ಚಿತ್ರ ಕವನ ಸ್ಪರ್ಧೆಗಾಗಿ
ಬಳೆಗಾರ
ಬಳೆಗಾರ ಬಂದಿಹೆನು
ಬಳೆಗಳನು ತಂದಿಹೆನು
ಅಕ್ಕಯ್ಯ ಅಮ್ಮಯ್ಯ ಬನ್ನಿರೆಲ್ಲ
ಚೆಲುವಾದ ಬಳೆಗಳನು ಕೊಳ್ಳಿರೆಲ್ಲ
ಬಣ್ಣ ಬಣ್ಣದ ಬಳೆಗಳು
ಹೊನ್ನ ಬಣ್ಣದ ಬಳೆಗಳು
ಹೆಂಗಳೆಯರ ಮನ ತಣಿಸುವ
ಚೆಲು ಬಳೆಗಳು ನೋಡಿರಮ್ಮ
ಮುತ್ತೈದೆ. ಸಂಕೇತದ ಬಳೆಗಳು
ಬಿಳಿ ಕೆಂಪು ಹಸಿರು ನೀಲಿ ಬಣ್ಣಗಳಿದೆ
ಚಿತ್ತಾಕರ್ಷಕ ಬಳೆಗಳನು ತಂದಿರುವೆ
ಮುದ್ದಾದ ಕೈಗಳಲಿ ಶೋಭಿಸುವುದು
ಘಲ್ ಘಲ್ ಎನ್ನುವ ಬಳೆಗಳು
ಕೈಗಳ ಸೌಂದರ್ಯವ ಹೆಚ್ಚಿಸುವ ಬಳೆ
ಕಂಗಳಲಿ ಕನಸುಗಳ ತುಂಬಿ ನಿಂತು
ಚೌಕಾಶಿ ಮಾಡಿ ಕೊಳ್ಳುವ ಚೆಲು ಕನ್ಯೆಯರು
ಕೈತುಂಬ ಬಳೆಗಳ ತೊಟ್ಟು ನಲಿದಾಡುವ
ಹೆಂಗಳೆಯರ ಮೋಹಕ ಚೆಲುವು
ಘಲ್ ಘಲ್ ಬಳೆ ಧರಿಸುವ ಉತ್ಸ್ಸಾಹ
ಕಣ್ಣು ಮನವ ಸೆಳೆಯುತಿದೆ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment