ಚಿತ್ರಕವನ ಸ್ಪರ್ಧೆಗಾಗಿ
ಬಡತನ
ಬಡತನದ ಬದುಕಿನಲಿ
ಹಸಿವನಿಂಗಿಸಲೆಂತು
ಕೈ ಚಾಚಿ ಬೇಡುತಿರುವುದು ಮುದ್ದು ಬಾಲೆ
ಪುಡಿಗಾಸು ಸಿಕ್ಕಿದರೂ
ತಣಿಯದಾಗಿದೆ ಹಸಿವು
ಸಂತೈಸಲೇಗೆ ತನ್ನ ಒಡಹುಟ್ಟಿದವಳ
ಆರೈಕೆ ಇಲ್ಲದೆಯೇ
ಮೈಕೈಗಳಲಿ ತುಂಬಿದೆ ಕೊಳೆ
ತಬ್ಬಲಿಯು ಈ ಕಂದಮ್ಮ ನೋಡುವರಾರು
ಚಿಕ್ಕಾಸು ಸಿಕ್ಕಿದರೂ
ಖುಷಿ ಪಡುವ ಜೀವಿಗಳು
ಮನವಾರೆ ಹರಸುವರು ಕಾಸುಕೊಟ್ಟವರ
ತಂದೆ ತಾಯಿಗಳಿಲ್ಲ
ಬಂಧು ಬಳಗಗಳಿಲ್ಲ
ಅಲೆಮಾರಿ ಜೀವನವು ಇವರದಾಯ್ತಲ್ಲ
ಕೊಟ್ಟಿರುವ ಕಾಸಿನಲಿ
ಬಡತನದ ಬೇಗೆಯಲಿ
ನಲುಗುತಿವೆ ಪುಟ್ಟ ಕಂದಮ್ಮಗಳು
ಕರುಣೆಯಿಂದ ಕಾಯುವ
ದೇವ ಕಣ್ಣನು ಮುಚ್ಚಿರಲು
ಹಸನಾದೀತೆ ಇವರ ಬಾಳು
ಪಂಕಜಾ.ಕೆ
Comments
Post a Comment