ಗಜಲ್
ಆಕಾಶ ಭೂಮಿ ಎಂದಾದರೂ ಒಂದಾಗುವುದೇ ಗೆಳತಿ
ಸಮಾನಾಂತರ ರೇಖೆಗಳುಒಂದನ್ನೊಂದು ಸೇರುವುದೇ ಗೆಳತಿ
ಆಡಬಾರದ ಮತೆಲ್ಲಾ ಆಡಿ ನೋಯಿಸಿದೆ ನೀನು
ಮುರಿದ ಮನಸು ಜೋಡಿಸಲು ಸಾಧ್ಯವಾಗುವುದೇ ಗೆಳತಿ
ಮಾಡಬಾರದ ತಪ್ಪು ನಾನೇನು ಮಾಡಿದೆ ಹೇಳು
ಕಾರಣವೇ ಇಲ್ಲದೆ ದ್ವೇಷಿಸುವುದು ಸರಿಕಾಣುವುದೇ ಗೆಳತಿ
ನನ್ನ ಮನಸನ್ನು ನಿನ್ನೊಡನೆ ತೆರದಿಟ್ಟೆ ಯಲ್ಲ
ನೀನು ಹೀಗೆ ಬೆನ್ನಿಗೆ ಚೂರಿ ಹಾಕಬಹುದೇ ಗೆಳತಿ
ನಂಬಿಕೆಗೆ ದ್ರೋಹ ಬಗೆಯುವುದು ತಪ್ಪಲ್ಲವೇ
ಪಂಕಜಾಳ ಮನಸನ್ನು ನೋಯಿಸಬಹುದೇ ಗೆಳತಿ
ಪಂಕಜಾ.ಕೆ
Comments
Post a Comment