ದತ್ತಪದ....ಗಾಲಿ ಕಳಚಿದ ಗಾಡಿ
ಗಜಲ್
ನವನವೀನ ಕನಸುಗಳ ಹೊತ್ತು ಬಂದಿರುವೆ ನಿನಗಾಗಿ
ನವೋಲ್ಲಾಸದಿ ನಲಿಯುವ ಕ್ಷಣಕೆ ಕಾದಿರುವೆ ನಿನಗಾಗಿ
ಮದುರಸದ ಬಟ್ಟಲು ನನ್ನೊಡಲ ತುಂಬಾ ತುಂಬಿದೆ
ಅನುರಾಗವ ನಿರೀಕ್ಷಿಸುತ ನಿಂತಿರುವೆ ನಿನಗಾಗಿ
ಗಾಲಿ ಕಳಚಿದ ಗಾಡಿಯಂತಾಗಿದೆ ಜೀವನ
ಬಾಳಿನಲ್ಲಿ ಬಂದ ಕಷ್ಟಗಳ ಸಹಿಸಿರುವೆ ನಿನಗಾಗಿ
ಬದುಕ ಬಂಡಿಯ ಎಳೆಯಲು ನೀನು ಬರುವೆಯಲ್ಲವೇ
ಮುರುಕು ಮಂಟಪದಲ್ಲಿ ಕುಳಿತಿರುವೆ ನಿನಗಾಗಿ
ಜೀವನಕ್ಕೆ ಒಂದು ಗುರಿ ಬೇಕಲ್ಲವೇ ಪಂಕಜಾ
ಛಲದಿಂದ ಮುನ್ನಡೆದು ಬದುಕ ಗೆಲ್ಲುವೆ ನಿನಗಾಗಿ
ಪಂಕಜಾ.ಕೆ.
Comments
Post a Comment