[08/06, 4:21 PM] ಪೀರ್ ಸಾಹೇಬ್ ನವಪರ್ವ: [08/06, 4:19 PM] ಪಿ.ಎಸ್.ಬಿ.: *ಅದ್ವಿಜೋ ಕವನ*
*ಶೀಷಿ೯ಕೆ* : *ಅಬ್ಬಬ್ಬಾ ಜೀವನ..!*
ಸೋಲು ಗೀಲು ಕಾಟ ಗೀಟ
ಕೊಟ್ರು, ಸರ ಸರ ಮೇಲೇರಿ,
ಬಿದ್ದು ಗೆದ್ದು ಬಿಡಬೇಕು..!
ದುಡ್ಡು ಗಿಡ್ಡು , ಕಾಸು ಗೀಸು
ಇರ್ಲಿ ಬಿಡ್ಲಿ ಓಡೋಡಿ ಹೋಗಿ
ಗೆದ್ದು ಗಿದ್ದು ಬಬೇ೯ಕು..!
ವಟ ವಟ, ಗಿಟ ಗಿಟ ಅನ್ನೋಗೆ೯
ಈಸಿ ಗೀಸಿ, ಬೀಗಿ ಗೀಗಿ
ತೋಸ್೯ಬೇಕು..!
ಅಂದ ಗಿಂದ, ದುಡ್ಡು ಗಿಡ್ಡು
ಮುಖ ಮೂತಿ ನೋಡದೆ
ಮಾನ ಗೀನಕ್ಕೆ ಅಂಜಿ ಬದುಕ್ಬೇಕು..!
*ರಚನೆ : ಪೀರ್ ಸಾಹೇಬ್ ಬೀರಬ್ಬಿ,*
[08/06, 4:21 PM] ಪಿ.ಎಸ್.ಬಿ.: 👆 ನನ್ನ ಹೊಸ ಸಾಹಿತ್ಯ ಪ್ರಕಾರದ ಚೊಚ್ಚಲ ಕವನ ಪ್ರಕಾರ "ಅದ್ವಿಜೋ"... ಎಲ್ಲಾ ಕವಿ ಮಿತ್ರರು ಅಭಿಪ್ರಾಯ ತಿಳಿಸಿ🙏🙏🙏
[08/06, 4:27 PM] ಪೀರ್ ಸಾಹೇಬ್ ನವಪರ್ವ: *ಅದ್ವಿಜೋ ಪ್ರಕಾರ*
🌷🌷🌷🌷🌷🌷🌷
ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...
*ಖಂಡು ಬಂಜಾರ*
●●●●●●●●●●●●●●●●
*ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ ಪದಗಳಿಂದ ಕವನಗಳ ರಚನೆ*
🌷 *ಅದ್ವಿಜೋ 🌷ಕವನಗಳ ರಚನಾ ಮಾಹಿತಿ*
@@@@@@@@@@@
ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ.
ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂಬುದಿಲ್ಲ.......ಅದು ನಿರಂತರ ಅನಂತ..........!!!
ಹಾಗಾಗಿ ಒಂದು ನಿಯಮ,ಪದ್ಧತಿ ಗಳ ಅಡಿಯಲ್ಲಿ ಬರೆದಾಗ ನಮ್ಮಲ್ಲಿರುವ ಸಾಹಿತ್ಯವು ಪ್ರಬುದ್ಧವಾಗಿ ಪ್ರಕಟಗೊಳ್ಳುವುದು. ಅದಕ್ಕಾಗಿ ನಿಮ್ಮ ಸಾಹಿತ್ಯ ಜ್ಞಾನಕ್ಕೆ ಒರೆಗಚ್ಚುವ ಕೆಲಸ ನಮ್ಮಿಂದ...
ಯಾರೂ ಬೇಸರ ಮಾಡಿಕೊಳ್ಳಬೇಡಿ........ಪ್ರಯತ್ನಿಸಿ.
ಹಾಗಾದರೆ... *ದ್ವಿರುಕ್ತಿ ಎಂದರೇನು?* ಎಂಬುದನ್ನು ತಿಳಿಯೋಣ.
#ಮೊದಲ ಪದದಂತೆ ಎರಡನೇ ಪದವು ಅರ್ಥವನ್ನು ಹೊಂದಿದ್ದರೆ.(ದ್ವಿ =ಎಂದರೇ ಎರಡು. ಉಕ್ತಿ = ಎಂದರೇ ಮಾತು) ಅದನ್ನು ದ್ವಿರುಕ್ತಿ ಎನ್ನುವರು.
ಇದು ಸರಳ,ಎಲ್ಲರಿಗೂ ಗೊತ್ತಿರುವಂತಹದ್ದು.....
ನನಗೆ ಸಿಕ್ಕ ಕೆಲವು ದ್ವಿರುಕ್ತಿ ಪದಗಳ ಪಟ್ಟಿ ಇಲ್ಲಿ ನೀಡಿರುವೆ.
(ನಿಮಗೆ ಸಿಕ್ಕರೆ ಸೇರಿಸಿ ಇನ್ನೂ ಬರೆಯಿರಿ)
*ದ್ವಿರುಕ್ತಿ ಯ ಪದಗಳ ಪಟ್ಟಿ*
*ಕೆಮ್ಮಿ - ಕೆಮ್ಮಿ
*ಮಾತು -ಮಾತು
*ಬಾ - ಬಾ
*ಹೋಗು-ಹೋಗು
*ಕೇಳು -ಕೇಳು
*ಹೌದು-ಹೌದು
*ನಿಲ್ಲು -ನಿಲ್ಲು
*ಬಂದೆ -ಬಂದೆ
*ದೊಡ್ಡ -ದೊಡ್ಡ
*ಹೆಚ್ಚು -ಹೆಚ್ಚು
*ಮನೆ - ಮನೆ
*ಕೇರಿ -ಕೇರಿ
*ಊರು -ಊರು(ಊರೂರು)
*ಎಲೇ -ಎಲೇ
*ಬನ್ನಿ-ಬನ್ನಿ
*ಹತ್ತಿರ -ಹತ್ತಿರ
*ಅಗೋ -ಅಗೋ
*ಅಬ್ಬಬ್ಬಾ!
*ಆಹಾಹಾ!
*ಬೇಡ -ಬೇಡ
*ಕೊಡು-ಕೊಡು
*ನಡೆ -ನಡೆ
*ಅಮ್ಮ -ಅಮ್ಮ
*ಆಗಲಿ -ಆಗಲಿ
*ಬೇಗ -ಬೇಗ
*ಓದು -ಓದು
*ಅಯ್ಯೋ -ಅಯ್ಯೋ
*ಶಿವ -ಶಿವ
*ಚಿಕ್ಕ -ಚಿಕ್ಕ
*ತಲೆ -ತಲೆ
*ಕಣ - ಕಣ
*ತೂತು -ತೂತು
*ಬೆಳಗ್ಗೆ-ಬೆಳಿಗ್ಗೆ
*ಕಣ್ಣು -ಕಣ್ಣು
*ಕದ್ದು -ಕದ್ದು
*ದೇವರೇ -ದೇವರೆ
*ಬೆಂಕಿ -ಬೆಂಕಿ
*ತಿರುಗಿ -ತಿರುಗಿ
*ನೋಡಿ -ನೋಡಿ
*ಒಬ್ಬೊಬ್ಬ
*ಇರಲಿ -ಇರಲಿ
*ಸಾಕು -ಸಾಕು
*ಹಾವು -ಹಾವು
*ಕೆಟ್ಟೆ -ಕೆಟ್ಟೆ
*ಈಗೀಗ
*ಇರುಳಿರುಳು
*ಮುಖ ಮುಖ
*ಭಯ ಭಯ
*ಸೀಕಲು ಸೀಕಲು
*ದುಡ್ಡು ದುಡ್ಡು
*ಮೊತ್ತ ಮೊದಲು (ಮೊಟ್ಟ)
*ಕಟ್ಟ ಕಡೆಗೆ
*ನಟ್ಟ ನಡುವೆ
*ಬಟ್ಟ ಬಯಲು
*ತುತ್ತ ತುದಿ
*ಕೊನೆ ಕೊನೆಗೆ
*ಮೆಲ್ಲ ಮೆಲ್ಲನೆ
*ಬುರು - ಬುರು
*ಗಡ -ಗಡ
*ಲಬ್ -ಲಬ್
ಈ ರೀತಿಯ ಪದಗಳು....
ಈಗ... *ಜೋಡು ನುಡಿ ಎಂದರೇ?*
#ಒಂದೆ ತರಹದ,ವಿರುದ್ಧಾರ್ಥ,ಪೂರಕಾರ್ಥ, ಸಮನಾರ್ಥಕ.,ಹೀಗ ಬೇರೆ ಬೇರೆ ಅರ್ಥ ಗಳನ್ನು ಕೊಡುವ ಎರಡು ಪದಗಳು.....
*ಜೋಡು ನುಡಿ ಪದಗಳ ಪಟ್ಟಿ*
ಅಸ್ಪಷ್ಟ ಪದಗಳು :
*ದುಡ್ಡು ಗಿಡ್ಡು
*ಒಡ್ಡು ಪಡ್ಡು
*ಅನ್ನ ಗಿನ್ನ
*ಮೊಸರು ಗಿಸರು
*ಚಟ್ನಿ ಪಟ್ನಿ
*ಲಬ್ ಡಬ್
*ಹೊಲ ಗಿಲ
*ಬಳೆ ಗಿಳೆ
*ಸಾಲ ಗೀಲ
*ಅರೆ ಬರೆ
*ಅಡ್ಡ ದಿಡ್ಡ
*ಕೂಲಿ ನಾಲಿ
*ಹಾಳು ಗೀಳು
*ಓದು ಗೀದು
*ತಲೆ ಗಿಲೆ
*ಕಲ್ಲು ಗಿಲ್ಲು
ಸಮಾನಾರ್ಥಕ ಪದಗಳು :
*ಅವಳಿ ಜವಳಿ
*ಅಂದ ಚೆಂದ
*ಎಡರು ತೊಡರು
*ಏರು ಪೇರು
*ಉಡುಗೆ ತೊಡುಗೆ
*ಕಸ ಕಡ್ಡಿ
*ನೆರೆ ಹೊರೆ
ಪೂರಕಾರ್ಥ ಪದಗಳು :
*ಹಾಲ್ಜೇನು
*ಕೆನೆ ಮೊಸರು
*ನ್ಯಾಯ ನೀತಿ
*ರೂಢಿ ಸಂಪ್ರದಾಯ
*ಅಂಕೆ ಸಂಕೆ
*ಅಚ್ಚು ಮೆಚ್ಚು
*ಅಕ್ಕ ಪಕ್ಕಾ
*ಅಲ್ಲೋಲ ಕಲ್ಲೋಲ
*ಆಚಾರ ವಿಚಾರ
*ಆಸ್ತಿ ಅಂತಸ್ತು
*ನೀತಿ ನಿಯಮ
ವಿರುದ್ದಾರ್ಥಕ ಪದಗಳು :
*ಮಡಿ ಮೈಲಿಗೆ
*ಪರ ವಿರೋಧ
*ಸೋಲು ಗೆಲುವು
*ಆದಿ ಅಂತ್ಯ
*ಏಳು ಬೀಳು
*ಕಳ್ಳ ಕಾಕರ
*ನೋವು ನಲೀವು
*ಕಾಡು ನಾಡು
*ಬೇವು ಬೆಲ್ಲ
*ಪಂಡಿತ ಪಾಮರ
*ಸತಿ ಪತಿ
*ಹುಳ ಹುಪ್ಪಡಿ
*ಸೊಪ್ಪು ಸೇದೆ
*ಬಟ್ಟೆ ಬರೆ
*ಮಕ್ಕಳು ಮರಿ
*ಮನೆ ಮಠ
ಈ ರೀತಿಯ ಪದಗಳು....
*ಅನುಕರಣಾವ್ಯಯ ಎಂದರೇ*?
# ನಿರ್ಧಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳು...
*ಅನುಕರಣಾವ್ಯಯ ಪದಗಳ ಪಟ್ಟಿ*
*ಚಟ ಚಟ
*ರೊಯ್ಯನೆ
*ಕರ ಕರ
*ವಟವಟ
*ಚುರು ಚುರು
*ಧಗ ಧಗ
*ದಡ ದಡ
*ಸುಯ್ಯನೆ
*ಘುಳು ಘುಳು
*ಢವ ಢವ
*ರಪ ರಪ
*ಲಕ ಲಕ
*ಢಣ ಢಣ
*ಪಟ ಪಟ
*ಘಮ ಘಮ
*ಪಟ ಪಟ..... ಇತ್ಯಾದಿ
ಹೀಗೆ
(ಈ ಮೇಲಿನ ಪದಗಳೇ ಅಂತಿಮವಲ್ಲ ನಿಮ್ಮಲ್ಲಿರುವ ಅದ್ವಿಜೋ ಪದಗಳನ್ನು ಸೇರಿಸಿ ಕವನ ರಚಿಸಲು ಮುಕ್ತ ಅವಕಾಶವಿದೆ)
ಈ ಮೇಲಿನ ಮೂರು ತರಹದ ಪದಗಳನ್ನು ಬಳಸಿಕೊಂಡು ನಾವುಗಳು ಕವನವನ್ನು ರಚಿಸುವುದು.
ಯಾವುದೇ ಅದ್ವಿಜೋ ಪದಗಳನ್ನು ಎಲ್ಲಿಯಾದರು ಬಳಸಿಕೊಳ್ಳಬಹುದು...
ಹಾಗಾದರೆ.....ಕೇಲವು ನಿಯಮಗಳನ್ನು ನೊಡೋಣವೇ...
🌼 *ನಿಯಮಗಳು*🌼
*ಪ್ರತಿಯೊಂದು ಸಾಲಿನಲ್ಲಿ ಕನಿಷ್ಠ ಎರಡು,ಗರಿಷ್ಠ ನಾಲ್ಕು ವ್ಯಾಕರಣಾಂಶ ಬಂದು ಕೊನೆಯ ಅಂದರೇ ಎರಡು/ನಾಲ್ಕು ನೇಯ ಪದದಲ್ಲಿ ಅರ್ಥ ಹೊಂದಣಿಕೆಯ ಶಬ್ದ ವನ್ನು ಸೇರಿಸಿ ರಚನೆ ಮಾಡಿಕೊಳ್ಳಬಹುದು*.
*ಎಲ್ಲಾ ಸಾಲುಗಳು ಅರ್ಥ ಹೊಂದಣಿಕೆಯಾಗುತ್ತ ಒಂದು ಕಥೆ,ಸನ್ನಿವೇಶ, ಘಟನೆ,ವಿಡಂಬನೆಯ ರೂಪದಲ್ಲಿ ರೂಪಗೊಳ್ಳಬೇಕು.
*ಗರಿಷ್ಠ 20 ಸಾಲುಗಳಿರಬೇಕು.
*ಅರ್ಥ ಪ್ರಾಧಾನ್ಯವಾಗಿ ಕವನ ಹೊರ ಬರಬೇಕು.
ಇದಿಷ್ಟು ಪಾಲಿಸಿದರೆ ಸಾಕು.
(ಖಂಡು ಬಂಜಾರರ ರಚನೆ)
👇🏼
*ಅದ್ವಿಜೋ* *(4 ಪದಗಳಿಗೆ ಸಂಬಂಧಿಸಿದ ಉದಾ*)ನಾನು ಇಲ್ಲಿ 2 ಸಾಲಿನ ಪ್ರಕಾರ ಮಾಡಿರುವೆ ನಿಮಗಿಷ್ಟವಾದಂತೆ ಸಾಲು ಮಾಡಿಕೊಳ್ಳಿ
(೧)
------------------------------
*ಅಬ್ಬಬ್ಬಾ !,ಕೆಮ್ಮಿ ಕೆಮ್ಮಿ,ಮೆಲ್ಲ ಮೆಲ್ಲನೆ, ಜಡ್ಡು ಗಿಡ್ಡು ಬಂತು ನೋಡಾ||*.
*ಶಿವ ಶಿವ,ಹಾಲ್ಜೇನು, ಸಂಸಾರಗಿಂಸಾರ,ಬಟ್ಟಬಯಲಾಯ್ತು ನೋಡಾ||*.
*ಮಕ್ಕಳು ಮರಿ,ಸತಿ ಪತಿ,ಮನೆ ಮಠ,ಕಳೆ ಕಳೆದೊಯ್ತು ನೋಡಾ||*
*ಬೇಗ ಬೇಗ,ಹೋಗು ಹೋಗು,ತಿರು ತಿರುಗಿ,ಬರ ಬರ ಬ್ಯಾಡ ನೋಡಾ||*.
*ಅದ್ವಿಜೋ* *(2 ಪದಗಳ ಉದಾ*) ನಾನು ಇಲ್ಲಿ 3 ಸಾಲಿನ ಪ್ರಕಾರ ಮಾಡಿರುವೆ ನಿಮಗಿಷ್ಟವಾದಂತೆ ಸಾಲು ಮಾಡಿಕೊಳ್ಳಿ
ಕೆ.ಬಾರವಲಿ ಸರ್ ರವರ ರಚನೆ
👇🏼
(೨)
ಕೂಲಿ-ನಾಲಿ ಮಾಡಿ-ಮಾಡಿ
ಕಲ್ಲು-ಗಿಲ್ಲು ತಂದು-ತಂದು
ಮನೆ-ಮಠ ಕಟ್ಟಿಕೊಂಡ||
ಅಂಕೆ-ಸಂಖೆ ಮೀರಿ-ಮೀರಿ
ಹಣ-ಗಿಣ ಗಳಿಸಿ-ಗಳಿಸಿ
ಅಂದದ ಅರಮನೆ ಕಟ್ಬಿಟ್ಟ||
ಅಬ್ಬಬ್ಬಾ! ಊರೂರು
ತಿರುಗಿ-ತಿರುಗಿ ಅಂದ-ಚಂದದ
ಹುಡ್ಗಿ ನೋಡಿ ಮಾಡ್ಕೊಂಡ||
*************************
ಇದರಂತೆ ಕವನ ಹೊಂದಾಣಿಕೆ ಯ ರೂಪದಲ್ಲಿ ಬಂದು ಕೊನೆಯಾಗ ಬೇಕು.
ಬರಿತಿರಿ ತಾನೇ....ಇರಿ💝💝💝💝
ಧನ್ಯವಾದಗಳು
ನಿಮ್ಮವ
*ಖಂಡು ಬಂಜಾರ*
ಸೇವಾನಗರ.ಹರಪನಹಳ್ಳಿ
*ನಿಮ್ಮ*
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
Comments
Post a Comment