Skip to main content

ನಾಟಕ ರಚನೆ ಕೊರೊನಾ ಜಾಗೃತಿ ಸಾಹಿತ್ಯ ಸಂಕ್ರಾಂತಿ

ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ 

ನಾಟಕ ರಚನೆ 

ಕೊರೊನಾ ಜಾಗೃತಿ

ದೃಶ್ಯ .1
ವಿಮಾನ ನಿಲ್ದಾಣದ ಹೊರಗೆ  ವೈಭವ್ ನ ತಂದೆ ಸಂಕೇತ್ ತಾಯಿ  ಸರ್ವಾಣಿಹಾಗೂ ಇನ್ನೊಂದು ಕಡೆ ರಾಜುವಿನ  ತಂದೆ  ಮಲ್ಲೇಶ್ ತಾಯಿ. ದುರ್ಗಾ  ಕಾತರದಿಂದ ಕಾಯುತ್ತಿರುವುದು

ಸಂಕೇತ್. ...ಈಗ ಎಲ್ಲಾ ಕಡೆ ಕೊರೊನಾ ಇರುವುದರಿಂದ ನಮ್ಮ ಮಗ ವೈಭವ್ ಆದಷ್ಟು ಬೇಗ ಊರಿಗೆ ಬಂದರೆ ಒಳ್ಳೆಯದು
ಸರ್ವಾಣಿ...ಹೌದು ನಮಗೆ ಇರುವವ ಒಬ್ಬ ಮಗ ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ ಯಾವಾಗ ಅವನನ್ನು ನೋಡುವೇನೋ ಎಂದು ಮನಸು ತುಡಿಯುತ್ತಿದೆ

ಅಷ್ಟರಲ್ಲಿ ವಿಮಾನ ನಿಲ್ದಾಣದಿಂದ ವೈಭವ್ ಹೊರಗೆ ಬರುವುದು ಕಂಡು

ಸಂಕೇತ್..ಆಗೋ ನಿನ್ನ ಮಗ ಬಂದ ಇನ್ನು ನೀನು ಉಂಟು ಅವನು ಉಂಟು ಈ ಪಾಪದ ಪ್ರಾಣಿಯ ನೆನಪು  ಆಗುತ್ತದೋ ಇಲ್ಲವೋ  (ನಗು)
ಸರ್ವಾಣಿ..ಹೋಗಿ ನೀವೊಬ್ಬರು ಇಲ್ಲಿಯೂ ನನ್ನನ್ನು ಕೆಣಕದಿದ್ದರೆ ನಿಮಗೆ ಆಗೋಲ್ಲವೇ ( ಹುಸಿ ಮುನಿಸಿನಲ್ಲಿ)
ಸಂಕೇತ್..ಹತ್ತಿರ ಬಂದು ಬಾ ಮಗನೇ  (ಕೈ ಚಾಚುತ್ತಾರೆ ಹಸ್ತಲಾಘವಕ್ಕಾಗಿ)
ಸಂಕೇತ್  (ದೂರದಿಂದವೇ) ಅಮ್ಮ ಅಪ್ಪ ನೀವಿಬ್ಬರೂ ನಿಮ್ಮ ಕಾರಲ್ಲಿ ಹೊರಡಿ  ನಾನು ಸ್ವಲ್ಪ ಕೆಲಸ ಮುಗಿಸಿ ಬರುತ್ತೇನೆ
ಸರ್ವಾಣಿ..ಏನು ಕೆಲಸವೋ ಮಗ ನಾವು ಕಾಯುತ್ತೇವೆ ಒಟ್ಟಿಗೆ ಹೋಗೋಣ 
ಸಂಕೇತ್..ಹೌದು ಮಗು ನಿನಗಾಗಿ ಅಮ್ಮ ಎಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ ನೆನಪಿದೆಯೇ  ಹತ್ತಿರ ಬಾ ಅಮ್ಮನನ್ನು ತಬ್ಬಿಕೊ
ವೈಭವ್.ಅಪ್ಪಾ ನಾನಿನ್ನು ಈಗ ತಾನೇ ಬರುತ್ತಾ ಇದ್ದೇನೆ ಅದೆಲ್ಲಾ ಮನೆಯಲ್ಲಿ ಮಾಡುವ ನನ್ನ ಕೆಲಸ ಯಾವಾಗ ಮುಗಿಯುತ್ತದೋ
(ತಂದೆ ತಾಯಿ ನಿರಾಶೆಯಿಂದ ) ಮಗ ಅಮೆರಿಕಕ್ಕೆ ಹೋಗಿ ತುಂಬಾ ಬದಲಾಗಿದ್ದಾನೆ (ಹೊರಡುತ್ತಾರೆ)
ವೈಭವ್....ಅಬ್ಬಾ ಅವರನ್ನೇನೋ ಈಗ ಸಾಗು  ಹಾಕಿದೆ ಇನ್ನು 14 ದಿನ ಹೇಗಪ್ಪಾ ಇವರನ್ನು ಸಮಾಧಾನಿಸುವುದು   ಬೇಸರದಲ್ಲಿ ಹೊರಡುತ್ತಾನೆ

ಇತ್ತ ರಾಜು ಬಂದವನೇ ತಂದೆ ತಾಯಿ ಇಬ್ಬರನ್ನು ತಬ್ಬಿಕೊಂಡು  ಅಮ್ಮ ಅಪ್ಪಾ ನಿಮ್ಮನ್ನು ನಾನು ನೋಡುತ್ತೇನೋ ಇಲ್ಲವೋ ಎಂದು ಭಯವಾಗಿತ್ತು ಬಂದು ಬಿಟ್ಟೆ ನಿಮಗಾಗಿ
ಮಲ್ಲೇಶ್.....ಅಂತೂ ಸುಖವಾಗಿ ಬಂದು ತಲಪಿದೆಯಲ್ಲ  ಬಾ ಮನೆಗೆ ಹೋಗೋಣ(ಎಲ್ಲರೂ ತೆರಳುತ್ತಾರೆ)

ದೃಶ್ಯ 2..

ವೈಭವ್ ಬಂದುದು ತಿಳಿದು ಅಮ್ಮ ಓಡೋಡಿ ಬಂದು. ಮಗನನ್ನು ತಬ್ಬಲು ನೋಡಿದಾಗ ವೈಭವ್ ತಿರುಗಿಯೂ ನೋಡದೆ ಸರ ಸರ ಎಂದು ತನ್ನ ರೂಮಿಗೆ ಹೋಗಿ ಬಾಗಿಲು ಹಾಕುತ್ತಾನೆ

ಸರ್ವಾಣಿ....ಇವನಿಗೆ ಏನಾಗಿದೆ ನಮ್ಮ ಮಗ  ಯಾಕೆ ಹೀಗಾದ ಅಮ್ಮ ಎಂದರೆ ಎಷ್ಟು ಪ್ರೀತಿ ಇತ್ತು ನನ್ನ ಮಡಿಲಲ್ಲೇ ಕೈತುತ್ತು ತಿನ್ನುತ್ತಿದ್ದ (ಅಳು)
ಸಂಕೇತ್..ಅಳಬೇಡ ಸರ್ವಿ  ಏನೋ ಪ್ರಯಾಣದ ಆಯಾಸ ಇರಬಹುದು ಸಮಾಧಾನ ಮಾಡಿಕೊ ಇನ್ನು ಇಲ್ಲಿಯೇ ಇರ್ತಾನಲ್ಲ ಮಡಿಲಲ್ಲಿ ತಟ್ಟಿ ಮಲಗಿಸುಆಯ್ತಾ (ನಗು)
ಸರ್ವಾಣಿ..ನೋಡಿ ನಿಮಗೆ ಯಾವಾಗ ತಮಾಷೆ ಮಾಡಬೇಕು ಯಾವಾಗ ಮಾಡಬಾರದು  ಎಂದು  ತಿಳಿಯುವುದಿಲ್ಲ ನಾನಿಲ್ಲಿ ಮಗನ ನಿರೀಕ್ಷೆಯಲ್ಲಿ ಊಟ ತಿಂಡಿ ತಿನ್ನದೆ ಕಾಯ್ತ ಇದ್ದರೆ ಅವನು ತಿರುಗಿಯೂ ನೋಡದೆ  ಹೇಗೆ ಹೋಗಿ ಬಿಟ್ಟ ನೋಡಿಂದ್ರೆ (ಪುನ :ಅಳು)
ಸಾಕೇತ್..ಹೀಗೆ ಅಳುತ್ರಾ ಇರ್ತಿಯೊ ಅಲ್ಲಾ ಮಗನಿಗೆ ಏನಾದರೂ ತಿಂಡಿ ಕಾಪಿ ಕೊಡುತ್ತೀಯೋ
ಸರ್ವಾಣಿ...ಅಯ್ಯೋ ನನ್ನ ಮರೆವಿಗಿಷ್ಟು ಕೈಯನ್ನು ಸೆರಗಿಗೆ ಒರೆಸುತ್ತಾ ಒಳಗೆ ಹೋಗುತ್ತಾರೆ
ಸಾಕೇತ್ ....ಯಾಕೋ ವೈಬು ಹೀಗೆ ಮಾಡುತ್ತಿಯಾ ನಿನ್ನ ಅಮ್ಮ 1 ವಾರದಿಂದ ನೀನು ಬರುತ್ತಿಯಾ ಎಂದು ಎಷ್ಟು ಸಂಭ್ರಮ ಪಡುತ್ತಿದ್ದರು ನೀನು ನೋಡಿದರೆ ಹೀಗೆ ಮಾಡಿ ಅವಳಿಗೆ ಬೇಸರ  ಮಾಡುವುದು ಸರಿಯೇ
ವೈಭವ್ (ರೂಮಿನ ಬಾಗಿಲು ತೆಗೆದು) ಅಪ್ಪಾ ನೀವಾದರು ಅರ್ಥ ಮಾಡಿಕೊಳ್ಳುತ್ತಿರ ಎಂದು ತಿಳಿದಿದ್ದೇನೆ ಅಮ್ಮನಿಗೆ ನೀವೇ ಹೇಳಿ ನಾನು 14 ದಿನ ಕ್ವಾರೆಂಟೈನ್ ಸಮಯ ಮುಗಿಯುವ ವರೆಗೆ ಯಾರನ್ನು ಹತ್ತಿರ ಸೇರಿಸುವುದಿಲ್ಲವೆಂದು ವಿಮಾನ  ನಿಲ್ದಾಣದಲ್ಲಿ ಅಫಿಡವಿಟ್ ಕೊಟ್ಟು ಬಂದಿದ್ದೇನೆ ದಯವಿಟ್ಟು ಅರ್ಥಮಾಡಿಕೊಳ್ಳಿ (ಕೈಮುಗಿಯುತ್ತಾನೆ)
 ಸರ್ವಾಣಿ ...(ಕಾಪಿ ತಿಂಡಿ ಹಿಡಿದುಕೊಂಡು ಬಂದು)
ಬಾರೋ ವೈಭು ಕಾಪಿ ಕುಡಿಯೋಣ ನಿನ್ನ ಜತೆಯಲ್ಲಿ ಕುಡಿಯಲಿಕ್ಕೆ ಎಂದು ನಾವು ಉಪವಾಸ ಇದ್ದೇವೆ
ವೈಭವ್..ಅಮ್ಮ ಕಾಪಿ ತಿಂಡಿ  ಅಲ್ಲೇ ಇಡು ನೀವು ತಿನ್ನಿ ನಾನು ಸ್ವಲ್ಪ ಹೊತ್ತು ಬಿಟ್ಟು ತಿನ್ನುತ್ತೇನೆ(ದೈನ್ಯದಿಂದ ತಂದೆಯ ಕಡೆ ಮುಖ ಮಾಡಿ)ಅಪ್ಪ ನೀವಿಬ್ಬರೂ ಕಾಪಿ ತಿಂಡಿ ತಿನ್ನಿ ನನಗೆ ಸ್ವಲ್ಪ ದಿವಸ ರೂಮಿನ ಹೊರಗೆ ಇಡಬೇಕು ನಾನು ತಿನ್ನುತ್ತೇನೆ (ಕೈ ಮುಗಿಯುತ್ತಾನೆ)
ಸರ್ವಾಣಿ...ಯಾಕೋ ಹೀಗೆ ಮಾಡಿ ನನ್ನ ಹೊಟ್ಟೆ ಉರಿಸುತ್ತೀಯೋ ನಿನಗೇನೂ ಆಗಿಲ್ಲ  ಇಷ್ಟು ದಿವಸದ ಮೇಲೆ ಬಂದಿದ್ದಿಯಾ ನಮ್ಮ ಜತೆ ಕುಳಿತು ಊಟ ತಿಂಡಿ ಮಾಡು
ವೈಭವ್.(ನಿಷ್ಠುರವಾಗಿ) ಅಮ್ಮ ನಿನಗೆಷ್ಟು ಸಾರಿ ಹೇಳಲಿ ದಯವಿಟ್ಟು ಅಮ್ಮ ನನ್ನ ಅರ್ಥ ಮಾಡಿಕೊ  ಸ್ವಲ್ಪ ದಿನ ಅಷ್ಟೇ  ಎಂದು ಹೇಳುತ್ತಾ ಹೊರಟು ಹೋಗುತ್ತಾನೆ
ಸಂಕೇತ್. ..ಸರ್ವು ಸಮಾಧಾನ ಮಾಡಿಕೊ ಅವನಿಗೆ ಏನು ಆಗಿಲ್ಲ ಆದರೆ  ವಿದೇಶದಿಂದ ಬಂದವರು 14 ದಿನ ಪ್ರತ್ಯೇಕ ಇರಬೇಕು ಎಂದು ಸರಕಾರ ಹೇಳಿದೆ
ಸರ್ವಾಣಿ..ಸರಕಾರಕ್ಕೆ ಏನು ಗೊತ್ತಿದೆ ನಮ್ಮ ಮಗ ಎದುರೆ ಇದ್ದರೂ  ಹೀಗೆ ಅಪರಿಚನಂತೆ ವರ್ತಿಸುವಾಗ ಆಗುವ ನೋವು ಅವರಿಗೇನು ಗೊತ್ತು 
ಸಂಕೇತ್.. ಬಾ ಸರ್ವಾಣಿ ಕಾಯೋಣ  ದೇವರು ಇದ್ದಾನೆ 

ಇತ್ತ ರಾಜು ತಂದೆ ತಾಯಿಯರೊಡನೆ ಮನೆಗೆ ಬಂದು ಖುಷಿಯಿಂದ ಊಟ ತಿಂಡಿ ಮಾಡುತ್ತಾನೆ ಬೆಳಿಗ್ಗೆ ಎದ್ದು ತನ್ನ ಅಂಗಡಿಗೆ ಹೊರಡುತ್ತಾನೆ
  ಮಲ್ಲೇಶ್ ...ನಾಲ್ಕು ದಿನ ರೆಸ್ಟ್ ತೆಗೆದುಕೊ  ಅಂಗಡಿಗೆ 4 ದಿನ ಕಳೆದು ಹೋದರಾಯಿತು
ರಾಜು..ಇಲ್ಲ ಅಪ್ಪ  2 ತಿಂಗಳಿಂದ  ನಾನು ಇಲ್ಲದೆ   ಆಫೀಸ್ ನಲ್ಲಿ ಕೆಲಸ ಕಾರ್ಯ ಹೇಗಾಗಿದೆಯೋ ಇಂದು ಹೋಗಿ ಬರುತ್ತೇನೆ ಈಗ ಮದುವೆ ಸೀಸನ್  ಹೋಗದೆ ಇದ್ದರೆ ಮೂರ್ಖ ಆದೇನು (ಹೊರಡುತ್ತಾನೆ)
ಮಲ್ಲೇಶ್.. ಗೌರ ನಮ್ಮ ಮಗ ಕೆಲಸದಲ್ಲಿ  ತುಂಬಾ ಚುರುಕು ನೋಡಿದೆಯ 
ಗೌರಿ..ಏನೋ ಒಂದೆರಡು ದಿನ ರೆಸ್ಟ್ ತೆಗೆದುಕೊಂಡು ಹೋಗಬಹುದಿತ್ತು ನಮಗೇನು ಕಮ್ಮಿ ಆಗಿದೆ ಕುಳಿತು ಉಂಡರೂ ಕರಗದಷ್ಟುಆಸ್ತಿ ಇದೆ
ಮಲ್ಲೇಶ್....ಇರಲಿ ಮನೆಯಲ್ಲಿ ಕುಳಿತು ಅವನಿಗೂ ಉದಾಸೀನ  (ಇಬ್ಬರು ಹೊರಡುತ್ತಾರೆ)

ದೃಶ್ಯ..3

 7 ದಿನ ಕಳೆಯಿತು  ವೈಭವ ಜ್ವರ ಕೆಮ್ಮು ವಿನಿಂದ ನರಳುತ್ತಾನೆ ಎದ್ದು ಸಹಾಯವಾಣಿಗೆ ಕರೆ ಮಾಡುತ್ತಾನೆ
ಸಂಕೇತ್.ಮಗ ವಿಪರೀತ ಕೆಮ್ಮುತ್ತಿದ್ದಿಯ ಡಾಕ್ಟರ್ ರಲ್ಲಿ ತೋರಿಸ ಬಾರದೆ 
ವೈಭವ್. ರೂಮಿನ ಒಳಗಿನಿಂದವೇ)
ಅಪ್ಪಾ ಆಂಬ್ಯುಲೆನ್ಸಗೆ ಹೇಳಿದ್ದೇನೆ ನೀವು ಯಾರು ಹತ್ತಿರ ಬರಬೇಡಿ ಅಮ್ಮನಿಗೆ ಧೈರ್ಯ ಹೇಳಿ   ಅಷ್ಟರಲ್ಲಿ
ಇಬ್ಬರು ಸಮವಸ್ತ್ರ ಧರಿಸಿ ಮಾಸ್ಕ್ ಹಾಕಿದವರು ವೈಭವ್ ನನ್ನು ಕರೆದುಕೊಂಡು ಹೋಗುತ್ತಾರೆ
ಸರ್ವಾಣಿ..ಏನಾಯಿತು ನನ್ನ ಮಗುವಿಗೆ ನಾನು ಈಗಲೇ ಅವನನ್ನು ನೋಡಬೇಕು
ಸಂಕೇತ್ .. ಅವನಿಗೇನು ಆಗಿಲ್ಲ ಹೋಗೋಣವಂತೆ  ನೀನು ಹೊರಡು
ಇಬ್ಬರು ಹೋಗುತ್ತಾರೆ. ..(ಆಸ್ಪತ್ರೆಯಲ್ಲಿ). ವೈಭವ್ ತಂದೆ ತಾಯಿಯರ ಪರೀಕ್ಷೆ ಮಾಡಲಾಗಿ ಅವರಿಗೆ ಕೊರೊನಾ ನೆಗೆಟಿವ್  ಎಂದು ತಿಳಿಯುತ್ತದೆ ಅವನ ನೆರೆಮನೆಯವರು ಎಲ್ಲರೂ ವೈಭವ್ ಹೊರಗೆ ಬರಲೇ ಇಲ್ಲ ಎಂದು ಹೇಳುತ್ತಾರೆ 
ಸಂಕೇತ್ ..ನೋಡಿದೆಯ ನಮ್ಮ ಮಗ ಅವರು ಹೇಳಿದಂತೆ ಕೇಳಿ ಗೃಹಬಂಧನದಲ್ಲಿ ಇದ್ದುದರಿಂದ  ಈಗ ನಮಗಾರಿಗೂ ಕೆಟ್ಟ ಕಾಯಿಲೆ ಬರಲಿಲ್ಲ
ಸರ್ವಾಣಿ ....ಮಗ ನಿಗೆ ಕಡಿಮೆ ಆದರೆ ಸಾಕು (ಕೈ .ಮುಗಿದು ದೇವರಿಗೆ ಹರಕೆಯಿಡುತ್ತಾಳೆ)
ಸಂಕೇತ್.. ಕಡಿಮೆ ಆಗುತ್ತದೆ  ಸರ್ವು  ನೀನೇನು  ಭಯಪಡಬೇಡ ನಮ್ಮ ಮಗ ಯಾರಿಗೂ ಇದನ್ನು ಅಂಟಿಸಿಲ್ಲವಲ್ಲ ಅದಕ್ಕಾಗಿ ಹೆಮ್ಮೆ ಪಡೋಣ

ಇತ್ತ ರಾಜುವಿನ ಮನೆಯಲ್ಲಿ ರಾಜು ತೀವ್ರ ಅಸ್ವಸ್ಥಗೊಂಡಾಗ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಪರೀಕ್ಷಿಸಿದ ಡಾಕ್ಟರ್ ರಾಜು ಕೊರೊನಾ.ಪಾಸಿಟಿವ್ ಎಂದು ಅವನಿಗೆ  ಚಿಕಿತ್ಸೆ ಕೊಡುತ್ತ ಅವನ ತಂದೆ ತಾಯಿಯರನ್ನು ಪರೀಕ್ಷಿಸುತ್ತಾರೆ ಅವರಿಗೂ ಪ್ರಾರಂಭದ  ಹಂತದಲ್ಲಿರುವುದು ತಿಳಿದು ಅವರನ್ನು  ಅಡ್ಮಿಟ್ ಮಾಡಿಕೊಳ್ಳುತ್ತಾರೆ   ರಾಜುವಿಗೆ ಕೊರೊನಾ ಇರುವುದು ತಿಳಿದು ಅವನ ಸಂಪರ್ಕಕ್ಕೆ ಬಂದವರು ಎಲ್ಲರೂ ಸ್ವಯಂ ಪ್ರೇರಿತರಾಗಿ  ಮಾತ್ರವಲ್ಲದೆ  ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸುತ್ತಾರೆ ಅವರಲ್ಲೂ ಪ್ರಾರಂಭಿಕ ಚಿನ್ನೇ ಇರುವುದು ಕಾಣಿಸುತ್ತದೆ.

ದೃಶ್ಯ 4

..ವೈಭವ್ ಆಸ್ಪತ್ರೆಯಿಂದ ಹಿಂತಿರುಗಿ  ಬಂದು
ಅಮ್ಮ ಅಪ್ಪಾ ಇಬ್ಬರನ್ನು ತಬ್ಬಿಕೊಳ್ಳುತ್ತಾನೆ
 ವೈಭವ್..ನಮಗೆ ವಿಮಾನ ನಿಲ್ದಾಣದಲ್ಲಿ ಕೊಟ್ಟ ಸೂಚನೆಯಂತೆ ನಾನು ನಡೆದುಕೊಂಡು ನಿನಗೆ ಬೇಸರ ಮಾಡಿದೆ ಕ್ಷಮಿಸು ಅಮ್ಮಾ
ಈ ಕೊರೊನಾ ಅನ್ನುವುದು ಸ್ವಚ್ಛತೆಯಿಲ್ಲದಿದ್ದರೆ ಬರುವ ರೋಗ ಅದಕ್ಕೆ ಮದ್ದು ಇಲ್ಲ ಆದರೆ  ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಗುಣವಾಗುತ್ತದೆ  ರೋಗ ಹರಡದಂತೆ ನಾವು ಜಾಗ್ರತೆ ಇರಬೇಕು  ,ಅಂತರವನ್ನು ಕಾಯಬೇಕು, ಕೈ ಕುಲುಕುವುದು, ತಬ್ಬಿಕೊಳ್ಳುವುದು , ಕೆಮ್ಮು ಶೀತ ಆದಾಗ ಬಾಯಿಗೆ ಕೈ ಹಿಡಿಯುವುದು ,ಮಾಸ್ಕ್ ಧರಿಸಿ ಓಡಾಡುವುದು  ಕೊರೊನಾ ರೋಗ ಇರುವವರು ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು ,ಇತರರು ರೋಗಿಯ ಸಂಪರ್ಕಕ್ಕೆ ಬಾರದ ಹಾಗೆ ಜಾಗ್ರತೆಯಿಂದ ಇರುವುದು, ಗಂಟಲು ಒಣಗದಂತೆ  ಆಗಾಗ ಬಿಸಿ ನೀರು ಕುಡಿಯುವುದು , ಉಪ್ಪು ಅರಸಿನ ಬೆರೆಸಿದ ಬಿಸಿನೀರಿನಲ್ಲಿ ಗಂಟಲನ್ನು ಗಳ ಗಳ ಮಾಡಿ ತೊಳೆಯುವುದು ,ಕೈಗಳನ್ನು ಸೋಪು ಹಾಕಿ ಆಗಾಗ ತೊಳೆಯುವುದು ದಾರಿ ಬದಿಯ ತಿಂಡಿ ತಿನ್ನದೆಇರುವುದು  ಎಲ್ಲೆಂದರಲ್ಲಿ ಉಗುಳುವುದು, ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಹಾಕದೆ ಸ್ವಚ್ಛ ಪರಿಸರ ಇರುವಂತೆ ನೋಡಿಕೊಳ್ಳುವುದು,ಆದಷ್ಟು ಮನೆಯ ಒಳಗೆಯೇ ಇರುವುದು ,ಹೊರಗೆ ಹೋಗ ಬೇಕಾದ ಅನಿವಾರ್ಯತೆ ಇದ್ದರೆ ಸೂಕ್ತ ಮಾಸ್ಕು  ಧರಿಸಿ ಹೋಗಿ ಕೂಡಲೇ ಬರುವುದು ಇತ್ಯಾದಿ ಸಣ್ಣ ಪುಟ್ಟ   ಜಾಗ್ರತೆಯನ್ನು ತೆಗೆದುಕೊಳ್ಳುವುದರಿಂದ ರೋಗ ಬಾರದಂತೆ ಮತ್ತು ಹರಡದಂತೆ  ಮಾಡಬಹುದು ಆ ರೀತಿಯಾಗಿ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು  ಮಾತ್ರವಲ್ಲದೆ  ವಿಶ್ವದೆಲ್ಲೆಡೆ ಕೊರೊನಾ ವ್ಯಾಧಿಯನ್ನು ಹೊಡೆದೋಡಿಸಬಹುದು ಎಲ್ಲರೂ ಜಾಗೃತರಾಗಿರೋಣ ಕೊರೊನಾ ಮಾರಿಯನ್ನು ದೇಶದಿಂದ ತೋಲಗಿಸೋಣ
ಜೈ ಹಿಂದ್ 

ಪಂಕಜಾ.ಕೆ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020