ಗಜಲ್
ಬಾಳಿನಂಗಳದಲ್ಲಿ ಹೊಸಚಿಗುರು ತುಂಬಿದೆ ಸಖ
ವಸಂತನಾಗಮನದಿಂದ ಹರುಷ ತಂದಿದೆ ಸಖ
ಹೂವುಗಳು ದುಂಬಿಗಳ ಆಕರ್ಷಿಸುತಿವೆ
ಮೈ ಮನಕೆ ಹುರುಪು ತುಂಬುತಿದೆ ಸಖ
ಮೂಡಣದಲ್ಲಿ ರವಿ ಮೂಡುವ ಸೊಬಗು ನೋಡು
ಬಾನಿನಲಿ ಬಣ್ಣಗಳ ಕಲಸಿ ಮುದ ಕೊಡುತಿದೆ ಸಖ
ಪ್ರಕೃತಿ ಸೌಂದರ್ಯದಲಿ ತುಂಬಿದೆ ವಿಸ್ಮಯ
ಮುಂಜಾನೆಯ ನೋಟ ಕಣ್ಣು ಸೆಳೆಯುತಿದೆ ಸಖ
ಕೊಳದಲ್ಲಿ ಅರಳಿದೆ ತಾವರೆ ಪಂಕಜಾ
ನಿನ್ನ ಮನಸಿನಂತೆ ಶುಭ್ರವಾಗಿದೆ ಸಖ
ಪಂಕಜಾ. ಕೆ
Comments
Post a Comment