ನಮ್ಮ ಶಾಲೆ
(ಮಕ್ಕಳ ಕವನ)
ನಮ್ಮಯ ಶಾಲೆಯ
ಅಂದದ ಪರಿಸರ
ಎಲ್ಲರ ಮನವನು ಸೆಳೆಯುವುದು
ಸುತ್ತಲೂ ಬೆಳೆಸಿದ
ಕೈತೋಟದ ಚೆಲುವು
ಮಕ್ಕಳ ಶ್ರಮವನು ತಿಳಿಸುವುದು
ಪಾಠದ ಮೊದಲಿಗೆ
ಶಿಸ್ತಲಿ ನಿಲುತಲಿ
ಗುರುವಂದನೆಯನು ಮಾಡುವೆವು
ಶಿಕ್ಷಕರು ಕಲಿಸುವ
ಪಾಠಗಳೆಲ್ಲವ ಕಲಿಯುತ
ದಿನ ದಿನ ಬೆಳೆಯುವೆವು
ಶಾಲೆಯ ಸುತ್ತಲೂ
ಇರುತಿಹ ಬಯಲಲಿ
ಬಗೆ ಬಗೆ ಆಟವ ಆಡುವೆವು
ತರ ತರ ಸ್ಪರ್ಧೆಯು
ವಿಧ ವಿಧ ಕೂಟವು
ಮಕ್ಕಳ ಮನವನು ಸೆಳೆಯುವುದು
ದಿನವೂ ನಗಿಸುತ
ಪಾಠವ ಕಲಿಸುತ
ಬಿಸಿ ಬಿಸಿ ಊಟವ ಬಡಿಸುವರು
ಓದಲು ಬರೆಯಲು
ಕಲಿಸುತ ನಮ್ಮನು
ಪ್ರಗತಿಯ ಪಥದಲಿ ನಡೆಸುವರು
ಶಿಕ್ಷಕರೆಲ್ಲರು
ಚಂದದಿ ಕಲಿಸುತ
ಉತ್ತಮ ಶಿಕ್ಷಣ ನೀಡುವರು
ಪರಿಸರ ಅರಿವನು
ಮೂಡಿಸಿ ಮನದಲಿ
ಪಠ್ಯೇತರ ಚಟುವಟಿಕೆಗಳ ನಡೆಸುವರು
ನಮ್ಮಯ ಶಾಲೆಯಲಿ
ಕಲಿಯುತ ನಾವು
ಭಾರತ ಕೀರ್ತಿಯ ಹಬ್ಬಿಸುವೆವು
ಪಂಕಜಾ.ಕೆ.
Comments
Post a Comment