ಮುಕುಂದ
ಸುಂದರ ವದನ ನಂದ ಕಿಶೋರ
ದೇವಕಿ ಕಂದ ಬಾಲ ಮುಕುಂದ
ಕೊಳನೂದುವ ಅರವಿಂದ ನಯನ
ಕಂಗಳ ತುಂಬಿದೆ ನಿನ್ನದೆ ರೂಪ
ಕಿವಿಗಳ ತುಂಬಿದೆ ನಿನ್ನಯ ಕೀರುತಿ
ರಾಧೆಯ ಮನವನು ಕದ್ದ ಚೋರ
ಬೆಣ್ಣೆ ಕಳ್ಳ ನು ನಮ್ಮ ಕಿಶೋರ
ಕನಕನಿಗೆ ಒಲಿದ ಗೋವಿಂದ
ಉಡುಪಿಯಲಿ ಪೂಜೆಗೊಳ್ಳುವ ಅರವಿಂದಾಕ್ಷ
ಕರುಣಾಳು ಬಾ ಇಂದು ನಂದಕಿಶೋರ
ಜಗದ ಜನರೆಲ್ಲ ಮೊರೆಯಿಟ್ಟಿಹರು ಕಂದ
ಬಂದು ಉದ್ಧರಿಸು ಎಮ್ಮನು ಹೇ ಮುರಾರಿ
ಶರಣು ಬಂದವರ ಕಾಯುವೆ ನೀನು
ಶರಣಾಗಿ ಶಿರ ಬಾಗಿರುವೆ ನಾನು
ಅನುದಿನವೂ ಎಡೆಬಿಡದೆ ಕಾಯೋ ಶ್ರೀ ಹರಿ
ಪಂಕಜಾ.ಕೆ. ಮುಡಿಪು
Comments
Post a Comment