ನಾರಿಕೇಳ
ಭೂಲೋಕದ ಕಲ್ಪವೃಕ್ಷ ನೀನಾದೆಯೇ
ನಿನಗಿರುವ ಹೆಸರದು ಓ ನಾರಿಕೇಳ
ಮುಕ್ಕೋಟಿ ದೇವರು ನೆಲೆನಿಂತಿಹರು
ಬಿರುಗಾಳಿ ಬಂದರೂ ಅಲ್ಲಾಡದು
ಮದುವೆ ಮಂಟಪಕೆ ನಿನ್ನದೇ ಗರಿ
ದೇವರ ಸೇವೆಗೆ ಬೇಕು ನಿನ್ನದೇ ಫಲ
ತಂಪಾದ ಪಾನೀಯ ಅಮೃತವು
ರುಚಿಯಾದ ಊಟಕ್ಕೆ ಬೇಕಲ್ಲ ಕಾಯಿ ತುರಿ
ಗೂಡಿಸಲಾ ಮನೆಗಳಿಗೆ ಸಾಕಲ್ಲ ನಿನ್ನ ಗರಿ
ಬಡವನ ದಾರಿಗೆ ದಾರಿ ದೀಪ ನೀ
ಬಿಸಿನೀರ ಸ್ನಾನಕ್ಕೆ ಕಟ್ಟಿಗೆಯಾದೆ
ಸ್ವಚ್ಛತೆಗೆ ನೀನಾದೆ ಪೊರಕೆಯಾಗಿ
ಬೇಕಿದ್ದರೆ ಮಾಡಬಹುದಲ್ಲ ಹುರಿ ಹಗ್ಗ
ಚಳಿಗಾಲಕ್ಕೆ ಉರುವಲು ನೀನಾದೆ
ತಂಪಾದ ಪಾನೀಯ ಮುದ ತಂದಿದೆ
ದೇವಲೋಕದ ಅಮೃತಕ್ಕೆ ಸಮನಾಗಿದೆ
ಬೇಸಿಗೆಯ ಬಿಸಿಲು ಮೈ ಸುಡುತಿರೆ
ಆಮೃತದ ಒಡಲು ಬಾಯರಿಕೆಯ ತಣಿಸಿದೆ
ತಲೆಗೆರವ ತೈಲವು ತಂಪಾಗಿದೆ
ಕಣ್ತುಂಬ ನಿದ್ದೆ ಯನು ಅದು ಕೊಟ್ಟಿದೆ
ನೀರನ್ನು ಮಾತ್ರವೇ ನಾ ಕೊಟ್ಟರೂ
ನೀಕೊಡುವೆ ಸಕಲವನು ಕಲ್ಪವೃಕ್ಷವೇ
ಪಂಕಜಾ ಕೆ
Comments
Post a Comment