ರಾದೆಯ ವಿರಹ
ಸಾಗಿದೆ ಬದುಕು ನಿನ್ನನು ಹುಡುಕುತ
ಯಮುನಾ ತೀರದ ತಟದಲ್ಲಿ
ಕೊಳಲನು ಊದುತ ನಲಿದಾಡಿದ ದಿನಗಳು
ಮಾಸದು ಎಂದಿಗೂ ಹೇ ಪ್ರಭುವೆ
ನಿನ್ನಯ ನೆನಪಲಿ ದಿನಗಳು ಉರುಳಿದೆ
ಹಾದಿಯ ಕಾಯುತ ಬಸವಳಿದೆ
ಬರುವೆಯೋ ಎಂದಿಗೆ ತಿಳಿಯೆನು ನಾನು
ಮರೆತೆಯಾ ನಿನ್ನ ರಾಧೆಯನು
ಕನಸಲೂ ಮನಸಲೂ ನಿನ್ನದೇ ಧ್ಯಾನ
ನಿತ್ಯವೂ ವಿರಹದಿ ನೋಯುತಿರುವೆ
ವಿರಹದ ಉರಿಯನು ತಣಿಸಲು
ಬಾರೋ ಬೇಗನೆ ಮುರಾರಿಯೇ
ಕಾಡಿನ ಮರಗಳ ಎಡೆಯಲಿ ಸಾಗಿದೆ
ಮಣ್ಣಿನ ದಾರಿಯು ನಿನ್ನೆಡೆಗೆ
ಹುಡುಕುತ ಬಳಲಿದೆ ನನ್ನಯ ಮನವು
ದಾರಿಯ ತೋರೋ ಮಾಧವನೆ
ಪಂಕಜಾ.ಕೆ. ಮುಡಿಪು
Comments
Post a Comment