ಬೇಡಿಕೆ
ನಿನ್ನ ನಾಮ ಸ್ಮರಣೆ
ನಿರುತ ಮನದಲಿರಲು
ಎನಿತು ಧನ್ಯಳೋ ಹರಿಯೇ
ನಂಬಿದೆ ನಿನ್ನ ಹೇ ಮುರಾರಿಯೇ
ಮನೆಯಲ್ಲೇ ಇರುವೆ
ಮನತುಂಬ ನೀ ನಿಂದು
ಅನುದಿನವು ಪಾಮರಳ
ನೀ ಕಾಯೋ ಹರಿಯೇ
ಊರೆಲ್ಲ ಸ್ಮಶಾನವಾಗಿದೆ
ಜನರು ಭೀತಿಯಲಿ ನಲುಗುತಿಹರು
ಬಂದ ಕಷ್ಟವು ಸರಾಗ ಕಳೆದು
ಬದುಕು ಪಾವನಗೊಳಿಸು ಹರಿಯೇ
ಅನುದಿನವೂ ಕೈ ಮುಗಿದು ಬೇಡುವೆ
ಕಳೆದು ಬಿಡು ಮನದ ಭಯವ
ತುಂಬಿ ಬಿಡು ಜೀವನೋತ್ಸಾಹವ
ಬಂದಂತೆ ಹೊರಟು ಹೋಗಲಿ ಮಾರಿ ಕೊರೊನ
ಬೇಡುವೆನು ಹೇ ಕರುಣಾಕರ
ನೀನಲ್ಲದೆ ಅನ್ಯ ಗತಿಯಿಲ್ಲ ತಂದೆ
ನೊಂದವರ ಉದ್ಧರಿಸಿ ಸಲಹು
ಕರುಣೆಯಲಿ ಕಾಯೋ ಮೃತ್ಯುಂಜಯ
ಪಂಕಜಾ.ಕೆ
Comments
Post a Comment