ಕಾವ್ಯಾಂತರಂಗ ಸ್ಪರ್ಧೆಗಾಗಿ
ಒಲವೇ ಜೀವನ (ಭಾವಗೀತೆ)
ಈ ಭೂಮಿ ಈ ಬಾನು ನಮಗಾಗಿದೆ
ಒಂದಾಗಿ ನಲಿಯಲು ಸಮಯ ಬಂದಿದೆ/
ಬಾನಿನಲಿ ಚಂದಿರನು ನಗುತ್ತಿರುವನು
ಬೆಳದಿಂಗಳ ಮಳೆಯನ್ನು ಸುರಿಸುತಿಹನು
ಮಾರುತನು ಬೀಸುತಿಹನು ತಂಗಾಳಿಯ
ಒಲವರಸ ಸವಿಯುತ್ತಾ ಮೈ ಮರೆಯುವ
ಹೂವೊಂದು ಅರಳಿ. ನಗುತಿರುವುದು
ದುಂಬಿಗಳ ಆಕರ್ಷಿಸುತ ತಲೆದೂಗುವುದು
ಅರಳಿರುವ ಮಲ್ಲಿಗೆಯ ಪರಿಮಳವು
ಮೈಮನಕೆ ತುಂಬುತಿದೆ ಉಲ್ಲಾಸವು
ಮಧುಮಾಸ ಬಂದಿಹುದು ಬಾ ನಲ್ಲನೆ
ತನಿರಸವ ಉಣಿಸೊಮ್ಮೆ ನೀ ಸುಮ್ಮನೆ
ಬಾಳೊಂದು ನಂದನವನವಾಗಿದೆ
ನಾವಿಬ್ಬರೊಂದಾಗಿ ನಲಿಯೋಣವೇ
ಪಂಕಜಾ.ಕೆ
Comments
Post a Comment