ಗಜಲ್
ಕಂಡ ಕನಸುಗಳು ಸಾಕಾರವಾಗಲು ನೆರವಾದೆ ಅಪ್ಪ
ಕಳೆದ ಬದುಕನು ಮರೆತು ಬಾಳಲು ಕಲಿಸಿದೆ ಅಪ್ಪ
ಕಲ್ಪನೆಯೇ ಜೀವತಳೆದು ವಾಸ್ತವಕೆ ಕಳೆ ಬಂತು ನೋಡು
ಬಂದುದನ್ನು ಎದುರಿಸಲು ಧೈರ್ಯ ತುಂಬಿದೆ ಅಪ್ಪ
ಕಷ್ಟ ನಷ್ಟಗಳೆಷ್ಟೋ ಇದ್ದರೂ ಅಂಜಲಿಲ್ಲ ನೀನು
ನಗು ನಗುತ ಸಂಸಾರ ನೌಕೆಯನು ದಡ ಸೇರಿಸಿದೆ ಅಪ್ಪ
ನಿನ್ನ ನೆನಪು ಮನಕೆ ಸಾಂತ್ವನವ ತುಂಬುತಿದೆ ನಿತ್ಯ
ನೀ ತುಂಬಿದ ಆತ್ಮವಿಶ್ವಾಸ ದಾರಿ ತೋರಿಸುತಿದೆ ಅಪ್ಪ
ನಿನ್ನಂತಹ ಅಪ್ಪನನ್ನು ಪಡೆದ ಪಂಕಜಾಳ ಹುಟ್ಟು ಧನ್ಯ
ನಿನ್ನ ಧೀಮಂತ ವ್ಯಕ್ತಿತ್ವ ಬಾಳಿಗೆ ಬೆಳಕಾಗಿದೆ ಅಪ್ಪ
ಪಂಕಜಾ.ಕೆ. ಮುಡಿಪು
Comments
Post a Comment