ಹೇಗೆ ಮೆಚ್ಚಿಸಲಿ
ಹೇಗೆ ಮೆಚ್ಚಿಸಲಿ ಈ ಮನುಜರ
ಸೆಕೆಗಾಲ ಬಂತೆಂದರೆ ಸೆಕೆಸೆಕೆ
ಸಾಕಪ್ಪಾಸಾಕುಈಸೆಕೆಯಗೋಳು
ಸುರಿಯುತ್ತಿದೆ ಮೈಯೆಲ್ಲಾ ಬೆವರು
ಉರಿ ಬಿಸಿಲಿಗೆ ಹೊರಗೆ ಕಾಲಿಡಲೇಗೆ
ಬರಬಾರದೆ ವರುಣ ಬೇಗ ಇಳೆಗೆ
ಹಿಡಿ ಶಾಪ ಹಾಕುತಲೆ ಸೆಕೆಯ ಸಹಿಸುವರು
ಮಳೆಗಾಲ ಬಂತೆಂದರೆಸಾಕು
ಖುಷಿ ಪಡುವರೆ ಇವರು
ಎಂತ ಮಳೆಯಪ್ಪಾ ಇದು ಎನ್ನುವರು
ಹೊರಗೆ ತಲೆ ಹಾಕುವುದು ಹೇಗೆ
ಕೊಡೆ ಹಿಡಿದು ನಡೆದು ಸಾಕಾಯ್ತಲ್ಲ
ಯಾವಾಗ ಈ ಮಳೆ ಬಿಟ್ಟಿತೋ
ಮಳೆಗೆ ಹಿಡಿಶಾಪ ಹಾಕುತ್ತಾ ದಿನಕಳೆಯುವರು
ಬಂತದೋ ಚಳಿಗಾಲ ನೋಡ
ಖುಷಿಯಾಯಿತೆ ಮನುಜ ಈಗ
ಹೇಳುವರು ಅಬ್ಬಾ ಏನು ಚಳಿ
ಹೊರಗೆ ಬಂದರೆಮಂಜು ಹನಿ
ಗಡ ಗಡಗುಟ್ಟುತ್ತಿದೆ ಈ ದೇಹ
ಚಾದರವ ಹೊದ್ದು ಮಲಗೆ ಇರುವ ಬೇಗ
ಯಾವಾಗ ಮುಗಿದಿತೋ ಈ ಚಳಿಗಾಲ
ಶಾಪ ಹಾಕುತ್ತಾ ಚಳಿಯ ಸಹಿಸುತಿಹರು
ಹೇಗಪ್ಪಾ ಮೆಚ್ಚಿಸಲಿ ಜಗದ ಮನುಜರ
ತಿಳಿಯದೆ ಕಂಗೆಟ್ಟು ಹೋಗಿರುವನು ಶಿವ
ಪಂಕಜಾ.ಕೆ ಮುಡಿಪು
Comments
Post a Comment