ನೀನಿರಲು
ನಿನ್ನ ಕಣ್ಣಿನಲಿ ತುಂಬಿದ ಹೊಳಪು
ನನ್ನ ಮನಕೆ ತಂದಿತು ಬಿಸುಪು
ಆ ಸೆಳೆಯುವ ನಿನ್ನ ಕುಡಿ ನೋಟ
ಮಾಡಿತು ತನುವಿಗೆ ಏನೋ ಮಾಟ
ಕಳೆಯಿತು ಮನಸಿನ ನೋವು
ತುಂಬಿಸಿತು ಮೈಯಲಿ ಕಾವು
ಕಣ್ಣ ಹೊಳಪಿನ ಬಾಣಕೆ ನಾ ಸೋತೆ
ಕನಸು ಕಾಣುತ ನಾನಲ್ಲೆ ಕೂತೆ
ಬೀಸುವ ಗಾಳಿಯು ಹಿತತಾರದು
ನವಿಲ ನರ್ತನವು ಮನ ತಣಿಸದು
ಕನಸು ನನಸಾಗಲು ಬಾ ನಲ್ಲೆ ಬೇಗ
ನಿನಗಾಗಿ ಕಾಯುತಿರುವೆ ನಾ ಇಲ್ಲಿ ಈಗ
ನೀನಿರಲು ಮನದಲ್ಲಿ ಮುದ ತುಂಬಿದೆ
ಬಾಳಲ್ಲಿ ಚೆಲುವಾದ ಹೂವರಳಿದೆ
ಪಂಕಜಾ.ಕೆ.
Comments
Post a Comment