ವಿಷು ಹಬ್ಬ
ಬಂದಿತು ಬಂದಿತು ವಿಷುವಿನ ಹಬ್ಬ
ತಂದಿತು ತಂದಿತು ಎಲ್ಕೆಡೆ ಕಬ್ಬ
ಹೊಸ ಚಿಗುರನು ಹೊತ್ತು ನಿಂತಿದೆ ಪ್ರಕೃತಿ
ಹಳೆಯ ಎಲೆಗಳ ಕಳೆದು ತೊಳೆಯುತು ವಿಕೃತಿ
ಹಣ್ಣು ತರಕಾರಿ ರೈತನ ಬೆಳೆಗಳ ಸುಗ್ಗಿ
ಸಿಹಿ ಪಾಯಸದ ಆಡಿಗೆಯ ಹುಗ್ಗಿ
ನವ ಚೈತನ್ಯವು ತುಂಬಿದೆ ಎಲ್ಲೆಡೆ
ಪ್ರಕೃತಿ ಒಲಿದರೆ ಜೀವನವು ಹಾಲ್ನೊರೆ
ಮರಗಿಡಗಳ ಉಳಿಸಿ ಬೆಳೆಸಬೇಕು
ಶುದ್ಧ ಗಾಳಿಯ ನಿತ್ಯ ಸವಿಯಬೇಕು
ಪಂಕಜಾ.ಕೆ.
Comments
Post a Comment