comment