ಪ್ರಕೃತಿ ವೈಭವ
ನಿಶೆಯ ಸೆರಗನು ಮೆಲ್ಲನೆ ಸರಿಸಿ
ಚೆಲು ಬಣ್ಣಗಳ ಬಾನಿನಂಗಳದಲಿ ಕಲಸಿ
ಸಪ್ತವರ್ಣದ ತೆರನೇರಿ ಬಂದನು ರವಿತೇಜ
ಕೊಳದಲ್ಲಿ ಅರಳಿದ ನೈದಿಲೆಯ ಕಂಡು
ಹಕ್ಕಿಗಳು ಸಂಭ್ರಮದಿಂದ ಸ್ವಾಗತವ ಕೋರಿ
ಚಿಲಿಪಿಲಿ ಗಾನವ ಹಾಡಿದವು
ರವಿ ಮೂಡುವಾ ಸೊಬಗಿನ ನೋಟ
ಬೆರಗು ಹುಟ್ಟಿಸುವ ಆ ಮನೋಹರ ದೃಶ್ಯ
ಕಾಣುವ ಕಣ್ಣಲಿ ಏನೋ ಕಾತರ
ಹೂಗಳು ಬಿರಿದರಳಿ ನಗುತ ತಲೆಬಾಗಿದೆ
ದುಂಬಿಗಳ ಝೇಂಕಾರ ತುಂಬಿ ಕನಸನೂರಿಗೆ ಕರೆದೊಯ್ಯುತಿದೆ
ಪ್ರಕೃತಿಯ ಈ ಸುಂದರ ವೈಭವದ ನೋಟ
ಪಂಕಜಾ.ಕೆ. ಮುಡಿಪು
Comments
Post a Comment