ವಸಂತ ಮಾಸ
ವಸಂತಮಾಸವು ಬಂದಿಹುದು
ಹರುಷದ ಹೊನಲನು ತಂದಿಹುದು
ಚೈತ್ರದ ಚಿಗುರು ಎಲ್ಲೆಡೆ ಹಬ್ಬಿಹುದು
ಶಾರ್ವರಿ ಸಂವತ್ಸರ ಬಂದಿಹುದು
ಮಾಮರದಲ್ಲಿ ತುಂಬಿದೆ ಚಿಗುರು
ಹೂಗಳ ಅರಳಿಸಿ ನಿಂತಿದೆ ಬೇವು
ಹೊಸವರ್ಷದಾಗಮನಕೆ ತೆರೆದಿದೆ ಪ್ರಕೃತಿ
ಕಳೆಯಲಿ ಎಲ್ಲರ ಮನಸಿನ ವಿಕೃತಿ
ಹಬ್ಬಿದೆ ಎಲ್ಲೆಡೆ ಕೊರೊನಾ ಭೀತಿ
ಕಳೆಯಲಿ ಶಾರ್ವರಿ ಮನಸಿನ ಭೀತಿ
ಮನೆಯಲಿ ಕುಳಿತೆ ಹಬ್ಬವು ಇರಲಿ
ಕೊರೊನಾ ರೋಗವು ಹರಡದೆ ಇರಲಿ
ಬೇವು ಬೆಲ್ಲದ ಮಿಶ್ರಣ ಸವಿಯೋಣ
ಎಲ್ಲರಿಗೆ ಶುಭವನು ಹಾರೈಸೋಣ
ಸುಖ ದುಃಖಗಳ ಸಮಾನ ಕಾಣೋಣ
ದೇವರ ನೆನೆಯುತ ಕಾಣದ ವೈರಿಯ ನೂಕೋಣ
ಪಂಕಜಾ.ಕೆ
Comments
Post a Comment