ಗಜಲ್
ಮನಸಿಂದು ಚಿಂತೆಯ ಕಡಲಾಗಿದೆ ಸಖ
ಹಿಂದಿನದೆಲ್ಲವನು ನೆನೆಸಿ ದುಃಖಿಸುತ್ತಿದೆ ಸಖ
ಮನದ ಬೇಸರ ಖುಷಿಯಲ್ಲಿರಲು ಬಿಡುವುದೇ?
ಜೀವನ ಭಾರವಾಗುವ ಮೊದಲು ನಿನ್ನ ಒಡನಾಟ ಬೇಕಿದೆ ಸಖ
ಆಗಸದ ತಾರೆಗಳನ್ನು ನಾನು ಬಯಸಲಿಲ್ಲ
ನಿನ್ನ ಪ್ರೀತಿಯೊಂದು ಮಾತ್ರ ಆಶಿಸಿದೆ ಸಖ
ನನ್ನ ಭಾವನೆಗಳನ್ನು ನೀನು ತಿಳಿಯಲಾರೆಯಾ?
ಮೌನವಾಗಿ ಏಕಿರುವೆ ತಿಳಿಯದಾಗಿದೆ ಸಖ
ಪಂಕಜಾ ನಿನ್ನ ಮೇಲೆ ಜೀವವನ್ನೆ ಇಟ್ಟಿರುವಳು
ನಗು ನಗುತ್ತಾ ಜೀವನವನ್ನು ಕಳೆಯಬಾರದೆ ಸಖ
ಪಂಕಜಾ.ಕೆ
Comments
Post a Comment