(ಚುಟುಕು...)
ಬೇವು..ಮಾವು
ಬಾಳಿನಲಿ ಬರಬಹುದು ಕಷ್ಟ ನಷ್ಟಗಳೆಂಬ ಬೇವು
ಸಹನೆಯಲಿ ಇದ್ದರೆ ಪಡೆಯಬಹುದು ಸಿಹಿ ಮಾವು
2. ಗೆಲುವು
ಪ್ರೇಮ ಪಕ್ಷಿಗಳಂತೆ ಇರಬೇಕು ಎಂದೆಂದೂ ನಾವು
ಕಷ್ಟ ಸುಖಗಳಲಿ ಜತೆಯಾಗಿಸಾಗುತಲಿದ್ದರೆ ಗೆಲುವು
3..ಕರುಳು
ಅಯಾಸ ಪರಿಹಾರಕ್ಕೆ ಬೇಕು
ಮರಗಿಡಗಳ ನೆರಳು
ಕುಸಿದಾಗ ಸಾಂತ್ವನಿಸಲು ಬೇಕು
ಮಮತೆ ತುಂಬಿದ ಕರುಳು
ಪಂಕಜಾ.ಕೆ.
Comments
Post a Comment