ದುರಾಶೆ. (ದತ್ತಪದ ಭಗ್ನ)
ಮೂಡಣದ ಬಾನಿನಲಿ ರವಿಮೂಡುತಿರಲು
ಬಾನಿನಂಗಳದಲ್ಲಿ ಕಲಸಿದೆ ಚೆಲು ರಂಗಿನೆಸಳು
ಹಕ್ಕಿಗಳ ಇಂಚರದಲಿ ಮೈ ಮರೆತಿರಲು
ಹಿತವಾದ ತಂಗಾಳಿ ತರುತಿದೆ ಮನಕೆ ನಲಿವು
ಅರಳಿರುವ ಹೂಗಳ ಘಮಲು
ತನುಮನಕೆ ತುಂಬುತಿದೆ ಅಮಲು
ಜುಳು ಜುಳು ಹರಿಯುವ ನದಿಯ ನೀರು
ಕೊರೆದಿಹನು ಮನುಜ ಎಲ್ಲೆಡೆಯೂ ಬೋರು
ಭಗ್ನಗೊಂಡಿದೆ ಭೂತಾಯಿ ಒಡಲು
ಕ್ರೂರಿ ಮನುಜನ ದುರಾಶೆಗೆ ಆಗಿದೆ ಬಟ್ಟಬಯಲು
ಉಸಿರಿಗೆ ಹಸಿರಾಗಿತ್ತು ಅಂದು ಆ ಕಾಡು
ಕಟ್ಟಿರುವನು ಇಂದು ಕಾಂಕ್ರೀಟ್ ಕಾಡು
ಮಲಿನವಾಗಿಹುದು ಪ್ರಕೃತಿ ಇಂದು
ಬದುಕದಾರಿಯಲಿ ತುಂಬಿದೆ ಮುಳ್ಳು ಒಂದು
ಭೂತಾಯಿಯ ಸಹನೆ ಕಟ್ಟೆಯೊಡೆದಿದೆ
ಮನುಜನ ದುರಾಶೆಗೆ ತಡೆಯೊಡ್ಡಿದೆ
ಇನ್ನಾದರೂ ಎಚ್ಚೆತ್ತುಕೊ ಮನುಜ
ಪ್ರಕೃತಿ ಉಳಿವಿನಲಿ ನಿನ್ನ ಉಳಿವು ಇದು ನಿಜ
ಪಂಕಜಾ.ಕೆ
Comments
Post a Comment