ಜೀವನ (ಶರ ಷಟ್ಪದಿ)
ನನ್ನಯ ಬಾಳದು
ನಿನ್ನಯ ಜತೆಯಲಿ
ಹೊನ್ನಿನ ತೆರದಲಿ ಹೊಳೆಯುವುದು
ಬಣ್ಣವು *ತುಂಬಿದ*
ಹಣ್ಣಿನ ತೆರದಲಿ
ಮುನ್ನಿನ ದಿನಗಳು ಕಳೆಯುವುದು
ಕಾಡುಗಳೆಡೆಯಲಿ
ನಾಡಿನ ಬದಿಯಲಿ
ಬೀಡಲಿ ಜೀವನ ಸಾಗುವದು
ಕಾಡಿದ ನೆನಪನು
ಬಾಡಲು ಬಿಡುತಲಿ
*ಹಾಡುತ* ದಿನಗಳು *ಕಳೆಯುವುವು*
ಪ್ರೀತಿಯ ತೋರುತ
ನೀತಿಯ *ಕಲಿಯುತ*
ಭೀತಿಯ *ಕಾಣದೆ* ಕಳೆಯುವುದು
ಖ್ಯಾತಿಯ ಬಯಸದೆ
ಮಾತಿಗೆ ತಪ್ಪದ
ರೀತಿಯ ನಡೆಯಲಿ ಸಾಗುವರು
ಬಣ್ಣನೆ ಮಾಡುತ
ಸಣ್ಣಗೆ ನಗುತಲಿ
ಕಣ್ಣಲಿ ಒಲವನು ಸುರಿಸುವರು
ಹೆಣ್ಣಿನ ಮನವನು
ತಣ್ಣಗೆ ತಿಳಿಯುತ
ಬಣ್ಣವ ಬಾಳಿಗೆ ತುಂಬುವರು
ನಾಳೆಯ ದಿನದಲಿ
ಬಾಳಿನ ನೆಮ್ಮದಿ
ಸಾಲವ ಮಾಡದೆ ದುಡಿಯುವರು
ಸೋಲಿನ ದಿನಗಳು
ಕಾಲನ ತೆರದಲಿ
ಬಾಳನು ಕಾಡಲು ಸುಖವಿಹುದೆ
ಪಂಕಜಾ.ಕೆ
Comments
Post a Comment