ದಟ್ಟ ಪದ. ಬಯಲು
ಮುಗ್ಧ ಮಕ್ಕಳು
ದೂರದ ಬಯಲಿನಲಿ ಆಡುವ ಮಕ್ಕಳಾಟವ ನೋಡಿ
ಮಾಡುತಿವೆ ಮನಸಿಗೆ ಅವು ಒಂದು ಮೋಡಿ
ಬೇಧಬಾವವ ತಿಳಿಯದ ಮುದ್ದು ಮುದ್ದು ಮಕ್ಕಳು
ಆಟ ಪಾಠದಲಿ ಒಬ್ಬರಿಗೆ ಒಬ್ಬರು ಸಹಕಾರಿಗಳು
ಬಡವ ಬಲ್ಲಿದ ಮೇಲು ಕೀಳೆಂಬ ಭೇದವಿಲ್ಲ
ಎಲ್ಲರೂ ಒಂದಾಗಿ ಕುಣಿಯುತಿರುವರಲ್ಲ
ಎಂತ ಅದ್ಬುತ ಲೋಕ ಈ ಮಕ್ಕಳದು. ಹೇಳು
ನಾವೂ ಇವರಂತಿರಬಾರದೆ ಹೇಳು
ಚಿಂತೆ ಬೇಸರಗಳಿಲ್ಲದೆ ಹಕ್ಕಿಯಂತಿರುವುದು ಅವರ ಮನ
ದ್ವೇಷ ಅಸೂಯೆ ದಳ್ಳುರಿಗಳಿಲ್ಲದ ಮುಗ್ದ ಮನ
ಬೆಳೆದಂತೆ ಮೇಲು ಕೀಳೆಂಬ ತಾರತಮ್ಯವೇಕೋ ಅವರಲಿ
ಬಿತ್ತಿರುವೆವೆ ನಾವದನು ಅವರ ಮನದಲಿ
ಮಗುವಿರುವ ಮನೆಯಲ್ಲಿ ನಿತ್ಯವೂ ನಗು
ಕೋಪತಾಪಗಳ ದೂರ ಮಾಡುವುದವರ ನಗು
ಬಯಲಿನಂತೆ ವಿಶಾಲವಿರಬೇಕು ಮನ
ಮುಗ್ದ ಮಕ್ಜಳಂತೆ ಹಾಯಾಗಿ ಕಳೆಯಬೇಕು ಜೀವನ
ಪಂಕಜಾ.ಕೆ
Comments
Post a Comment