ಮನೆಯಲ್ಲೇ ಲಾಕ್ (ಲೇಖನ)
ಅಯ್ಯೋ ಏನ್ರಿ ಇದು ಮನೆಯಲ್ಲಿ ನಾವೆಲ್ಲಾ.ಒಟ್ಟಿಗೆ ಜತೆಯಾಗಿ ಇದ್ದೇವೆ ಅಂತ ಅಷ್ಟೇ. ಒಬ್ಬೊಬ್ಬರು ಒಂದೊಂದು ಕೊಠಡಿಯಲ್ಲಿ ಕುಳಿತು ಮೊಬೈಲ್ ಕೈಯಲ್ಲಿ ಹಿಡಿದರೆ ಪ್ರಪಂಚವೇ ಮರೆತು ಹೋಗುತ್ತದೆ ಅಲ್ಲವೇ ?ಮನೆಯ ಹೆಂಗಸರಿಗೆ ಮಾತ್ರ ತಪ್ಪದ ಕೆಲಸದ ಗಂಟು ನೋಡ್ರಿ .ಎಲ್ಲರೂ ಮನೆಯಲ್ಲೇ ಇರುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮನೆಕೆಲಸ ಎಂದು ಬಿಡುವಿಲ್ಲದೆ ಸೋತ ಆಕೆಗೆ ತನಗಾಗಿ ಸಿಗುವ ಸಮಯ ಅತ್ಯಲ್ಪ ಕಣ್ರೀ. ಒಟ್ಟಿಗೆ ಊಟ ತಿಂಡಿಗೇನೋ ಕುಳಿತರೂ ಕೈಯಲ್ಲಿರುವ ಮೊಬೈಲ್ ತನ್ನೆಡೆಗೆ ಅವರೆಲ್ಲರ ಮೊಗವ ಸೆಳೆದುದು ನೋಡಿ ನಿಟ್ಟುಸಿರು ಬಿಡೋದೇ ಆಯ್ತು ಕಣ್ರೀ
ನಿಮಗೇನ್ರಿ ಮನೆಯಲ್ಲಿ ಆರಾಮ ಎನ್ನುವವರಿಗೆ ಮನೆ ಗೃಹಿಣಿ ಕಷ್ಟ ಒಂದು ದಿನ ಮನೆಯಲ್ಲಿದ್ದರೆ ಮಾತ್ರ ತಿಳಿದೀತು ನೋಡ್ರಿ. ಲಾಕ್ ಡೌನ್ನಿಂದ ಮನೆಕೆಲಸಕ್ಕೆ ಜನ ಇಲ್ಲ ಗ್ರಿಹಿಣಿ ಯ ಕೆಲಸಕ್ಕೆ ಲಾಕ್ ಡೌನ್ ಇಲ್ಲಾ ಕಣ್ರೀ.ಎಲ್ಲಾ ಕೆಲಸ ಒಬ್ಬಳೇ ಮಾಡಬೇಕು ನೋಡ್ರಿ. ಸಾಕಪ್ಪಾ ಸಾಕು ಅನಿಸಿ ಬಿಟ್ಟೆತಿ ಕಣ್ರೀ ಆದಷ್ಟು ಬೇಗ ಈ ಮಾರಿ ಹೋಗಲಿ ಅನ್ನಿಸಿದೆ ನೋಡ್ರಿ. ಮನೆ ಎಂದಿನಂತೆ ನಗು ನಗುತಿರಲಿ ಅಂತ ದಿನಾ ದೇವರಲ್ಲಿ ಬೇಡೋದೇ ಆಯ್ತು ಕಣ್ರೀ
ಪಂಕಜಾ.ಕೆ
Comments
Post a Comment