ಧೈರ್ಯ (ನ್ಯಾನೊ ಕಥೆ)
ಅಮವಾಸ್ಯೆಯ ಕಡು ಕತ್ತಲು.ಆಕೆ ಮನೆಯಲ್ಲಿ ಒಂಟಿಯಾಗಿದ್ದಳು ಆಕೆಯ ಪತಿ ಆ ದಿನ ತಾನೇ ಕೆಲಸದ ಕಾರಣದಿಂದ ಬೇರೆ ಊರಿಗೆ ಹೋಗಿದ್ದ ಆಕೆಗೆ ಬಗಾಯವಾಗುತ್ತಿದ್ದರೂ ಬಾಗಿಲನ್ನೆಲ್ಲಾ ಭದ್ರಪಡಿಸಿ ಬೇಗನೆ ನಿದ್ದೆ ಮಾಡೋಣವೆಂದು ಯೋಚಿಸುತ್ತಿರುವಾಗ ಯಾರೋ ಬಾಗಿಲನ್ನು ತೆರೆಯುತ್ತಿರುವಂತೆ ಶಬ್ಧವಾಯಿತು ಆಕೆ ಒಂದು ಕ್ಷಣ ಭಯಗೊಂಡರೂ ಮರುಕ್ಷಣವೇ ಧೈರ್ಯ ತಂದುಕೊಂಡು ಗಂಡ ಮತ್ತು ಪೊಲೀಸರಿಗೆ ಫೋನ್ ಮಾಡುತ್ತಾಳೆ
ಇನ್ನೇನು ಅವರು ಬಾಗಿಲು ಮುರಿದೇ ಬಿಟ್ಟರೋ ಎಂದು ಆಕೆ ಭಯದಿಂದ ಬೆಡ್ ರೂಮಿನ ಬಾಗಿಲು ಚಿಲಕ ಹಾಕಿ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದಳು ಅಷ್ಟರಲ್ಲಿ ಅವಳ ಮೊಬೈಲ್ಗೆ ಪೊಲೀಸರು ಇಬ್ಬರೂ ಫೋನ್ ಮಾಡಿ ಮೇಡಂ ನೀವು ಚೆನ್ನಾಗಿ ನಿದ್ದೆ ಮಾಡಿ ಭಯಬೇಡ ಕಳ್ಳರನ್ನು ನಾವು ಹಿಡಿದಿದ್ದೇವೆ ನೀವು ನಾಳೆ ಸ್ಟೇಶನ್ ಗೆ ಬಂದು ಒಂದು ಕಂಪೈಂಟ್ ಕೊಡಿ ಎಂದು ಹೇಳಿದ್ದು ಕೇಳಿ ಆಕೆ ನಿಟ್ಟುಸಿರು ಬಿಟ್ಟಳು ಅಷ್ಟರಲ್ಲಿ ಗಂಡನೂ ಕರೆಮಾಡಿ ವಿಚಾರಿಸಿ ನಾಳೆ ಬೆಳಿಗ್ಗೆಯೇ ಆದಷ್ಟು ಬೇಗ ಬರುತ್ತೇನೆ ದೈರ್ಯದಿಂದಿರು ನಿದ್ದೆ ಮಾಡು ಎಂದು ಹೇಳಿ ಸಮಾಧಾನ ಪಡಿಸುತ್ತಾನೆ ಆದರೆ ಆಕೆಗೆ ಬೆಳಗಿನ ಜಾವಾದ ವರೆಗೆ ನಿದ್ದೆಯೇ ಬರಲಿಲ್ಲ ಬೆಳಗಾದ ಮೇಲೆ ಆಕೆ ಭಯದಿಂದವೇ ತನ್ನ ಕೆಲಸ ಮುಗಿಸಿ ಬಾಗಿಲು ತೆಗೆದು ಪೊಲೀಸ್ ಸ್ಟೇಶನ್ ಗೆ ಹೋಗುತ್ತಾಳೆ ತುಂಬಾ ದಿವಸದಿಂ ದ ಹಿಡಿಯಲು ಪ್ರಯತ್ನಿಸಿದರೂ ಸಿಗದೆ ಇದ್ದ ಕಳ್ಳರು ನಿಮ್ಮಿಂದಾಗಿ ಸಿಕ್ಕಿ ಬಿದ್ದರು ಎಂದು ಪೊಲೀಸ್ ಆಫೀಸರ್ ಹೇಳಿ ಆಕೆಗೆ ಧನ್ಯವಾದ ಹೇಳುತ್ತಾರೆ ನಿಮ್ಮಂತೆ ಎಲ್ಲರೂ ಧೈರ್ಯದಿಂದ ಕಳ್ಳರನ್ನು ಹಿಡಿಯಲುಪೊಲೀಸರಿಗೆ ಸಹಾಯ ಮಾಡಿದರೆ ಕಳ್ಳರನ್ನು ಹಿಡಿಯುವುದು ನಮ್ಮ ಇಲಾಖೆಗೆ ಸುಲಭ ಎಂದು ಹೇಳುತ್ತಾರೆ
ಪಂಕಜಾ.ಕೆ. ಮುಡಿಪು
Comments
Post a Comment