ನೀನೆಂದು ಬರುವೆ
ಮನಸೆಲ್ಲಾ ಖಾಲಿ ಖಾಲಿ ಯಾಯಿತು
ಮೋಡಗಳಿಲ್ಲದ ಬಾನಿನಂತೆ
ಕವಿತೆಯ ಒರತೆ ಬತ್ತಿ ಹೋಯಿತು
ನೀರಒರತೆಯಿಲ್ಲದ ಬಾವಿಯಂತೆ
ಕವಿಮನದಲಿ ಕವಿತೆಯ ಒರತೆ ಉಕ್ಕಿಸಲು
ಮಳೆಯೇ ನೀನೆಂದು ಬರುವೆ
ಉರಿ ಸೆಖೆ ತುಂಬಿದೆ ಬುವಿಯಲಿ
ಇರುವೆ ನಾ ಮಳೆಯ ತಪದಲಿ
ಗಿಡಮರಗಳು ಒಣಗಿ ಹೋಗುತಿದೆ
ಮಳೆಯ ನೀರೀಕ್ಷೆಯಲಿ ಸೋತಿದೆ
ಜೀವಜಲವೆಬತ್ತಿಹೋದರೆ ಬದುಕುಮಸಣ
ಜೀವಸೆಲೆ ಉಕ್ಕಿಸಲು ಬೇಗ ಬಾ ವರುಣ
ಪಂಕಜಾ.ಕೆ.
Comments
Post a Comment