ಸ್ಪರ್ಧೆಗಾಗಿ
ಜಾನಪದ ಗೀತೆ
ತವರು
ದೂರದ ಹಳ್ಳಿಲಿ ಇರುತೈತೆ ನನ್ ತವರು
ಹಟ್ಟಿ ತುಂಬಾ ಹಸುಗಳು ತುಂಬೆಯ್ತೆ
ಬೆಳಗಾತ ಅಪ್ಪಯ್ಯ ನೊರೆಹಾಲು ಕರೆದನ
ಬಿಸಿ ಬಿಸಿ ದೋಸೆಗೆ ಬೆಣ್ಣೆ ಮುದ್ದೆ ಹಾಕ್ಯಳ ನನ್ನಮ್ಮ
ಗಂಡನ ಮನೆಯಾಗ ಸುಖವಿದ್ರು
ತವರಿನ ತಂಪ ನೆನೆದೈತೆ ನನ್ ಮನ
ಗುಡ್ಡ ತಿರುಗಿದ ನೆನಪು ಕಾಡುತ್ತೆ ನೋಡವ್ವ
ತೋಟದ ಬಾವಿಲಿ ಈಜಿದ್ದ ನೆನಪವ್ವ
ಗಂಡನ ಮನೆಯಾಗೆ ಚೆಂದಾಗಿ ಬಾಳುತ್ತ
ತವರಿನ ಕೀರ್ತಿಯ ಬೆಳಗೇನು ನನ್ನವ್ವ
ಹಾಲುಂಡ ತವರಲ್ಲಿ ಸಿರಿ ದೇವಿ ನೆಲಸಲಿ
ಕಣ್ತುಂಬ ಹರಸಿ ಅರಸಿನ ಕುಂಕುಮ ಭಾಗ್ಯ ನೀಡಣ್ಣ
ಅಮ್ಮ ಅಪ್ಪ ಇಲ್ಲೆಂಬ ಕೊರಗ ಅಳಿಸಣ್ಣ
ಪಂಕಜಾ.ಕೆ
Comments
Post a Comment