ಮನದರಸನಿಗೊಂದು ಒಲವಿನ ಓಲೆ
ನನ್ನರಸ ,
ನಿನಗೆ ಗೊತ್ತೇ ನಿನ್ನ ಪರಿಚಯ ಯಾಗುವ ಮೊದಲು ನಾನು ಶೂನ್ಯಳಾಗಿದ್ದೆ . ನೀನೆಂದು ನನ್ನ ಮನದ ಗುಡಿಗೆ ಬಂದೆಯೋ ಅಂದಿನಿಂದವೇ ನನ್ನೆಲ್ಲಾ ಕನಸುಗಳು ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
ಆ ದಿನ ನಿನಗೂ ನನ್ನ ಮೇಲೆ ಮನಸು ಇದೆ ಎಂದು ನನ್ನೊಡನೆ ಮಾತನಾಡುವಾಗ ಮಿಂಚಿದ ನಿನ್ನ ಕಣ್ಣು ಕೆಂಪೇರಿದ ನಿನ್ನ ಮುಖ ಕಂಡಾಗಳೇ ನನಗೆ ಅನಿಸಿತ್ತು,ಆದರೂ ನಿನ್ನ ಬಾಯಿಯಿಂದವೇ ಅದನ್ನು ಕೇಳುವ ಆಸೆಗೆ ನಿನ್ನ ಸಂದೇಶವನ್ನು ಹೊತ್ತು ತಂದ ನಮ್ಮಿಬ್ಬರ ಸಹೋದ್ಯೋಗಿಯ ಜತೆ ನಾನು ಅವರೇ ಅದನ್ನು ಹೇಳಲಿ ಎಂದು ಬಿಂಕ ತೋರಿಸಿದ್ದೆ .ಆದರೆ ನಿನ್ನದು ತುಂಬಾ ಸರಳ ಸ್ವಭಾವ ಮರುದಿನವೇ ನೀನು ಒಂದು ಪತ್ರದಲ್ಲಿ ನಿನ್ನೆಲ್ಲ ಪ್ರೀತಿ ಭಾವನೆಗಳನ್ನು ತುಂಬಿ ನಡುಗುವ ಕೈಗಳಿಂದ ನನ್ನೆಡೆಗೆ ಚಾಚಿ ನಿಂತ ಆ ಕ್ಷಣದ ನೆನಪು ಇಂದಿಗೂ ನನ್ನ ಮನದಲ್ಲಿ ಹಸಿರಾಗಿದೆ
ನಾವಿಬ್ವರು ಒಬ್ಬರೊಡನೆ ಇನ್ನೂಬ್ಬರು ಮಾತನಾಡಿದ್ದೆ ಇಲ್ಲ ಆದರೂ ನಮ್ಮಿಬ್ಬರ ಹೃದಯವೂ ಒಂದಾಗಿತ್ತು ಅಲ್ಲವೇ. ಆ ದಿನ ನೀನು ನನ್ನ ತಂದೆಯವರ ಜತೆ ಮಾತಾಡಲೆಂದು ಬಂದಾಗ ನೀನು ಹೇಳಿದ ಆ ಒಂದೇ ಮಾತು ನನ್ನ ಎದೆಯನ್ನು ಮೃದುಗೊಳಿಸಿ ನಿನ್ನ ಮೇಲೆ ಪ್ರೀತಿ ಮೂಡುವಂತೆ ಮಾಡಿತು ಅದೇನೆಂದು ನಾನು ನಿನಗೆ ನೆನಪಿಸುವ ಅಗತ್ಯ ಇಲ್ಲ ಅಲ್ಲವೇ .
ನಮ್ಮ ಒಡನಾಟಕ್ಕೆ ಹಿರಿಯರ ಒಪ್ಪಿಗೆಯ ಮುದ್ರೆ ಬಿದ್ದುದೇ ತಡ ನೀನು ಹೇಗೆ ಬದಲಾಗಿಬಿಟ್ಟೆ ನನಗೆ ನಂಬಲೇ ಆಷಾಧ್ಯವಾಗಿತ್ತು .ಹೆಣ್ಣು ಮಕ್ಕಳನ್ನು ಕಂಡರೆ ಮಾರು ದೂರ ಹಾರುವ ನೀನು ನನ್ನೊಡನೆ ಹೋಟೆಲ್ ಸಿನೆಮಾ ಎಂದು ತಿರುಗಾಡಿದ್ದು ಎಂತಹ ಮಧುರ ದಿನಗಳು ಅದು ಅಲ್ಲವೇ ?
ಮೊದಲ ಬಾರಿಗೆ ನೀನು ನನಗೆ ತೆಗೆದು ಕೊಟ್ಟ ಆ ಸೀರೆ ರಾಧೆ ಕೃಷ್ಣ ಕೊಟ್ಟ ನವಿಲುಗರಿಯನ್ನು ಜತನದಿಂದ ಇಟ್ಟಂತೆ ಅದನ್ನು ಈಗಲೂ ಇಟ್ಟಿರುವೆ ನಾನು ನಿನಗಾಗಿ ತಂದ ಶರ್ಟ್ ಬಿಗಿಯಾದರೂ ಅದನ್ನು ಈಗಲೂ ನವಿರಾಗಿ ನೀನು ಸವರುವುದು ನನಗೆ ತಿಳಿದಿಲ್ಲ ಎಂದು ತಿಳಿಯಬೇಡ
ನಾವಿಬ್ಬರೂ ದಿನ ಐಸ್ಕ್ರೀಮ್ ತಿನ್ನುವುದು ತಿಳಿದ ನನ್ನ ಅಣ್ಣ ಮದುವೆಗೆ ಆಗುವಾಗ ಸೀತವಾದೀತು ತಂಗಿ ದಿನ ಐಸ್ಕ್ರೀಮ್ ತಿನ್ನಬೇಡಿ ಎಂದು ನಗುತಲೆ ಬುದ್ದಿ ಹೇಳಿದ್ದು ನಮಗಿಬ್ಬರಿಗೆ ಹಿಡಿಸಲೇ ಇಲ್ಲ ಅಲ್ಲವೇ
ಮದುವೆಯ ಮದಲು ನಮ್ಮಿಬ್ಬರಲ್ಲಿದ್ದ ಪ್ರೀತಿ ಇಂದಿಗೂ ಬತ್ತದೆ ಇರುವುದಕ್ಕೆ ಸಾಕ್ಷಿಯಾಗಿ ನಮ್ಮಿಬ್ಬರ ಮಕ್ಕಳು ನಮ್ಮನ್ನು
ಹಾಸ್ಯ ಮಾಡುವುದೇ ಸಾಕ್ಷಿ .
ಪತ್ರ ದೀರ್ಘವಾಯಿತೇನೋ ಮನದಾಳದ ಭಾವನೆಗಳು ನಿನ್ನೊಡನೆ ಹೇಳುವ ಮದಲೇ ನಿನಗೆ ತಿಳಿದು ಬಿಡುವುದು ನನಗೊಂದು ಸೋಜಿಗ .ಈ ಪತ್ರ ಸಿಕ್ಕಿದ ತಕ್ಷಣ ಉತ್ತರಿಸುತ್ತಿಯ ಅಲ್ಲವೇ ?
ಇಂತು
ನಿನ್ನ ಒಲವಿನ ದೋಣಿಯಲಿ ತೇಲುತ್ತಾ ಇರುವ
ನಿಮ್ಮೊವಿನ
ಪಂಕಜಾ.ಕೆ
Comments
Post a Comment