ಭಾಸ್ಕರ
ಮರಗಳೆಡೆಯಲಿ ತೂರಿ ಬರುತಲಿ
ಬೆರಗ ಬೆಳಗಿನ ಸವಿಯ ತುಂಬುತ
ಅರುಣರಾಗವ ಪಸರಿಸುತ ಬಂದ ಧರೆಯೆಡೆಗೆ
ಬಾನ ಬಯಲಿಗೆ ಬಣ್ಣ ಹಚ್ಚುತ
ಸೌಮ್ಯ ಕಿರಣವ ತುಂಬಿ ಗಗನದಿ
ಇಳೆಗೆ ಮುತ್ತನಿಕ್ಕುತ ಬಂದ ಬೇಗದಲಿ
ಏನು ಚೆಲುವದು ಎಂಥಾ ಬೆರಗದು
ಬಾನು ಬುವಿಯಲಿ ತುಂಬಿ ನಿಂತಿದೆ
ದಿನಕರನ ಉದಯದಲಿ ಮೈಯ ಮರೆತಿರಲು
ಬೀರಿದ ಹೂಗಳು ಗಂಧ ಚೆಲ್ಲಿವೆ
ಹರಿಸಿ ಮಧುರಸವ ಮೆಲ್ಲಗೆ
ದುಂಬಿಗಳಾಕರ್ಷಣೆಗೆ ತಲೆಯ ತೂಗುತಿವೆ
ಕವಿದ ಕತ್ತಲೆ ಕರಗಿ ಹೋಯಿತು
ಸುರಿದ ಬೆಳ್ಳಗೆ ಬೆಳಕ ನೋಡುತ
ಬಾನ ರಾಜನು ತಾನೆನುತ ನಗುತಿಹನು
ಪಂಕಜಾ.ಕೆ.
Comments
Post a Comment