ಕ್ಷಿಪ್ರ ಕವನ ಸ್ಪರ್ಧೆಗಾಗಿ
ದತ್ತಪದ. ..ಹಣತೆ
ಜ್ಞಾನ ಜ್ಯೋತಿ
ಮನದ ತಮವನು
ಕಳೆದು ಹಾಕುತ
ಜ್ಞಾನ ಜ್ಯೋತಿಯ ಉರಿಸಿರಿ
ಜಗದ ಜನರಿಗೆ
ಒಳಿತು ಬಯಸುತ
ಹಣತೆ ಬೆಳಗುತ ನಮಿಸಿರಿ
ದೇವ ದೇವನ
ಕರುಣೆಯಿರಲದು
ಬಾಳ ಕಷ್ಟವು ತೊಲಗದೇ
ದಿವ್ಯ ಶಕ್ತಿಯ
ನಂಬಿ ಬೇಡಲು
ಕರುಣೆ ತೋರದೆ ಇರುವನೇ
ಮನದಿ ತುಂಬಿದ
ಅಸುರ ಭಾವವು
ಉರಿದು ಹೋಗಲಿ ಬೆಳಕಲಿ
ಜಗದ ಕತ್ತಲೆ
ಕಳೆದು ಬಾಳಲಿ
ಸುಜ್ಞಾನದ ಬೆಳಕು ಉರಿಯಲಿ
ಪ್ರೀತಿ ಕರುಣೆ
ಮಾನವೀಯತೆ
ತುಂಬಿ ತುಳುಕಲಿ ಎಲ್ಲೆಡೆ
ನಾನು ನನ್ನದು
ಎಂಬ ಭಾವವು
ತೊಳೆದು ಹೋಗಲಿ ಮೆಲ್ಲನೆ
ಕಿರಿದು ಹಣತೆಯು
ಬೆಳಗುವಂದದಿ
ನಮ್ಮ ಬಾಳದು ಬೆಳಗಲಿ
ದೇವ ಕರುಣೆಯ
ಜಲವು ಸುರಿಯುತ
ಜಗದ ಜನರನು ಕಾಯಲಿ
ಪಂಕಜಾ.ಕೆ
Comments
Post a Comment