ನ್ಯಾನೊ ಕಥೆ
ಉಪಾಯ
ಆಕೆ ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುವ ಸ್ಪುರದ್ರೂಪಿ ಎಂದು ಹೇಳಲಾಗದಿದ್ದರೂ ಆಕರ್ಷಕ ಹುಡುಗಿ ಅವಳ ಕೆಲಸಕ್ಕೆ ಇಂತಿಷ್ಟೇ ಸಮಯ ಅನ್ನುವ ನಿರ್ಬಂಧ ವಿಲ್ಲ ಕೆಲವೊಮ್ಮೆ ರಾತ್ರಿ 10 ಗಂಟೆವರೆಗೂ ಆಕೆ ಕೆಲಸ ಮಾಡಬೇಕಾಗಿದ್ದಿತು ಆದಿನ ಆಕೆ ಆಫೀಸಿನಿಂದ ಹೊರಗೆ ಬರುವಾಗ 12 ಗಂಟೆಗೆ 10 ನಿಮಿಷ ಮಾತ್ರ ಬಾಕಿ ಇತ್ತು ಈ ನಡು ರಾತ್ರಿಯಲ್ಲಿ ಆಕೆ ಮನೆಗೆ ಹೇಗೆ ಹೋಗುವುದು ಎಂದು ಚಡಪಡಿಸುತ್ತಿರುವಗಳೇ ಒಂದು ಟ್ಯಾಕ್ಸಿ ಹತ್ತಿರ ಬಂದು ಎಲ್ಲಿಗೆ ಹೋಗಬೇಕು ಮೇಡಂ ಎಂದು ವಿನಯದಿಂದ ವಿಚಾರಿಸಿದ ಆಕೆ ಈ ಟೈಮ್ ನಲ್ಲಿ ಕ್ಯಾಬ್ ಸಿಗುವುದು ಕಷ್ಟ ದೇವರೇ ಈತನನ್ನು ಕಳುಸಿರಬಹುದು ಎಂದು ತಾನು ಹೋಗಬೇಕಾಗಿರುವ ವಿಳಾಸವನ್ನು ಅವನಿಗೆ ತಿಳಿಸುತತ್ತಾಳೆ ಕೂಡಲೇ ಆತ ಹಿಂದಿನ ಸೀಟ್ ನ ಬಾಗಿಲು ತೆಗೆದು ಆಕೆಯನ್ನು ಕೂರಲು ಹೇಳುತ್ತಾನೆ ಆಕೆ ಕುಳಿತ ತಕ್ಷಣ ಟ್ಯಾಕ್ಷಿ ಮುಂದಕ್ಕೆ ಓಡುತ್ತದೆ ಟ್ಯಾಕ್ಷಿ ಹೋಗುವ ಸ್ಪೀಡ್ ಕಂಡು ಭಯಪಟ್ಟ ಆಕೆ ಡ್ರೈವರನಲ್ಲಿ ನಿಲ್ಲಿಸಲು ಹೇಳಿದರೂ ನಿಲ್ಲಿಸದೆ ಮುಂದಕ್ಕೆ ಓಡಿಸಿದ ಆತ ದಾರಿ ಮಧ್ಯದಲ್ಲಿ ಇನ್ನಿಬ್ಬರನ್ನು ಹತ್ತಿಸಿದ್ದು ನೋಡಿ ಆಕೆ ಇನ್ನಷ್ಟು ಭಯಗೊಂಡಳು ಟ್ಯಾಕ್ಸಿ ತನ್ನ ಮನೆಯ ದಾರಿ ಬಿಟ್ಟು ಸ್ವಲ್ಪ ಮುಂದಕ್ಕೆ ಹೋಗುವುದು ಕಂಡು ಭಯಪಟ್ಟ ಆಕೆ ಡ್ರೈವರನನ್ನು ಕೇಳಿದರೂ ಆತ ಮೌನವಾಗಿ ಟ್ಯಾಕ್ಸಿ ಓಡಿಸುತ್ತಿದ್ದ ಇನ್ನೇನು ಸ್ವಲ್ಪ ದೂರ ಹೋದರೆ ನಿರ್ಜನ ಪ್ರದೇಶ ಅದರ ಮದಲೇ ತಾನೇನಾದರು ಮಾಡಬೇಕು ಎಂದು ಯೋಚಿಸಿದ ಅವಳು ಇದ್ದಕ್ಕಿದ್ದಂತೆ ಕೆಮ್ಮಲು ಶುರುಮಾಡಿದಳು ಮಾತ್ರವಲ್ಲದೆ ತನ್ನಷ್ಟಕ್ಕೆ ಸ್ವಲ್ಪ ಗಟ್ಟಿಯಾಗಿ ಛೇ ಎರಡು ದಿನದಿಂದ ಆಗಾಗಈ ಕೆಮ್ಮು ಬರುತ್ತಿದ್ದರೂ ಅಮ್ಮ ಎಷ್ಟು ಹೇಳಿದರೂ ಡಾಕ್ಟರಲ್ಲಿ ಹೋಗದೆ ಈಗ ಜ್ವರವೇ ಬರುವಂತಿದೆ ಕೊರೊನಾ ಆದರೆ ಏನು ಮಾಡಲಿ ಎನ್ನುತ್ತಾ ಇನ್ನಷ್ಟು ಕೆಮ್ಮಲು ಪ್ರಾರಂಭಿಸಿ ದಳು ಅದನ್ನು ಕಂಡ ಆಕೆಯ ಹತ್ತಿರ ಕುಳಿತವರು ಡ್ರೈವರನಲ್ಲಿ ಅವಳನ್ನು ಕೆಳಗೆ ಇಳಿಸಲು ಸೂಚಿಸಿ ಮೊದಲೇ ಹೇಳಬಾರದೆ ಕೆಮ್ಮುವಾಗ ಕೈ ಹಿಡಿಯಬೇಕೆನ್ನುವುದು ತಿಳುಯದೆ ನಿನಗೆ ಕೊರೊನಾ ನಮಗೂ ಅಂಟಿಸಬೇಕೆನ್ನುವ ಯೋಚನೆಯೇ ಎಂದು ಅವಳನ್ನು ಅಲ್ಲಿಯೇ ಇಳಿಸಿ ಮುಂದಕ್ಕೆ ಹೊರಟು ಹೋದರು ಅವಳು ಕೆಳಗೆ ಇಳಿದು ನಕ್ಕು ಟ್ಯಾಕ್ಸಿ ನಂಬರನ್ನು ಬರೆಯುತ್ತಾ ತನ್ನ ಉಪಾಯ ಫಲಿಸಿದ್ದಕ್ಕೆ ಖುಷಿಯಾಗಿ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿ ತಾನು ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಯಾವದಾದರು ವಾಹನ ಸಿಗಬಹುದೇ ಎಂದು ನೋಡುತ್ತಿರುವಾಗ ಅದೃಷ್ಟವಶಾತ್ ಒಂದು ರಿಕ್ಷಾ ಇನ್ನು ಸ್ಟ್ಯಾಂಡ್ ನಲ್ಲೆ ಇರುವುದು ಕಂಡು ಅತ್ತ ಹೋದ ಆಕೆ ಡ್ರೈವರನನ್ನು ಎಚ್ಚರಿಸಿ ಬರಲು ಹೇಳಿ ನಿಗದಿತ ದರಕ್ಕಿಂತ 2 ಪಟ್ಟು ಹಣ ಕೊಡುವ ಆಮಿಷ ಒಡ್ಡಿ ರಿಕ್ಷಾದಲ್ಲಿ ಸುರಕ್ಷಿತವಾಗಿ ಮನೆ ತಳಪಿದಳು ಸಂಧರ್ಭಯೋಚಿತ ಯುಕ್ತಿ ಆಕೆಯ ನ್ನು ಅದಿನ ಉಳಿಸಿತು
ಪಂಕಜಾ.ಕೆ
Comments
Post a Comment