ಸೆರೆಹಿಡಿದ ಭಾವನೆ
ಮುಚ್ಚಿದ ಕರಗಳೆಡೆಯಿಂದ ಇಣುಕುವ ಕಣ್ಣೋಟ
ನಿನ್ನನೇ ನೋಡುತ್ತಾ ನಗುವ ಚೆಲು ನೋಟ
ಕಣ್ಣು ತುಟಿಗಳಲಿ ಹೊಮ್ಮುತ್ತಿದೆ ನಸುನಗು
ಮನದ ಭಾವನೆಗಳ ಹೊರಸೂಸುತ್ತಿದೆ ಚೆಲುನಗು
ಕುಂಚದಲಿ ಸೆರೆಹಿಡಿದ ಭಾವನೆಗಳೆಲ್ಲ
ಅದ್ಬುತ ಕಲಾಕಾರನೇ ನೀ ನನ್ನ ನಲ್ಲ
ನಿನ್ನ ಕುಂಚದಲಿ ಕಂಡೆ ನನ್ನನೇ
ಒಲವ ಭಾಷೆಯ ತಿಳಿದೆ ನಾ ಮೆಲ್ಲನೆ
ಕಣ್ಣ ನೋಟದಲಿ ಭಾವನೆಗಳ ಸೆಳೆತ
ಮನದಲಿ ತುಂಬಿದೆ ನಿನ್ನದೆಯ ಉಲಿತ
ನನ್ನದೇ ಭಾವನೆಗಳು ಚಿತ್ರದಲ್ಲಿ ತುಂಬಿದೆ
ಮನಸು ನಿನ್ನೊಡನಾಟದ ಕ್ಷಣಗಳ ನೆನೆದಿದೆ
ಹೇಳಬೇಕೆಂದಿದ್ದೆ ನಿನಗೆ ಅಂದೆ
ನನ್ನ ಮನದ ಭಾವನೆಗಳ ಬರಿದೆ
ಕಂಗಳ ನೋಟದಲಿ ಮಧುರ ಭಾವನೆ ಕಮ್ನನೆ
ನಾಚಿಕೆ ತೆರೆಯ ಸರಿಸುತ ನಗು ನೀ ಸುಮ್ಮನೆ
ಒಲವ ರಸವ ಸುರಿಸುತ್ತಾ ಬಾ ನಲ್ಲ
ನಿನ್ನ ಕುಂಚದಲಿ ನನ್ನನ್ನೇ ತಿಳಿದೆಯಲ್ಲ
ಪಂಕಜಾ. ಕೆ.
Comments
Post a Comment