Skip to main content

ಕುಟುಂಬ ಜೀವನ ಸಣ್ಣ ಕಥೆ

ಕುಟುಂಬ ಜೀವನ

ರಮಾ  ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಮನೆಯಲ್ಲಿ ಅಮ್ಮ ಅಪ್ಪ  ಅತ್ತೆ ಅಜ್ಜಿ ಅಜ್ಜ  ಅಣ್ಣ ತಮ್ಮಂದಿರು ಜತೆ ಬೆಳೆದ ಆಕೆಗೆ ಮೊದಲಿನಿಂದಲೂ ಹೆಣ್ಣು ಮಕ್ಕಳ ಮೇಲೆ  ಮಾತ್ರ ಕುಟುಂಬ ನಿಯಮಗಳನ್ನು  ಹೇರುವ ಅಜ್ಜ ಅಜ್ಜಿಯರ  ಬಗ್ಗೆ  ಬೇಸರ.
          ಚಿಕ್ಕಂದಿನಿಂದಲೂ ಆಕೆಯನ್ನು ಅದು ಮಾಡಬೇಡ, ಇದು ಮಾಡಬೇಡ , ಗಂಡಸರ ಊಟ ಆಗದೆ ಉಣ್ಣಬಾರದು ಎನ್ನುವ ಹಲವಾರು  ಕಟ್ಟು ಪಾಡು ಇದರಿಂದ ಎಷ್ಟೋ ಬಾರಿ ಆಕೆಗೆ ಊಟ ಮಾಡದೆ ಹಸಿವಿನಿಂದ ಬಳಲುವ ಪ್ರಸಂಗ ಬರುತಿತ್ತು ಆಗೆಲ್ಲಾ ಅಜ್ಜಿಯ ಮೇಲೆ ಆಕೆಗೆ ವಿಪರೀತ ಕೋಪ ಬರುತಿತ್ತು ಆದರೇನು ಮನೆ ಮರ್ಯಾದಿ ಬೀದಿ ಪಾಲಾಗುವ ಭೀತಿಯಲ್ಲಿ ಆಕೆ ಎಲ್ಲವನ್ನು ಮೌನವಾಗಿ ಸಹಿಸುತ್ತ ಇದ್ದಳು
       ಅವಳ  ಅಮ್ಮನದು ಮೂಗೆತ್ತಿನ ಜೀವನ  ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವ ಜಾಯಮಾನ ಅಜ್ಜಿಯ ಮಾತುಗಳಿಗೆ ಕಿವುಡಾಗಿ ದುಡಿಯುವುದೇ ಅವಳ ಜೀವನ ಅಜ್ಜಿಯ ದುಸುಮುಸು   ನಿತ್ಯವೂ ಸುರಿಸುವ ಬೈಗಳು ಇವುಗಳನ್ನು ಕೇಳಿ ಕೇಳಿ ಅಮ್ಮ ಈ ರೀತಿ ಮೂಕಿ ಯಾಗಿರಬಹುದುಎನ್ನುವ  ಭಾವನೆ ರಮಾಳದು

       ತಂದೆಯದು ತುಂಬಾ ಶಾಂತ ಸ್ವಭಾವ ಅಮ್ಮನ ಕಡೆ ಮಾತಾಡಲು ಹೆದರುವ ಆತ ಹೆಂಡತಿಗಾಗಿ  ನಿತ್ಯ ಮರುಗುತ್ತಿದ್ದ ಆದರೆ ತನ್ನಿಂದ ಏನೂ ಮಾಡಲಾಗದ ಅಸಹಾಯಕತೆ ಆತನನ್ನು ಕಟ್ಟಿ ಹಾಕಿತ್ತು
            ಅದೊಂದು ದಿನ ರಮಾ ಳ ಚಿಕ್ಕಪ್ಪ  ಚಿಕ್ಕಮ್ಮ  ಬೆಂಗಳೂರಿನಿಂದ ಬಂದಿದ್ದರು
ರಮಾಳಿಗಂತು ತುಂಬಾ ಖುಷಿ ಚಿಕ್ಕಪ್ಪ ಆಕೆಗೆ ತಂದು ಕೊಡುವ ಕಥೆ ಪುಸ್ತಕಗಳನ್ನು  ಓದಿ ಆಕೆ  ತನ್ನದೇ ಆದ ರೀತಿಯಲ್ಲಿ ಬಾಳುವ ನಿರ್ಧಾರವನ್ನು ಮಾಡಿದ್ದಳು
          ಚಿಕ್ಕಮ್ಮ  ಸಂಧ್ಯಾ ಓದಿದ ಹೆಣ್ಣು  ಕೌಟುಂಬಿಕ ನಿಯಮಗಳು ಅಂದರೆ ಆಕೆಗೆ ಅಷ್ಟಕ್ಕಷ್ಟೇ  ಎಲ್ಲಾ ನಿಯಮಗಳು ಪುರುಷಪರ  ಪುರುಷರೇ ಮಾಡಿದ ಕಟ್ಟುಪಾಡುಗಳೆಂದು ಆಕೆ ಯಾವಾಗಲೂ ಹೀಗಳೆಯುತ್ತಿದ್ದಳು   ಆಕೆ ಮನೆಗೆ ಬಂದರೆ ಅಜ್ಜ ಅಜ್ಜಿಯರ  ದುಸುಮುಸು ಜಾಸ್ತಿ ಆಗುತ್ತಿತ್ತು  ಸಂಧ್ಯಾಳನ್ನು ಎನೂ ಹೇಳಲಾಗದೆ  ಹಿರಿ ಸೊಸೆಗೆ ಬೈಗಳ ಸುರಿಮಳೆ ಸುರಿಸುತ್ತಾ ಇದ್ದರು
             ಆ ದಿನ  ಸಂಧ್ಯಾ ಎದ್ದವಳೇ ಅಡಿಗೆ ಕೋಣೆಗೆ  ಹೋಗಿ ಏನೋ ಮುಟ್ಟಿದಳೆಂದು ಅಜ್ಜಿಯ ಬೊಬ್ಬೆಗೆ ಹೆದರಿ ಮೂಲೆ ಸೇರಿದ ರಮಾಳನ್ನು ಸಂಧ್ಯಾಳೆ ಸಮಾಧಾನಿಸಿ ಒಳಗೆ ಕರೆದೊಯ್ದು ದ್ದು ನೋಡಿ ಅಜ್ಜ ಅಜ್ಜಿ ಸಿಟ್ಟಿನಿಂದ  ಕೋಲು ಹಿಡಿದು ಒಂದು ಬಿಗಿದೇ ಬಿಟ್ಟರು ಯಾರ ಮೇಲಿನ ಕೋಪಯಾರ ಮೇಲೋ ಸಂಧ್ಯಾಳು ಕೋಪದಿಂದ 4 ಮಾತಾಡಿ ಇಂದಿನ ಕುಟುಂಬ ದೌರ್ಜನ್ಯದ ಕಾನೂನಿನ ಬಗ್ಗೆ ಮನೆ ಮಂದಿಗೆ ತಿಳಿ ಹೇಳುತ್ತಾಳೆ   ಈಗ ಮಹಿಳೆ ಅಬಲೆ ಯಲ್ಲ ಆಕೆಗೆ ಕಾನೂನಿನ ರಕ್ಷಣೆ ಇದೆ ನೀವು ಇದೆ ರೀತಿ ಇದ್ದರೆ ನಾನು ಪೊಲೀಸಿಗೆ  ಮಾಹಿತಿ ಕೊಡುತ್ತೇನೆ  ಎಂದು ಹೆದರಿಸುತ್ತಾಳೆ ಇದರಿಂದ ಹೆದರಿದ ಮನೆ ಮಂದಿ  ಮುಂದಕ್ಕೆ ಹೊಂದಾಣಿಕೆಯಿಂದ ಬಾಳಲು ನಿರ್ಧರಿಸುತ್ತಾರೆ  ರಮಾ ಳಿಗೆ ಚಿಕ್ಕಮ್ಮನ ಧೈರ್ಯ ಕಂಡು ಹೆಮ್ಮೆ ಎನಿಸುತ್ತದೆ ತಾನು ದೊಡ್ಡವಳಾದಾಗ ಯಾರಿಗೂ ಹೆದರದೆ ಒಳ್ಳೆಯ ರೀತಿಯಲ್ಲಿ ಜೀವಿಸುವ ಕನಸು ಕಾಣುತ್ತಾಳೆ
ಕೌಟುಂಬಿಕ ನಿಯಮಗಳು ಮನೆಯ ಸ್ವಾಸ್ಥ್ಯ ಕ್ಕೆ ಭಂಗ ತರುವಂತಿರಬಾರದು ಮನೆಯ ಎಲ್ಲಾ ಸದಸ್ಯರು ಪ್ರೀತಿಯಿಂದ ಹೊಂದಾಣಿಕೆಯಿಂದ ಜೀವಿಸಿದರೆ ಆ ಮನೆ ಸ್ವರ್ಗವಾದೀತುಎನ್ನುವುದನ್ನು ಮನೆ ಹಿರಿಯರಾದ ಅಜ್ಜ ಅಜ್ಜಿಗೆ  ಸಂಧ್ಯಾ ತಿಳಿಯ ಪಡಿಸಿದಳು

ಪಂಕಜಾ .ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...

ಅದ್ವಿಜೋ ಕವನ ಬಗ್ಗೆ

[08/06, 4:21 PM] ಪೀರ್ ಸಾಹೇಬ್ ನವಪರ್ವ: [08/06, 4:19 PM] ಪಿ.ಎಸ್.ಬಿ.: *ಅದ್ವಿಜೋ ಕವನ*  *ಶೀಷಿ೯ಕೆ* :  *ಅಬ್ಬಬ್ಬಾ ಜೀವನ..!* ಸೋಲು ಗೀಲು ಕಾಟ ಗೀಟ ಕೊಟ್ರು, ಸರ ಸರ ಮೇಲೇರಿ, ಬಿದ್ದು ಗೆದ್ದು ಬಿಡಬೇಕು..! ದುಡ್ಡು ಗಿಡ್ಡು , ಕಾಸು ಗೀಸು ಇರ್ಲಿ ಬಿಡ್ಲಿ ಓಡೋಡಿ ಹೋಗಿ ಗೆದ್ದು ಗಿದ್ದು ಬಬೇ೯ಕು..! ವಟ ವಟ, ಗಿಟ ಗಿಟ ಅನ್ನೋಗೆ೯  ಈಸಿ ಗೀಸಿ, ಬೀಗಿ ಗೀಗಿ  ತೋಸ್೯ಬೇಕು..! ಅಂದ ಗಿಂದ, ದುಡ್ಡು ಗಿಡ್ಡು ಮುಖ ಮೂತಿ ನೋಡದೆ ಮಾನ ಗೀನಕ್ಕೆ ಅಂಜಿ ಬದುಕ್ಬೇಕು..!  *ರಚನೆ : ಪೀರ್ ಸಾಹೇಬ್ ಬೀರಬ್ಬಿ,* [08/06, 4:21 PM] ಪಿ.ಎಸ್.ಬಿ.: 👆 ನನ್ನ ಹೊಸ ಸಾಹಿತ್ಯ ಪ್ರಕಾರದ ಚೊಚ್ಚಲ ಕವನ ಪ್ರಕಾರ "ಅದ್ವಿಜೋ"... ಎಲ್ಲಾ ಕವಿ ಮಿತ್ರರು ಅಭಿಪ್ರಾಯ ತಿಳಿಸಿ🙏🙏🙏 [08/06, 4:27 PM] ಪೀರ್ ಸಾಹೇಬ್ ನವಪರ್ವ: *ಅದ್ವಿಜೋ ಪ್ರಕಾರ*  🌷🌷🌷🌷🌷🌷🌷 ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...        *ಖಂಡು ಬಂಜಾರ* ●●●●●●●●●●●●●●●● *ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ  ಪದಗಳಿಂದ ಕವನಗಳ ರಚನೆ*     🌷  *ಅದ್ವಿಜೋ 🌷ಕವನಗಳ ರಚನಾ ಮಾಹಿತಿ* @@@@@@@@@@@ ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ. ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂ...