ದತ್ತ ಪದ ...ಕೈಗೆ ಸಿಕ್ಕರೆ ಪೆನ್ನು ಹಾಳೆ
ಬರವಣಿಗೆ
ಕೈಗೆ ಸಿಕ್ಕಿದರೆ ಪೆನ್ನು ಹಾಳೆ
ಬರೆಯುವೆ ಅಕ್ಷರಗಳ ಸಾಲೆ
ಮೈಮನಕೆ ಪುಳಕ ವೆಬ್ಬಿಸುವ ಓಲೆ
ಮನದ ಭಾವನೆಗಳನೆಲ್ಲಾ
ಅಕ್ಷರವಾಗಿಸಿ ಜೋಡಿಸುವೆ
ಕವನಗಳೆಂಬ ಮುತ್ತಿನ ಮಾಲೆ
ಗೆರೆಗಳನು ಎಳೆಯುತ ಬಿಡಿಸುವೆನು
ಹಾಳೆಯ ತುಂಬೆಲ್ಲಾ
ಚಂದದ ಚಿತ್ರಗಳ ಸಾಲೇ
ಬೆರಗಿನ ಪ್ರಕೃತಿಯ ಸುಂದರ ಚಿತ್ರ
ಹರಿದು ಬರುವುದು ಹಾಳೆಯ ತುಂಬಾ
ಕಣ್ಣು ಮನ ತುಂಬುವ ಚಿತ್ರ ಬರಹ
ಓದುತಲಿದ್ದರೆ ಮೈ ನವಿರೇಳಿಸುವ ಭಾವ
ಮನಸಿನಾಳದ ನೋವುಗಳ ಬಿಚ್ಚಿಡುತ
ದುರಂತ ಜೀವನದ ನಾಯಕಿಯ ಪಾತ್ರ
ಕೈಗೆ ಸಿಕ್ಕರೆ.ಪೆನ್ನು ಹಾಳೆ
ಮೈ ಮರೆವೆ ನನ್ನನ್ನು ನಾನೇ
ಕನಸನೂರಿಗೆ ಪಯಣ ವ ನಾ ಕಟ್ಟಿ ಕೊಡುವೆ
ನಾ ಬರೆಯುವ ಪದಪುಂಜಗಳು
ಭಾವನೆಗಳು ತುಂಬಿದ ಗಣಿಗಳು
ಮನಸಿಗೆ ಬಂದುದ ಗೀಚುತ ಖುಶಿ.ಪಡುವೆ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ಮಾಸ್ಟರ್
Comments
Post a Comment