ಭಕ್ತಿಗೀತೆ
ಗುರು ರಾಘವೇಂದ್ರ
ತುಂಗಾನದಿಯ ತೀರವಾಸಿ
ವರಮಂತ್ರಾಲಯ ನಿವಾಸಿ
ಪರಮಪಾವನ ಗುರುರಾಘವೇಂದ್ರ
ಅಂಧಾಕಾರದಿ ಮುಳುಗಿರುವೆ
ದಾರಿಕಾಣದೆ ನಿನ್ನ ನಂಬಿರುವೆ
ಕಷ್ಟಗಳ ಪರಿಹರಿಸು ಗುರು ರಾಘವೇಂದ್ರ
ಬೃಂದಾವನದಲಿ ನೆಲೆಸಿರುವೆ
ಕರೆದಾಗಬರುವೆಯೆಂದು ನಂಬಿರುವೆ
ನಿನ್ನ ಚರಣಕ್ಕೆ ಶರಣು ಬಂದಿರುವೆ ಗುರುರಾಯ
ಗುರುವಾರದ ಶುಭದಿನದಂದು
ಚಂದದಲಿ ನಿನ್ನ ಧ್ಯಾನಿಸಿ ಭಜಿಸುವೆ
ಮಂಗಳ ಮೂರುತಿ ರಂಗನದಾಸರಾಘವೇಂದ್ರ
ಕಂಗೆಟ್ಟು ಶರಣು ಬಂದವರ ಪೊರೆಯುವೆ
ನೆಲೆಸೆನ್ನ ಹೃದಯ ಮಂದಿರದಲ್ಲಿ ಗುರುವೆ
ಬೆಳಗಿಸು ಮನದಲಿ ಜ್ಞಾನಜ್ಯೋತಿಯ ತಂದೆ
ಬಂದು ಬಳಗವು ನೀನೇ ಇಷ್ಟಮಿತ್ರನೂ ನೀನೇ
ಭಕ್ತರ ಮೊರೆಯನು ಆಲಿಸುವ ಕಾಮಧೇನುವೆ
ನೀನೇ ಗತಿಯೆಂದು ಶರಣು ಬಂದಿರುವೆ ಗುರುರಾಯ
ಪಂಕಜಾ.ಕೆ
Comments
Post a Comment