Skip to main content

ಗೋವಿನ ಮಹತ್ವ ಕಥೆ

    ಗೋವಿನ ಮಹತ್ವ

ಬೆಳಗಿನ ಜಾವ ಐದು ಗಂಟೆಗೆ ಎದ್ದು, ಸ್ನಾನ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು, ದನಕರುಗಳ ಮೈಯನ್ನು ಉಜ್ಜಿ ,ಅವುಗಳಿಗೆ ತಿನ್ನಲು ಕುಡಿಯಲು ಕೊಟ್ಟು ಹಾಲು ಕರೆದು ಒಳಗೆ ಬರುವ ಅಭ್ಯಾಸ ಸೌಜನ್ಯನದ್ದು. 3 ದನ 4 ಕರುಗಳು ಹಟ್ಟಿಯಲ್ಲಿ ಹಾಗೂ ಅವರ ಮನೆ ಅಂಗಳದಲ್ಲಿ ಹಾಯಾಗಿ ಅಡ್ಡಾಡುತ್ತ ಇರುತ್ತಿರುವ ದೃಶ್ಯ ಸಾಮಾನ್ಯ. ಕರುಗಳ ನೆಗೆದಾಟ, ಒಂದನ್ನು ಇನ್ನೊಂದು ಅಟ್ಟಿಸಿಕೊಂಡು ಹೋಗುವ  ಚಂದ ನೋಡುತ್ತಾ ಇದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಸೌಜನ್ಯ ಗಂಗೆ ಗೌರಿ ಎಂದು ಕರೆದರೆ ಸಾಕು ಎಲ್ಲಿದ್ದರೂ ಓಡಿ ಬಂದು ಅವಳ ಕೈ ನೆಕ್ಕುತ್ತಾ ಇರುತ್ತವೆ ಅಷ್ಟು ಪ್ರೀತಿ ಗೋವುಗಳಿಗೆ ತನ್ನ ಒಡತಿಯ ಮೇಲೆ.
                ಆದಿನ ಅದೇನಾಯಿತೋ ಸೌಜನ್ಯನಿಗೆ ಬೆಳಿಗ್ಗೆ ಎಂದಿನಂತೆ 5 ಗಂಟೆಗೆ ಎಚ್ಚರಿಕೆ ಆಗಲಿಲ್ಲ. ಹಟ್ಟಿಯಲ್ಲಿ ದನ ಕರುಗಳು ಒಂದೇಸಮನೆ  ಕೂಗುವುದು ಕೇಳಿ ,ಸೌಜನ್ಯ ದಡಬಡಿಸಿ ಎದ್ದು ಛೇ ಇಂದು ನನಗೆ ಏನಾಗಿದೆ ಇಷ್ಟು ಹೊತ್ತು ಮಲಗಿ ಬಿಟ್ಟೆನಲ್ಲ  ಪಾಪ ದನಗಳಿಗೆ ಹೊಟ್ಟೆ ಹಸಿವೆ ತಡೆಯಲಾಗುವುದಿಲ್ಲ ಏನೋ ಇವರಿಗಾದರು ತನ್ನನ್ನು ಏಳಿಸಬಹುದಿತ್ತು ಎಂದು ಯೋಚಿಸುತ್ತಾ ಸೌಜನ್ಯ ಬೇಗ ಬೇಗನೆ ತನ್ನ ನಿತ್ಯ ಕರ್ಮ ತೀರಿಸಿ  ಹಟ್ಟಿಗೆ ಕಾಲು ಇಟ್ಟದ್ದೇ ತಡ ದನ ಕರುಗಳು ಕೆನೆಯಲು ಪ್ರಾರಂಭ ಮಾಡಿದವು. ಸೌಜನ್ಯ ದನಗಳ ಮೈಯನ್ನು ತಿಕ್ಕಿ, ಈ ದಿನ ನನಗೆ ಎಚ್ಚರಿಗೆ ಆಗಲಿಲ್ಲ  ಕ್ಷಮಿಸಿ ಪುಟ್ಟ ಎಂದು ದನಗಳ ಹತ್ತಿರ ಮಾತಾಡುತ್ತಾ ,ಅವುಗಳಿಗೆ ತಿನ್ನಲು ಕುಡಿಯಲು ಕೊಟ್ಟು ಎಂದಿನಂತೆ ಹಾಲು ಕರೆಯಲು ಕುಳಿತುಕೊಂಡಳು.
             ಆಕೆ ಹಾಲು ಕರೆಯಲು ಪ್ರಾರಂಭ ಮಾಡಿದಕೂಡಲೇ ದಾನಗಳೆಲ್ಲಾ ಸ್ವಲ್ಪವೂ ಕಷ್ಟ ಇಲ್ಲದೆ  ಧಾರಾಳ ಹಾಲು ಇಳಿಸುತ್ತಿದ್ದವು .ಆದರೆ ಸೌಜನ್ಯ ಎಷ್ಟು ಬೇಕೋ ಅಷ್ಟೇ ಹಾಲು ಕರೆದು ಉಳಿದುದನ್ನು  ಕರುಗಳಿಗೆ ಕುಡಿಯಲು ಬಿಟ್ಟು ಒಳಗೆ ಬಂದು ವರ್ತನೆಯ ಮನೆಗೆ ಕೊಂಡು ಹೋಗಲು ಹಾಲು ತುಂಬಿಸಿ, ಒಂದು ಗ್ಲಾಸ್ ಕಾಪಿ ಮಾಡಿ ಗಂಡನಿಗೆ ಕೊಟ್ಟು ಬರಲು ರೂಮಿಗೆ ಹೊರಟಳು. ಹೆಂಡತಿಯ ಕೈಯಿಂದ ಕಾಪಿ ಬಂದ ಮೇಲೆಯೇ  ಹಾಸಿಗೆ ಬಿಟ್ಟು  ಏಳುವ ಅಭ್ಯಾಸ ಸಂದೀಪನದು. ಆ ದಿನ ಹೆಂಡತಿ ಬರುವಾಗ  ತಡವಾದ್ದರಿಂದ ಇನ್ನೇನೂ ಏಳಬೇಕು ಅಂತ ಇದ್ದಾಗ ಸೌಜನ್ಯ ಬರುವುದು ನೋಡಿ  ಬೇಕೆಂದೇ ನಿದ್ದೆ ನಟಿಸಿದ ಗಂಡನನ್ನು ಕಂಡು ಸೌಜನ್ಯನಿಗೆ ನಗು ತಡೆಯಲಾಗಲಿಲ್ಲ  ಆಕೆ ಕಾಪಿಯ ಗ್ಲಾಸನ್ನು ಮೇಜಿನ ಮೇಲೆ ಇಟ್ಟು ಗಂಡನನ್ನು ಏಳಿಸಬೇಕು  ಎಂದಿದ್ದಾಗ   ಸಂದೀಪ ಅವಳನ್ನು ತನ್ನ ಕಡೆಗೆ  ಎಳೆದುಕೊಂಡು ಬಿಟ್ಟ ಗಾಬರಿಯಿಂದ ಸೌಜನ್ಯ ಆಯತಪ್ಪಿ ಅವನ ಮೇಲೆ ಬಿದ್ದು ಬಿಟ್ಟಳು.ಆಕೆ ನಾಚಿಕೆಯಿಂದ ಮಗನಿಗೆ ಮದುವೆ ಮಾಡುವ ಪ್ರಾಯ ಆದರೂ ನಿಮ್ಮ ತುಂಟಾಟ ಬಿಡಲಿಲ್ಲ  ಬಿಡಿ ನನ್ನ ಈ ದಿನ ಎದ್ದುದೇ ಲೇಟ್ ಇನ್ನು ವರ್ತನೆಯ ಹಾಲಿಗೆ ಆಳು ರಂಗ ಬರುವ ಹೊತ್ತಾಯಿತು ಎಂದು ಕೊಸರಿಕೊಳ್ಳುತ್ತಿರುವ ಹೆಂಡತಿಯನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿ  ಆಕೆಯ ಆಧರದ ಮದು ಸವಿದೇ ಬಿಟ್ಟ  ನೀನು ಇನ್ನು ಸ್ವಲ್ಪ ಹೊತ್ತು ಮಲಗು ಅಷ್ಟು ಬೇಗ ಯಾಕೆ ಏಳುವುದು ಎಂದು ಕೇಳಿದಾಗ ಸೌಜನ್ಯ ಕೋಪದಿಂದ ಹೌದು ಹೌದು ಮಲಗುವುದಂತೆ ಮಲಗುವುದು  ಆಗಲೇ ಗಂಟೆ 8 ಆಯಿತು ರಂಗ ಬರುವ ಹೊತ್ತಾಯಿತು ಕಾಫಿ ತಣಿಯುತ್ತದೆ ಬೇಗ ಕುಡಿದು ಒಳಗೆ ಬನ್ನಿ ಎಂದು ನಾಚಿಗೆಯಿಂದ ಗಂಡನ ಕೈ ಬಿಡಿಸಿ ಅಡುಗೆ ಮನೆಗೆ ಹೊರಟು ಹೋದಳು. ಹೆಂಡತಿ ಹೋದ ಮೇಲೆ ಸಂದೀಪ ನಿಧಾನವಾಗಿ ಎದ್ದು ಹೆಂಡತಿ ಕೊಟ್ಟ ಕಾಪಿ ಕುಡಿದು ತನ್ನ ನಿತ್ಯದ ಕಾಯಕಕ್ಕೆ ತೊಡಗಿಕೊಂಡ.
              ಅಡಿಗೆ ಕೋಣೆಗೆ ಹೋದ ಸೌಜನ್ಯ ಬೇಗ ಬೇಗ ಅಡಿಗೆಗೆ ಇಟ್ಟು ತಿಂಡಿಗೆ ರೆಡಿ ಮಾಡುತ್ತ ಇರುವಾಗ ರಂಗ ಕರೆದಿದ್ದು ಕೇಳಿ ಆತನ ಕೈಯಲ್ಲಿ ಹಾಲಿನ ಪಾತ್ರೆ ಕೊಟ್ಟು ಕಳಿಸಿ ನಿತ್ಯದಂತೆ ಪೇಪರ್ ಹಿಡಿದು ಕುಳಿತಳು. ಪ್ರತಿ ದಿನ ಬೆಳಗ್ಗೆ ಒಮ್ಮೆ ಪೇಪರಿನ ಮೇಲೆ ಕಣ್ಣಾಡಿಸುವ ಅಭ್ಯಾಸ ಆಕೆಯದು  ಆ ದಿನ  ಪೇಪರ್ ಬಿಡಿಸಿದ ಕೂಡಲೇ ದೊಡ್ಡ ಅಕ್ಷರದಲ್ಲಿ ಬರೆದ ತಮಿಳುನಾಡಿನಲ್ಲಿ ಭೀಕರ ಪ್ರವಾಹ ಎನ್ನುವ ವಾಕ್ಯ ಓದಿ ಸೌಜನ್ಯನ ಮನಸು ಹಿಂದಕ್ಕೆ ಓಡಿತು.
      

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...

ಅದ್ವಿಜೋ ಕವನ ಬಗ್ಗೆ

[08/06, 4:21 PM] ಪೀರ್ ಸಾಹೇಬ್ ನವಪರ್ವ: [08/06, 4:19 PM] ಪಿ.ಎಸ್.ಬಿ.: *ಅದ್ವಿಜೋ ಕವನ*  *ಶೀಷಿ೯ಕೆ* :  *ಅಬ್ಬಬ್ಬಾ ಜೀವನ..!* ಸೋಲು ಗೀಲು ಕಾಟ ಗೀಟ ಕೊಟ್ರು, ಸರ ಸರ ಮೇಲೇರಿ, ಬಿದ್ದು ಗೆದ್ದು ಬಿಡಬೇಕು..! ದುಡ್ಡು ಗಿಡ್ಡು , ಕಾಸು ಗೀಸು ಇರ್ಲಿ ಬಿಡ್ಲಿ ಓಡೋಡಿ ಹೋಗಿ ಗೆದ್ದು ಗಿದ್ದು ಬಬೇ೯ಕು..! ವಟ ವಟ, ಗಿಟ ಗಿಟ ಅನ್ನೋಗೆ೯  ಈಸಿ ಗೀಸಿ, ಬೀಗಿ ಗೀಗಿ  ತೋಸ್೯ಬೇಕು..! ಅಂದ ಗಿಂದ, ದುಡ್ಡು ಗಿಡ್ಡು ಮುಖ ಮೂತಿ ನೋಡದೆ ಮಾನ ಗೀನಕ್ಕೆ ಅಂಜಿ ಬದುಕ್ಬೇಕು..!  *ರಚನೆ : ಪೀರ್ ಸಾಹೇಬ್ ಬೀರಬ್ಬಿ,* [08/06, 4:21 PM] ಪಿ.ಎಸ್.ಬಿ.: 👆 ನನ್ನ ಹೊಸ ಸಾಹಿತ್ಯ ಪ್ರಕಾರದ ಚೊಚ್ಚಲ ಕವನ ಪ್ರಕಾರ "ಅದ್ವಿಜೋ"... ಎಲ್ಲಾ ಕವಿ ಮಿತ್ರರು ಅಭಿಪ್ರಾಯ ತಿಳಿಸಿ🙏🙏🙏 [08/06, 4:27 PM] ಪೀರ್ ಸಾಹೇಬ್ ನವಪರ್ವ: *ಅದ್ವಿಜೋ ಪ್ರಕಾರ*  🌷🌷🌷🌷🌷🌷🌷 ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...        *ಖಂಡು ಬಂಜಾರ* ●●●●●●●●●●●●●●●● *ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ  ಪದಗಳಿಂದ ಕವನಗಳ ರಚನೆ*     🌷  *ಅದ್ವಿಜೋ 🌷ಕವನಗಳ ರಚನಾ ಮಾಹಿತಿ* @@@@@@@@@@@ ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ. ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂ...