ಬೋರ್ಗರೆಯುವ ಕಡಲ ದಂಡೆಯಲ್ಲಿ ಕುಳಿತು ಹಾರಿ ಬರುತ್ತಿರುವ ಅಲೆಗಳನ್ನು ನೋಡುತ್ತಾ ಅದರ ಏಳು ಬೀಳುಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದರೂ ಸಂಕಷ್ಟಿಯ ಮನಸ್ಸು ಬೆಳಗ್ಗಿನ ಘಟನೆಯನ್ನೇ ಪದೇ ಪದೇ ನೆನಪು ಮಾಡುತ್ತಾ ದುಃಖಿಸುತ್ತಿತ್ತು . ಆ ಘಟನೆ ಮನಸಿನ ಪಟಲದಲ್ಲಿ ಬಂದ ಕೂಡಲೇ ಸಂಕಷ್ಟಿಯ ಸುಂದರ ಕಣ್ಣುಗಳು ಕೊಳಗಳಾದವು ದುಃಖವನ್ನು ಹತ್ತಿಕ್ಕಲು ಆಗದೆ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭ ಮಾಡಿದಳು
ಸಂಕಷ್ಟಿ ಅಲ್ಲಿ ಕುಳಿತ ಕ್ಷಣ ದಿಂದಲೂ ಅವಳನ್ನು ಗಮನಿಸುತ್ತಿದ್ದ ಸೂರಜ್ ಅವಳು ಅಳುವುದನ್ನು ಕಂಡು ಏನಾಗಿರಬಹುದು ಪಾಪ ಆಗಿನಿಂದ ಒಂಟಿಯಾಗಿ ಕುಳಿತು ದುಃಖಿಸುತ್ತಿದ್ದಾಳೆ ಎಂದು ಆಲೋಚಿಸುತ್ತ ಅವಳನ್ನೇ ನೋಡುತ್ತಿದ್ದನು .ಸಂಕಷ್ಟಿ ಅಳುವುದು ನೋಡಿ ಒಂದಿಬ್ಬರು ಪಡ್ಡೆ ಹುಡುಗರು ಅವಳನ್ನೇ ನೋಡುತ್ತಾ ತಿರುಗಾಡುವುದು ಕಂಡು ಇನ್ನು ತಡಮಾಡಿದರೆ ಅನಾಹುತವಾದೀತು ಎಂದು ತಿಳಿದ ಸೂರಜ್ ಅವಳ ಸಮೀಪಕ್ಕೆ ಬರುತ್ತಾನೆ.ಸೂರಜ್ ಬರುವುದು ಕಂಡು ಪಡ್ಡೆ ಹುಡುಗರ ದಂಡು ಕಣ್ಮರೆಯಾಗುತ್ತದೆ.ಸಂಕಷ್ಟಿ ಇದು ಯಾವದನ್ನು ಗಮನಿಸದೆ ಕಣ್ಣಿಗೆ ಕೈ ಹಚ್ಚಿ ಅಳುತ್ತಲೇ ಇರುವುದು ಕಂಡು ಸೂರಜ್ ನಿಧಾನವಾಗಿ ಆಕೆಯನ್ನು ಕರೆದ .ಆತನ ಕರೆ ಕೇಳಿ ಬೆಚ್ಚಿ ಕಣ್ಣು ಬಿಟ್ಟ ಸಂಕಷ್ಟಿಗೆ ತನ್ನ ಮೇಲಧಿಕಾರಿಯನ್ನು ಕಂಡು ಗಾಬರಿಯಾಯಿತು .ಆಕೆ ಕೂಡಲೇ ಎದ್ದು ಸರ್ ನೀವಿಲ್ಲಿ ಎಂದು ನಗುವ ಪ್ರಯತ್ನ ಮಾಡಿದಳು.
ಸೂರಜ್ ಅವಳನ್ನು ಕುಳಿತುಕೊಳ್ಳಲು ಹೇಳಿ ತಾನು ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಆಕೆಯನ್ನೇ ನೋಡುತ್ತಾ ಮೇಡಂ ನೀವೇನೋ ತುಂಬಾ ಬೇಸರದಲ್ಲಿ ಇರುವಂತೆ ಕಾಣುತ್ತಿದೆ.,ನನ್ನಲ್ಲಿ ಹೇಳಬಹುದಾದರೆ ಹೇಳಿಕೊಳ್ಳಿ ಆತ್ಮೀಯರಲ್ಲಿ ದುಃಖವನ್ನು ಹಂಚಿದರೆ ಅದು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ನೀವು ನನ್ನನ್ನು ನಂಬಬಹುದು ನಿಮ್ಮ ವಿಷಯವನ್ನು ನಾನು ಯಾರಲ್ಲೂ ಹೇಳುವುದಿಲ್ಲ ದಯವಿಟ್ಟು ನಿಮ್ಮ ಬೇಸರ ಚಿಂತೆಯನ್ನು ನನ್ನೊಡನೆ ಹಂಚಿಕೊಳ್ಳಿ ಎಂದು ಹೇಳುತ್ತಾನೆ.
ಸಂಕಷ್ಟಿಗೆ ಹೇಳಲೊ ಬೇಡವೋ ಎನ್ನುವ ಸಂದಿಗ್ಧ .ಸೂರಜ್ ನೇನೋ ಒಳ್ಳೆಯವನೆ ಆದರೆ ಇತ್ತೀಚೆಗೆ ತಾನೇ ಸೇರಿದ ಆತನಲ್ಲಿ ತನ್ನ ನೋವನ್ನು ಹಂಚಿಕೊಳ್ಳುವುದು ಸರಿಯೇ ಎಂದು ಆಕೆ ಚಿಂತಿಸುತ್ತಾಳೆ .ಅವಳ ಮನಸ್ಥಿತಿ ಅರಿತ ಸೂರಜ್ ಒತ್ತಾಯಿಸದೆ ಬನ್ನಿ ನಿಮ್ಮ ನೋವನ್ನು ಇನ್ನೊಮ್ಮೆ ಹೇಳುವಿರಂತೆ ಈಗ ಕತ್ತಲಾಯಿತು ನಾವಿನ್ನೂ ಹೊರಡೋಣ ನಿಮ್ಮ ಮನೆಯಲ್ಲೂ ಗಾಬರಿ ಯಾದಾರು ಎಂದ ತಕ್ಷಣ ಆಕೆ ಎದ್ದು ನಿಂತು ಹೊರಡಲು ಅನುವಾದಳು .ಸೂರ್ಯನು ಅದೀಗ ತಾನೇ ಪಶ್ಚಿಮದ ಶರಧಿಯಲ್ಲಿ ಮುಳುಗಿ ಕತ್ತಲಾವರಿಸುತ್ತಿತ್ತು. ಆಕೆ ಅವಸರದಿಂದ ಹೊರಟಾಗ ಸೂರಜ್ ಅವಳ ಜತೆಯೇ ಹೆಜ್ಜೆ ಹಾಕಿ ಬನ್ನಿ ನಿಮ್ಮನ್ನು ಮನೆ ತಲಪಿಸುತ್ತೇನೆ ಈ ಕತ್ತಲಲ್ಲಿ ನೀವು ಒಬ್ಬರೇ ಹೋಗುವುದು ಸರಿಯಲ್ಲ ಎಂದು ಹೇಳುತ್ತಾನೆ. ಆಕೆ ನಿರಾಕರಿಸಲಾಗದೆ ಅವನ ಜತೆ ಕಾರಿನಲ್ಲಿ ಕುಳಿತು ಕೊಳ್ಳುತ್ತಾಳೆ ಸೂರಜ್ ಅವಳ ಮನೆ ವಿಳಾಸವನ್ನು ಕೇಳಿ ಅವಳನ್ನು ಮನೆಯ ಸಮೀಪ ಕರೆದುಕೊಂಡು ಹೋಗುತ್ತಾನೆ ಮನೆ ಹತ್ತಿರ ಬಂದಂತೆ ಸಂಕಷ್ಟಿ ಕಾರನ್ನು ಅಲ್ಲಿಯೇ ನಿಲ್ಲಿಸಲು ಹೇಳುತ್ತಾಳೆ ಸೂರಜ್ ಕಾರು ನಿಲ್ಲಿಸಿದ ತಕ್ಷಣ ಇಳಿದು ಆತನಿಗೆ ಧನ್ಯವಾದವನ್ನು ಹೇಳಿ ಅವಸರದಿಂದ ಮನೆಕಡೆ ಹೊರಡುತ್ತಾಳೆ .ಮನೆಯ ಒಳಗಿನಿಂದ ಜೋರು ಮಾತುಗಳು ಸೂರಜ್ ನ ಕಿವಿಗಳಿಗೆ ಅಪ್ಪಳಿಸುತ್ತದೆ ಅಂತಹ ಕೆಟ್ಟ ಮಾತುಗಳಮ್ಮ ಕೇಳಿ ಸೂರಜ್ ಗೆ ಸಂಕಷ್ಟಿಯ ಮನಸ್ಥಿತಿ ಅರ್ಥವಾಗುತ್ತದೆ.ಆತ ಕಾರು ಹಿಂತಿರುಗಿಸಿ ಹೊರಡುತ್ತಾನೆ
ಇತ್ತ ಮನೆಗೆ ಬಂದ ಸಂಕಷ್ಟಿಯನ್ನು ಕಂಡು ಶಮಾ ಒಂದೇ ಸಮನೆ ಬೈಗುಳದ ಮಳೆ ಸುರಿಸುತ್ತಾಳೆ .ಸಂಕಷ್ಟಿ ಮೌನವಾಗಿ ತನ್ನ ರೂಮ್ ಸೇರಿ ಬಾಗಿಲು ಹಾಕುತ್ತಾಳೆ. ಮರುದಿನವೂ ಆಕೆ ಅದೇ ಸ್ಥಳಕ್ಕೆ ಹೋದಾಗ ಅದಾಗಲೇ ಸೂರಜ್ ಬಂದು ತಾನು ಕುಳಿತುಕೊಳ್ಳುವ ಆ ಬಂಡೆಯ ಮೇಲೆ ಕೇಳಿತಿರುವುದು ಕಂಡು ಆಕೆ ಅಲ್ಲಿಯೇ ಸ್ವಲ್ಪ ದೂರ ಇದ್ದ ಇನ್ನೊಂದು ಬಂಡೆಯ ಮೇಲೆ ಕೇಳಿತು ಎಂದಿನಂತೆ ಸಮುದ್ರದ ಅಲೆಗಳನ್ನು ನೋಡುತ್ತಾ ಇದ್ದಾಗ ಸೂರಜ್ ಅಲ್ಲಿಗೆ ಬಂದು ಸಂಕಷ್ಟಿಯನ್ನು ಎಚ್ಚರಿಸುತ್ತಾನೆ .ಬೆಚ್ಚಿ ಬಿದ್ದ ಸಂಕಷ್ಟಿ ಸೂರಜ್ ನನ್ನು ನೋಡಿ ನಗು ಬೀರುತ್ತಾಳೆ. ಸೂರಜ್ ಮತ್ತು ಸಂಕಷ್ಟಿ ತುಂಬಾ ಹೊತ್ತು ಮೌನವಾಗಿ ಒಬ್ಬರನ್ನು ಒಬ್ಬರು ನೋಡುತ್ತಾ ಕಳೆಯುತ್ತಾರೆ.
ನಿನ್ನೆಯದಿನ ನಿಮ್ಮ ಮನೆಯಲ್ಲಿ ನಿಮ್ಮನ್ನು ತುಂಬಾ ತರಾಟೆಗೆ ತೆಗೆದು ಕೊಂಡಿರಬೇಕಲ್ಲ ಮಾತು ಹೊರಗೂ ಕೇಳುತ್ತಿತ್ತು ಎಂದು ಸೂರಜ್ ಹೇಳಿದಾಗ ಆಕೆ ಅವಮಾನದಿಂದ ತಲೆ ತಗ್ಗಿಸುತ್ತಾಳೆ ಅಪ್ರಯತ್ನವಾಗಿ ಆಕೆಯ ಕಣ್ಣಿನಿಂದ ಕಣ್ಣೀರು ಧಾರಾಕಾರವಾಗಿ ಸುರಿಯುತ್ತದೆ.ಸೂರಜ್ ನಿನ್ನೆಯಂತೆ ಆಕೆಯನ್ನು ತಡೆಯದೆ ಆಕೆ ಅಳುವಷ್ಟು ಅಳಲಿ ಎಂದು ಮೌನವಾಗಿ ಕುಳಿತು ಕೊಳ್ಳುತ್ತಾನೆ..ಸ್ವಲ್ಪ ಹೊತ್ತಿನಲ್ಲಿ ಸಂಕಷ್ಟಿ ತನ್ನನ್ನು ತಾನು ಸಂತೈಸುತ್ತ ಸೂರಜ್ ಕಡೆ ತಿರುಗಿ ಸಾರಿ ಎನ್ನುತ್ತಾಳೆ. ಸೂರಜ್ ಆಕೆಯ ಮನಸ್ಥಿತಿಯನ್ನು ಅರಿತು ನೋಡಿ ನೀವೇನೋ ಬೇಸರದಲ್ಲಿ ಇರುವಂತೆ ಕಾಣುತ್ತದೆ ಏನಿದ್ದರೂ ನನ್ನಲ್ಲಿ ಹೇಳಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೆ ಇದೆ ಎನ್ನುತ್ತಾನೆ. ಸಂಕಷ್ಟಿ ತಮ್ಮ ಮತ್ತು ಆತನ ಹೆಂಡತಿ ನಾನು ಮಾಡಿದ ಸಹಾಯವನ್ನು ಮರೆತು ತನ್ನನ್ನು ದಿನಾ ಮಾತಿನ ಬಾಣಗಳಿಂದ ಇರಿಯುವುದನ್ನು ತಿಳಿಸಿ ಪುನಃ ಕಣ್ಣೀರಾಗುತ್ತಾಳೆ..
ಆಗ ಸೂರಜ್ ನಾನೂ ಅದೇ ಪರಿಸ್ಥಿತಿಯಲ್ಲಿ ಇದ್ದೇನೆ ತಂದೆ ಸತ್ತಾಗ ಚಿಕ್ಕವರಾಗಿದ್ದ ತಂಗಿ ತಮ್ಮಂದಿರನ್ನು ಒಂದು ಹಂತಕ್ಕೆ ತಂದು ಮದುವೆ ಮಾಡಿ ತಾನು ಮಾತ್ರ ಅವರಿಗಾಗಿ ಮದುವೆ ಆಗದೆ ತನ್ನೆಲ್ಲಾ ಆಶೆಗಳನ್ನು ಹತ್ತಿಕ್ಕಿ ಅವರನ್ನು ಬೆಳೆಸಿದ ಬಗ್ಗೆ ಹೇಳಿ ಆ ದಿನ ತಮ್ಮನ ಹೆಂಡತಿ ಯಾಡಿದ ಮಾತು ಇಂದಿಗೂ ನನ್ನನ್ನು ಶೂಲದಂತೆ ಚುಚ್ಚುತ್ತಿದೆ ಎಂದು ಹೇಳಿ ಮ್ಲಾನವದನ ನಾಗುತ್ತಾನೆ.ಆಗ ಸಂಕಷ್ಟಿಯು ತನ್ನ ಬಗ್ಗೆ ಹೇಳಿ ತಂದೆ ತಾಯಿಯರು ಆಕಸ್ಮಿಕವಾಗಿ ಸತ್ತಾಗ ಹಿರಿಯ ಮಗಳಾದ ತಾನು ತನ್ನ ತಂಗಿ ತಮ್ಮಂದಿರ ಜವಾಬ್ದಾರಿ ತೆಗೆದುಕೊಂಡು ಅವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಬಗ್ಗೆ ತಿಳಿಸಿ ಈಗ ಅವರೆಲ್ಲಾ ಅವರವರ ಸಂಸಾರದ ಜತೆ ಹಾಯಾಗಿದ್ದು ತನ್ನನ್ನು ದೂರ ಇಟ್ಟಿರುವ ಬಗ್ಗೆ ತಿಳಿಸಿ ನೊಂದುಕೊಳ್ಳುತ್ತಾಳೆ.
Comments
Post a Comment